ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕವಚನ ಪ್ರಶ್ನೆಯೇ ಅಲ್ಲ

Last Updated 10 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷ್ಣರಾಜೇಂದ್ರ ಒಡೆಯರ್‌ ಅವರನ್ನು ಏಕವಚನದಲ್ಲಿ ಸಂಬೋಧಿಸಿದರು ಎಂಬುದು ಒಂದು ಸಮಸ್ಯೆಯೇ ಅಲ್ಲ. ನಮ್ಮ ಮುಖ್ಯಮಂತ್ರಿ ಹಳ್ಳಿ ಮೂಲದವರು. ಹಳ್ಳಿಯವರ ಬಾಯಲ್ಲಿ ‘ಲೋ’ ‘ಲೇ’ ಅಕ್ಷರ ಬಳಕೆ ಸಾಮಾನ್ಯ. ಆದರೆ ಅವರೇ ಹೇಳಿರುವಂತೆ ಹಿಂದಿನ ರಾಜರು ಕೊಟ್ಟಿರುವುದು ಅವರ ಮನೆಯಿಂದ ಅಲ್ಲ; ಅದು ರಾಜ್ಯದ ಜನರಿಗೆ ಸೇರಿದ್ದು. ಪರಿಸ್ಥಿತಿ ಹೀಗಿರುವಾಗ ಕೆಲವು ‘ಭಾಗ್ಯ’ಗಳನ್ನು ದಯಪಾಲಿಸಿದ ಈಗಿನ ರಾಜ್ಯ ಸರ್ಕಾರ ‘ಇವು ನಮ್ಮ ಕೊಡುಗೆ’ ಎಂದು ಹೇಳಿಕೊಳ್ಳುತ್ತಿರುವುದು ಎಷ್ಟು ಸರಿ?

ಇದೇ ಪ್ರಶ್ನೆ ಮುಖ್ಯಮಂತ್ರಿ ಅವರ ಮಾತಿನ ಧಾಟಿಯಲ್ಲಿಯೇ ‘ಟಿಪ್ಪು’ ಅವರೂ ರಾಜ್ಯದ ಜನರಿಗೋಸ್ಕರ ಕೊಡುಗೆ ನೀಡಿದ್ದರೆ ಅದು ಕೂಡ ‘ಜನರಿಂದ ಜನರಿಗೆ’. ಅದಕ್ಕೆ ಅವರ ಜಯಂತಿ ಏಕೆ? ಇನ್ನು ಇದ್ದವರಿಂದ ಜಮೀನನ್ನು ಸ್ವಾಧೀನಪಡಿಸಿಕೊಂಡು ಭೂರಹಿತರಿಗೆ ಹಂಚಿದ್ದು ಏಕೆ? ಈ ಸಾಧನೆಯಿಂದ ಜಮೀನು ಕಳೆದುಕೊಂಡ ದೇವಸ್ಥಾನಗಳು, ಸಾಹುಕಾರರು, ಯಜಮಾನರು ಅನಾಥರಾದರು! ಇರಲಿ. ಆದರೆ ಫಲಾನುಭವಿಗಳಾದರೂ ಉದ್ಧಾರ
ವಾದರೆ? ಸರ್ಕಾರ ಇದರ ಸಮೀಕ್ಷೆ ನಡೆಸಿದೆಯೇ? ಕೆಂಪೇಗೌಡರ ಬದಲಿಗೆ ಬೇರೊಬ್ಬ ‘ನಾಯಕ’ರ ಫೋಟೊಗೆ ಪೂಜೆ ಸಲ್ಲಿಸುವ ನಮ್ಮ ರಾಜಕಾರಣಿಗಳಿರುವಾಗ ಇಂತಹ ಜಯಂತಿಗಳಿಗೆ ಎಂಥ ಮಾನ್ಯತೆ ಬರಬಹುದು?

ಇನ್ನೊಂದು ಪ್ರಶ್ನೆ. ಜನರಿಂದ ಪಡೆದದ್ದನ್ನು ಜನರಿಗೇ ಕೊಡುತ್ತಿರುವಾಗ ‘ಇಂದಿರಾ’ ಹೆಸರೇಕೆ? ಜನತಾ ಕ್ಯಾಂಟೀನ್‌ ಸಮಂಜಸವಾಗಿತ್ತಲ್ಲವೇ? ಇಲ್ಲ; ಈ ಹೆಸರಿನಿಂದ, ಕ್ಯಾಂಟಿನ್‌ ಶ್ರೇಯಸ್ಸು ದೇವೇಗೌಡರಿಗೆ ಹೋಗುವ ಅನುಮಾನ ಇವರಿಗೆ!

-ಜನಾರ್ದನ, ಕಾರವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT