ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಗಡ್ಡ ನಿಮಗೆ ಒಪ್ಪುತ್ತಾ...

Last Updated 9 ಸೆಪ್ಟೆಂಬರ್ 2017, 5:02 IST
ಅಕ್ಷರ ಗಾತ್ರ

–ಸುಂದರಿ

ಲವರಿಗೆ ಗಿಡ್ಡ ಗಡ್ಡ ಇಷ್ಟ. ಕೆಲವರು ಗಡದ್ದಾಗಿ ಗಡ್ಡ ಬಿಟ್ಟು ಕುರುಚಲು ಗಡ್ಡದವರ ಹೊಟ್ಟೆ ಉರಿಸುವುದೂ ಉಂಟು. ವಾರಕ್ಕೊಮ್ಮೆ ಟ್ರಿಮ್‌ ಮಾಡೋ ಕಷ್ಟಾನೇ ಬೇಡಪ್ಪಾ ಎಂದು ಗಡ್ಡದ ಸಹವಾಸಕ್ಕೇ ಹೋಗದವರೂ ಇದ್ದಾರೆ. ಅದರ ಪಾಡಿಗೆ ಬೆಳೆಯಲು ಬಿಟ್ಟವರ ಸೋಮಾರಿತನವನ್ನು ಆ ಗಡ್ಡ ಲೋಕಕ್ಕೇ ಗೊತ್ತು ಮಾಡಿಬಿಡುವುದೂ ಉಂಟು. ಪ್ರತಿ ಬಾರಿ ಗಡ್ಡ ಟ್ರಿಮ್‌ ಮಾಡಿಸಿಕೊಂಡಾಗಲೆಲ್ಲ ಹೊಸ ಸ್ಟೈಲ್‌ನ ಮೊರೆ ಹೋಗುವ ಪ್ರಜ್ಞಾವಂತರೂ ಕಮ್ಮಿಯೇನಿಲ್ಲ.

ಗಡ್ಡದ ಹಿಂದೆ ಸೌಂದರ್ಯದ ಗುಡ್ಡವೇ ಇದೆ ಕಣ್ರೀ. ಹೆಣ್ಣು ಮಕ್ಕಳು ಗಡ್ಡಧಾರಿಗಳನ್ನು ಮೆಚ್ಚುವಷ್ಟು ‘ಚಾಕೊಲೇಟ್‌ ಹೀರೊ’ನಂತಹ ನುಣುಪು ಕೆನ್ನೆಯವರನ್ನು ಇಷ್ಟಪಡುವುದಿಲ್ಲ ಎಂಬ ಗುಟ್ಟನ್ನು ಸಮೀಕ್ಷೆಯೊಂದು ರಟ್ಟುಮಾಡಿತ್ತು.

ಇಷ್ಟಕ್ಕೂ ಯಾರು ಹೇಗೆ ಬೇಕಾದರೂ ಗಡ್ಡ ಬೆಳೆಸಬಹುದು ಎಂದು ಈಗ ಬೇಕಾಬಿಟ್ಟಿ ಗಡ್ಡ ಬೆಳೆಸುವ ಹಾಗಿಲ್ಲ. ಪುರುಷರ ಫ್ಯಾಷನ್‌ ಜಗತ್ತು ಹೊಸ ಆಯಾಮದಲ್ಲಿ ಬೆಳಗುತ್ತಿರುವ ಈ ಸಂಕ್ರಮಣ ಕಾಲದಲ್ಲಿ ಗಡ್ಡದ ಪರಿಭಾಷೆ ಬದಲಾಗದೇ ಇರುತ್ತದಾ? ಖಂಡಿತಾ ಆಗಿದೆ. ಗಡ್ಡ, ಮುಖದ ಆಕಾರಕ್ಕೆ ತಕ್ಕುದಾಗಿದ್ದರೇ ಫ್ಯಾಷನ್‌ ಜಗತ್ತಿಗೆ ನೀವು ಅಪ್‌ಡೇಟ್‌ ಆಗಿದ್ದೀರಿ ಎಂದು ಲೆಕ್ಕ.

‌ಇಲ್ಲದಿದ್ದರೆ, ನಿಮಗೆ ಸೌಂದರ್ಯಪ್ರಜ್ಞೆಯೇ ಇಲ್ಲ ಎಂದು ಕೊಂಕು ಮಾತು ಎದುರಿಸಬೇಕಾದೀತು.ಅರೆ ನೀವ್ಯಾಕೆ ಗಡ್ಡ ಕೆರೆದುಕೊಳ್ತೀರಿ? ನಿಮ್ಮ ಮುಖಕ್ಕೆ ಆ ಗಡ್ಡ ಹೊಂದುತ್ತದೆಯೋ ಇಲ್ಲವೋ ಎಂಬ ಅನುಮಾನವೇ? ಹಾಗಿದ್ದರೆ ಬನ್ನಿ, ಗಡ್ಡದ ಹಿಂದಿರುವ ಸೌಂದರ್ಯದ ಗುಡ್ಡ ಬಗೆದು ನಿಮ್ಮ ಮುಖಕ್ಕೆ ಹೊಂದುವ ಆಕಾರ ಯಾವುದು ನೋಡೋಣ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT