ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಿಯಲಿದೆ ಬುರ್ಜ್‌ ಖಲೀಫಾ ದಾಖಲೆ

Last Updated 7 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ವಿಶ್ವದ ಅತಿ ಎತ್ತರದ ಕಟ್ಟಡ ಯಾವುದು ಎಂದು ಕೇಳಿದರೆ ಬುರ್ಜ್‌ ಖಲೀಫಾ (2,716 ಅಡಿ) ಎಂದು ಹೇಳಬಹುದು. ಆದರೆ ಬುರ್ಜ್‌ ಖಲೀಫಾ ಹೆಸರಲ್ಲಿ ಇರುವ ಈ ದಾಖಲೆ ಇನ್ನು ಮೂರು ವರ್ಷದಲ್ಲಿ ಅಳಿಯಲಿದೆ.

ಬುರ್ಜ್‌ ಖಲೀಫಾದಿಂದ ಸ್ವಲ್ಪ ದೂರದಲ್ಲೇ ಮತ್ತೊಂದು ಎತ್ತರದ ಕಟ್ಟಡ ನಿರ್ಮಿಸಿ ತನ್ನ ದಾಖಲೆಯನ್ನು ತಾನೇ ಮುರಿಯಲು ದುಬೈ ಯೋಜನೆ ರೂಪಿಸಿ, ಕಾರ್ಯರೂಪಕ್ಕೆ ತರುತ್ತಿದೆ. ದುಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ‘ಎಮ್ಮಾರ್ ಪ್ರಾಪರ್ಟಿಸ್‌’ ಸಂಸ್ಥೆ ಈ ಕಟ್ಟಡವನ್ನು ನಿರ್ಮಿಸುತ್ತಿದೆ. (ಇದೇ ಸಂಸ್ಥೆ ಬುರ್ಜ್‌ ಖಲೀಫಾ ಕಟ್ಟಡವನ್ನು ನಿರ್ಮಿಸಿತ್ತು) ಶಾಂಟಿಯಾಗೋ ಕುಲಟ್ರವ ವಾಲ್ಸ್ ಆರ್ಕಿಟೆಕ್ಚರ್ ಸಂಸ್ಥೆ ಕಟ್ಟಡದ ವಿನ್ಯಾಸವನ್ನು ರಚಿಸಿದೆ.

ಇದು ಮರುಭೂಮಿ ಪ್ರದೇಶವಾಗಿರುವುದರಿಂದ ಇಲ್ಲಿನ ನೆಲ ಹೆಚ್ಚು ನೆಲ ಮರಳಿನಿಂದ ಕೂಡಿದೆ. ಹೀಗಾಗಿ ಕಟ್ಟಡ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಲಾಗಿದೆ.

**

ಕಟ್ಟಡದ ವಿಶೇಷ
* ಕಟ್ಟಡದ ಆಕಾರ ಮಲ್ಲಿಗೆ ಹೂವನ್ನು ಹೋಲುತ್ತದೆ.
* ಬುರ್ಜ್‌ ಖಲೀಫಾ ಕಟ್ಟಡಕ್ಕಿಂತ 300 ಅಡಿ ಹೆಚ್ಚು ಎತ್ತರ.
* ಭದ್ರ ಬುನಾದಿಗಾಗಿ 16 ಲಕ್ಷ ಘನ ಅಡಿ ಕಾಂಕ್ರೀಟ್‌ ಹಾಕಲಾಗಿದೆ.
* ಒಟ್ಟು110 ಕಿ.ಮೀ ಉದ್ದದ ಕಬ್ಬಿಣದ ಸರಳುಗಳನ್ನು ಬಳಸಲಾಗುತ್ತದೆ.
* ಈ ಕಟ್ಟಡದಲ್ಲಿ 360 ಡಿಗ್ರಿ ಕೋನದಲ್ಲಿ ದುಬೈ ನಗರವನ್ನು ವೀಕ್ಷಿಸಲು 10 ವೀಕ್ಷಣಾ ಕೇಂದ್ರಗಳು ಇರಲಿವೆ.
* ಕಟ್ಟಡದೊಳಗೆ ಹಲವು ಗಿಡಗಳು, ಮರಗಳನ್ನು ಬೆಳೆಸಿ ಹಸಿರುಮಯವಾಗಿ ಮಾಡಲಾಗುತ್ತದೆ.
* ಸದಾ ಹಿತಕರ ಮತ್ತು ತಂಪು ವಾತಾವರಣ ಇರುವಂತೆ ವ್ಯವಸ್ಥೆ ಮಾಡಲಾಗುತ್ತೆ.
* ಕಟ್ಟಡದ ಕೆಲವು ಭಾಗಗಳಲ್ಲಿರುವ ಬಾಲ್ಕನಿಗಳನ್ನು ಅಗತ್ಯವೆನಿಸಿದಾಗ ಮಾತ್ರ ಕಟ್ಟಡದಿಂದ ಹೊರಗೆ ತರಬಹುದು. ಇಲ್ಲದಿದ್ದರೆ ಒಳಗೆ ಇಡಬಹುದು.
* 2020ರಲ್ಲಿ ಆರಂಭವಾಗುವ ದುಬೈ ಎಕ್ಸ್‌–ಪೋ ಉದ್ಘಾಟನಾ ಸಮಯಕ್ಕೆ ಇದನ್ನು ಲೋಕಾರ್ಪಣೆ ಮಾಡಲು ದುಬೈ ಸರ್ಕಾರ ನಿರ್ಧರಿಸಿದೆ.
* 18–20 ಅಂತಸ್ತುಗಳು ಶಾಪಿಂಗ್ ಕಾಂಪ್ಲೆಕ್ಸ್‌, ರೆಸ್ಟೋರೆಂಟ್‌, ಹೋಟೆಲ್‌ಗಳಿಗೆ ಮೀಸಲು.

**
6.4 ಕೋಟಿ ಚ.ಅಡಿ ಕಟ್ಟಡದ ವಿಸ್ತೀರ್ಣ
3045 ಅಡಿ ಕಟ್ಟಡದ ಎತ್ತರ
236 ಅಡಿ ಕಟ್ಟಡದ ತಳಪಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT