ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುವ ನಲ್ಲಿಯಿಂದ ಲುಕ್ಸಾನು

Last Updated 7 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮನೆಯಲ್ಲಿ ಸದಾ ಖುಷಿ, ಸಂತೋಷ ಇರಬೇಕೆಂದರೆ ಕೆಟ್ಟ ಶಕ್ತಿಗಳು ಮನೆ ಒಳಗೆ ಸುಳಿಯಬಾರದು. ಮನೆಯನ್ನು ಶುಚಿಯಾಗಿಡುವ ಜೊತೆಗೆ ಮನಸ್ಸು ಶುದ್ಧವಾಗಿದ್ದರೆ ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸಬಹುದು ಎನ್ನುತ್ತದೆ ವಾಸ್ತು.

* ಮನೆಯ ಬಾಗಿಲಿಗೆ ಹತ್ತಿರವೇ ಚಪ್ಪಲಿಗಳನ್ನು ಇಡಬೇಡಿ. ಮನೆ ಅಂಗಳವನ್ನು ಪ್ರತಿದಿನ ಗುಡಿಸಿ ಶುಚಿಯಾಗಿ ಇಡುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಸುಳಿಯುವುದಿಲ್ಲ.

* ಶಬ್ದ, ದೂಳಿಗೆ ಹೆದರಿ ಹಲವರು ಮನೆಯ ಕಿಟಕಿಯನ್ನು ತೆರೆಯುವುದೇ ಇಲ್ಲ. ಇದು ತಪ್ಪು. ಮನೆ ಒಳಗೆ ಗಾಳಿ, ಬೆಳಕು ಸರಾಗವಾಗಿ ಬರಲು ಅನುವು ಮಾಡಬೇಕು. ಶುದ್ಧ ಗಾಳಿ ಮನಸ್ಸನ್ನು ಉಲ್ಲಸಿತಗೊಳಿಸುವ ಜೊತೆಗೆ ಸಕಾರಾತ್ಮಕ ಶಕ್ತಿ ಮನೆಯಲ್ಲಿ ಇರುವಂತೆ ಮಾಡುತ್ತದೆ.

* ಬಳಕೆ ಮಾಡದ ವಸ್ತುಗಳನ್ನು ಅನವಶ್ಯಕವಾಗಿ ಮನೆಯಲ್ಲಿ ಇಟ್ಟುಕೊಳ್ಳದಿರಿ. ಕೋಣೆಗಳನ್ನುಶುಚಿಯಾಗಿ ಇಡುವುದರಿಂದ ಮನೆಯಲ್ಲಿ ಒಳಿತಿನ ಕಂಪನಗಳು ಹರಡುತ್ತವೆ

* ಬಳಕೆ ಮಾಡದ ಸಂದರ್ಭದಲ್ಲಿ ಸ್ನಾನದ ಕೋಣೆಯ ಬಾಗಿಲು ಮುಚ್ಚಬೇಕು. ಕಮೊಡ್‌ ಸೀಟ್‌ ಮುಚ್ಚಿರಬೇಕು

* ಮುರಿದ ಪೀಠೋಪಕರಣ, ಗಾಜುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು

* ನೀರಿಗೂ ಸಂಪತ್ತಿಗೂ ಸಂಬಂಧವಿದೆ. ನಲ್ಲಿ ಹಾಳಾಗಿ ನೀರು ತೊಟ್ಟಿಕ್ಕುವುದು ಕುಟುಂಬದ ಉಳಿತಾಯಕ್ಕೆ ಸಂಚಕಾರ. ಇದರಂತೆ ದುಡ್ಡು ಕೂಡ ಸೋರಿಹೋಗುತ್ತದೆ ಎಂಬ ಮಾತಿದೆ

* ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಗಡಿಯಾರ ಇರಿಸಿ. ಹಾಳಾಗಿರುವ ಗಡಿಯಾರಗಳನ್ನು ಮನೆಯಲ್ಲಿ ಇಡಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT