ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆಯಿಂದ ಕೋಡಿ ಬಿದ್ದ ಕೆರೆಗಳು

Last Updated 11 ಸೆಪ್ಟೆಂಬರ್ 2017, 10:02 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನಲ್ಲಿ ಶನಿವಾರ ರಾತ್ರಿ ಭಾರಿ ಮಳೆ ಸುರಿದಿದ್ದು ಜಲಪ್ರಳಯ ಉಂಟಾಗಿದ್ದು, ತಾಲ್ಲೂಕಿನ ಬಹುತೇಕ ಕೆರೆಗಳು ತುಂಬಿ ಹರಿದಿವೆ. ಪಟ್ಟಣದ ನಟರಾಜ ಬಡಾವಣೆಯ ನೀಲಕಂಠ ಶಾಸ್ತ್ರಿ ಕೆರೆ, ಹೊಂಬಾಳಮ್ಮನ ಪೇಟೆ ಕೆರೆ, ಭಾರ್ಗಾವತಿ ಕೆರೆ, ಅಗಲ ಬತ್ತಿಕೆರೆ, ತಿಪ್ಪಸಂದ್ರ, ಬಗಿನಗೆರೆ ಕೆರೆಗಳು ತುಂಬಿ ಕೋಡಿ ಬಿದ್ದಿವೆ, ಹೊಂಬಾಳಮ್ಮನಪೇಟೆ, ವ್ಯಾಸ ರಾಯನ ಪಾಳ್ಯ, ನೇತೇನಹಳ್ಳಿ, ಉಡುವೆಗೆರೆಯ ಗ್ರಾಮಗಳ ತೋಟಗಳಿಗೆ ನೀರು ನುಗ್ಗಿದೆ. ಇದರಿಂದ ಭಾರಿ ಪ್ರಮಾಣದ ತೋಟ ನಾಶವಾಗಿವೆ ಎಂದು ಉಡುವೆಗೆರೆ ವಿದ್ವಾನ್‌ ಚಂದ್ರಶೇಖರ ಶಾಸ್ತ್ರಿ, ಪುಟ್ಟನರ ಸಿಂಹಯ್ಯ, ಹೊನ್ನ ನರಸಿಂಹಯ್ಯ, ಬಸವಯ್ಯ, ಆಂಜನಪ್ಪ, ಈರಪ್ಪ, ರಾಮಣ್ಣ ತಿಳಿಸಿದರು.

ಶೇ 10 ಫಸಲು ನಾಶ: ಶನಿವಾರ ರಾತ್ರಿ ಸುರಿದ ಭಾರಿ ಮಳೆ ಸುರಿದಿದೆ, ಶೇ.10ರಷ್ಟು ಫಸಲು ನಾಶವಾಗಿದೆ ಎಂದು ತಹಶೀಲ್ದಾರ್‌ ಲಕ್ಷ್ಮೀಸಾಗರ್‌ ತಿಳಿಸಿದರು,
ಶನಿವಾರ ಸುರಿದ ಭಾರಿ ಮಳೆಯಿಂದಾಗಿ ನಷ್ಟಕ್ಕೆ ಸಿಲುಕಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.‌

ತೆಂಗು ಅಡಿಕೆ, ಬಾಳೆಯ ತೋಟಗಳು ನೀರಿನಿಂದ ಆವೃತವಾಗಿವೆ, ಕೋಟ್ಯಂತರ ಬೆಲೆಬಾಳುವ ಫಸಲು ನಾಶವಾಗಿದೆ, ಪರಂಗಿ ಚಿಕ್ಕನ ಪಾಳ್ಯದ ಜಯಲಕ್ಷ್ಮಮ್ಮ ಏಡಿಯಪ್ಪ, ಮುತ್ತಯ್ಯ, ಗುಮ್ಮಸಂದ್ರದ ರಾಮಚಂದ್ರ ಯ್ಯ, ಗಂಗಾಧರಯ್ಯ, ತಗಚಕುಪ್ಪೆಯ ಲಕ್ಕಪ್ಪ ತಿಮ್ಮಕ್ಕ ಅವರ ಮನೆ ಮತ್ತು ದನದ ಕೊಟ್ಟಿಗೆ, ಕುಸಿದು ಬಿದ್ದಿವೆ ಎಂದರು.

ಶ್ರೀಪತಿಹಳ್ಳಿಯಲ್ಲಿ ಎರಡು ಮನೆಗಳು ಭಾಗಷಃ ನೆಲಕ್ಕೆಉರುಳಿವೆ, ದುಬ್ಬ ಕೊಟ್ಟಿಗೆ ದಲಿತ ಕಾಲೊನಿಯಲ್ಲಿ ನರಸಯ್ಯ ಅವರ ಮನೆ ಉರುಳಿ ಬಿದ್ದು ನರಸಿಂಹಯ್ಯ ಅವರು ಗಾಯಗೊಂಡಿದ್ದಾರೆ, ಹೊನ್ನಮ್ಮ ಅವರ ಮನೆ ಸಹ ಮಳೆಯಿಂದಾಗಿ ಕುಸಿದಿದೆ ಎಂದು ತಿಳಿಸಿದರು.

ಬಾಚೇನ ಹಟ್ಟಿ ಬಳಿ ಈರಚಿಕ್ಕಯ್ಯನ ಕಟ್ಟೆ ಯ ಏರಿ ಕುಸಿದು ನೀರು ಹರಿದ ಕಾರಣ ನರಸಿಂಹಯ್ಯ ಅವರಿಗೆ ಸೇರಿರುವ 5 ಎಕರೆ ರಾವಿ ಫಸಲು ನೀರಿನಲ್ಲಿ ಮುಳುಗಿ ನಾಶವಾಗಿದೆ ಎಂದು ಗ್ರಾಮಪಂಚಾಯಿತಿ ಸದಸ್ಯ ಶಿವಮೂರ್ತಿ, ಮಾರತಿ ಯಾದವ್‌ ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್‌ರಿಗೆ ತಿಳಿಸಿದರು.

ರಾಜಸ್ವ ನಿರೀಕ್ಷಕ ಗಂಗಮಾರಯ್ಯ, ರಾಮು ಇದ್ದರು. ಪರಂಗಿಚಿಕ್ಕನಪಾಳ್ಯದ ಶಿವಕುಮಾರ್‌ ಅವರ 2ಎಕರೆ ಬಾಳೆ ತೋಟಕ್ಕೆ ನೀರು ನುಗ್ಗಿ ಫಸಲು ನಾಶವಾಗಿದೆ. ಯಾಲಕ್ಕಯ್ಯ ಅವರ ಮನೆಯ ಒಳಗೆ ನೀರು ನುಗ್ಗಿ ಭಾರಿ ಹಾನಿ ಉಂಟಾಗಿದೆ, ಮಂಜಮ್ಮ, ಶಿವಣ್ಣ, ಪಾರ್ವತಮ್ಮ, ಶಿವರಾಮಯ್ಯ ಅವರ ಮನೆಗೆ ನೀರು ನುಗ್ಗಿದ್ದ ಆಹಾರ ಪದಾರ್ಥಗಳು ನಷ್ಟವಾಗಿವೆ ಎಂದು ತಹಶೀಲ್ದಾರರಿಗೆ ಪಿಸಿ ಪಾಳ್ಯದ ಜನರು ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT