ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ವಿಂಗಡಣೆ: ಶಿರಹಟ್ಟಿಗೆ ಅನ್ಯಾಯ– ಸ್ಥಳೀಯರ ಆರೋಪ

Last Updated 10 ಸೆಪ್ಟೆಂಬರ್ 2017, 4:27 IST
ಅಕ್ಷರ ಗಾತ್ರ

ಶಿರಹಟ್ಟಿ: ಮಹಾರಾಷ್ಟ್ರ ರಾಜ್ಯದ ಸಾಂಗಲಿ ಸಂಸ್ಥಾನದಲ್ಲಿ ಶಿರಹಟ್ಟಿ ರಾಜಕೀಯ, ಧಾರ್ಮಿಕ  ಹಾಗೂ ಶೈಕ್ಷಣಿಕ ಕೇಂದ್ರ ಆಗಿತ್ತು. ಅಖಂಡ ಧಾರವಾಡ ಜಿಲ್ಲೆಯಲ್ಲಿ ಶಿರಹಟ್ಟಿಗೆ ವಿಶೇಷ ಸ್ಥಾನಮಾನ ಇತ್ತು. ಮರಿತಮ್ಮಪ್ಪ ಡಬಾಲಿ, ಶಿವನಗೌಡ್ರ ಪಾಟೀಲ, ವಿ.ವಿ. ಕಪ್ಪತ್ತನವರ, ಸಿದ್ದರಾ ಮಪ್ಪ ಅಕ್ಕಿ ಮತ್ತು ಅವರ ಹಳೆಯ ತಲೆಮಾರುಗಳು ಹಿರಿಯರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಿದ್ದರು. 

‘ಸದ್ಯ ತಾಲ್ಲೂಕು ವಿಂಗಡಣೆಯ ನೆಪದಲ್ಲಿ ಶಿರಹಟ್ಟಿ ತಾಲ್ಲೂಕಿಗೆ ಅನ್ಯಾಯ ಆಗುತ್ತಿದ್ದರೂ ‘ಅಭಿವೃದ್ಧಿ’ ನೆಪದಲ್ಲಿ ಸರ್ಕಾರ ಅವೈಜ್ಞಾನಿಕ ಕ್ರಮ ಕೈಗೊಳ್ಳು ತ್ತಿದೆ ಕೆಲ ಪಟ್ಟಭದ್ರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಹಸ್ತಕ್ಷೇಪದಿಂದ ಮಾಗಡಿ ಗ್ರಾಮ ಪಂಚಾಯ್ತಿಯನ್ನು ಲಕ್ಷ್ಮೇಶ್ವರ ತಾಲ್ಲೂಕಿಗೆ ಸೇರಿಸುವ ಹುನ್ನಾರ ನಡೆದಿದೆ’ ಎಂಬುದು ಸ್ಥಳೀಯರ ವಾದ.

‘ಈಗಿರುವ ಶಿರಹಟ್ಟಿ ತಾಲ್ಲೂಕಿನ ಒಟ್ಟು 87 ಗ್ರಾಮಗಳ ಪೈಕಿ 40 ಗ್ರಾಮ ಗಳನ್ನು ಲಕ್ಷ್ಮೇಶ್ವರ ತಾಲ್ಲೂಕಿಗೆ ಹಾಗೂ 47 ಗ್ರಾಮಗಳನ್ನು ಶಿರಹಟ್ಟಿ ತಾಲ್ಲೂಕಿಗೆ ಸೇರಿಸಲಾಗುತ್ತಿದೆ. ಹೋಬಳಿಗೆ ಅನು ಸಾರವಾಗಿ ಹಳ್ಳಿಗಳ ಹಂಚಿಕೆ ಕಾರ್ಯ ನಡೆಯಲಿದೆ’ ಎನ್ನುತ್ತಾರೆ ತಹಶೀಲ್ದಾರ್‌ ಎ.ಎಂ. ಅಮರಾವದಗಿ.

ಹೋರಾಟಕ್ಕೆ ಅಣಿಯಾದ ಕುಂದು ಕೊರತೆ ನಿವಾರಣಾ ಹೋರಾಟ ಸಮಿತಿ: ‘ಸರ್ಕಾರದ ನಡೆ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಸೆ. 11ರಂದು ಕುಂದು ಕೊರತೆ ಹೋರಾಟ ಸಮಿತಿ ಹಾಗೂ ತಾಲ್ಲೂಕಿನ ಕನ್ನಡ ಪರ ಸಂಘಟನೆಗಳು ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಶಿರಹಟ್ಟಿ ಬಂದ್‌ ಆಚರಿಸಲು  ತೀರ್ಮಾನಿಸಲಾಗಿದೆ’ ಎಂದು ವೇದಿಕೆ ಅಧ್ಯಕ್ಷ ಸಿದ್ರಾಮಯ್ಯ ಹಾವೇರಿ ಮಠ, ಅಕ್ಬರ್ ಯಾದಗಿರಿ, ಮುನ್ನಾ ಢಾಲಾಯತ್, ಸಂಜುಹೆಸರಡ್ಡಿ, ಜಾಕೀರ್ ಕೋಳಿವಾಡ, ಶ್ರೀನಿವಾಸ ಬಾರ್ಬರ್, ಕನ್ನಡಪರ ಸಂಘಟನೆಗಳ ಪ್ರಮುಖರಾದ ಮಹಮ್ಮದ್‌ರಫೀಕ್‌ ಕೆರೆಮನಿ, ಶ್ರೀನಿ ವಾಸ ಕಪಟಕರ, ಮನ್ಸೂರ್‌ ಮಕಾನ ದಾರ ತಿಳಿಸಿದ್ದಾರೆ.

ಶಿರಹಟ್ಟಿ ಅಭಿವೃದ್ಧಿ ವಿಷಯದಲ್ಲಿ ಹಿಂದದಿರಲು ರಾಜಕೀಯ ಪಕ್ಷಗಳ ಮುಖಂಡರ ಇಚ್ಚಾಶಕ್ತಿ ಕೊರತೆಯೇ ಪ್ರಮುಖ ಕಾರಣ. ಶಾಸಕ ರಾಮಕೃಷ್ಣ ದೊಡ್ಡಮನಿ ಅವರಿಂದಲೂ ನಮಗೆ ನ್ಯಾಯ ದೊರಕಲಿಲ್ಲ. ಮಾಜಿ ಶಾಸಕ ಜಿ.ಎಸ್‌ ಗಡ್ಡದೇವರಮಠ ಅವರೂ ನಮಗೆ ಅನ್ಯಾಯ ಮಾಡಿದ್ದಾರೆ. ತಹಶೀ ಲ್ದಾರ್‌ ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ಅನಾಹುತಕ್ಕೆ ಜಿಲ್ಲಾಡಳಿತ ಹೊಣೆಯಾಗ ಲಿದೆ ಎಂದು ಹಾವೇರಿಮಠ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT