ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಾಣಿ ಅಂಗಡಿಗಳಿಗೆ ಸ್ನ್ಯಾಪ್‌ಬಿಜ್‌ ಟರ್ಬೊ

Last Updated 12 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕಿರಾಣಿ ಅಂಗಡಿಗಳು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ಬರಲು ಅನುಕೂಲ ಆಗುವಂತಹ ‘ಟರ್ಬೊ’ ತಂತ್ರಜ್ಞಾನವನ್ನು ಸ್ನ್ಯಾಪ್‌ಬಿಜ್‌ ಕಂಪೆನಿ ಬಿಡುಗಡೆ ಮಾಡಿದೆ. ಜಿಎಸ್‌ಟಿಯಿಂದ ಕಿರಾಣಿ ಅಂಗಡಿಗಳಿಗೆ ಡಿಜಿಟಲ್ ತಂತ್ರಜ್ಞಾನ ಅಳವಡಿಕೆ ಅನಿವಾರ್ಯವಾಗಿದೆ. ಇದರಿಂದ ನಮ್ಮ  ತಂತ್ರಜ್ಞಾನಕ್ಕೆ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾರೆ ಸ್ನ್ಯಾಪ್‌ಬಿಜ್‌ ಕಂಪೆನಿಯ ಸ್ಥಾಪಕ ಪ್ರೇಮ್‌ ಕುಮಾರ್‌.

‘ತಂತ್ರಜ್ಞಾನದ ನೆರವಿಲ್ಲದೆ ಜಿಎಸ್‌ಟಿ ಅಳವಡಿಕೆ ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಂದು ಉತ್ಪನ್ನಕ್ಕೂ ಬೇರೆ ಬೇರೆ ತೆರಿಗೆ ದರಗಳಿವೆ. ತೆರಿಗೆ ದರಗಳನ್ನು ತಿಳಿಯಲು ಮತ್ತು ಮಾರಾಟಕ್ಕೆ ಸಂಬಂಧಿಸಿದ ಮಾಹಿತಿ ದಾಖಲಿಸಲು ಅಕೌಂಟಂಟ್‌ರನ್ನು ನೇಮಿಸಿಕೊಳ್ಳುವುದು ಕಷ್ಟ.  ‘ಆಧುನಿಕ ವ್ಯಾಪಾರ ಪದ್ಧತಿ ಮತ್ತು ಇ–ಕಾಮರ್ಸ್‌, ಕಿರಾಣಿ ಅಂಗಡಿಗಳಿಗೆ ಪೈಪೋಟಿ ನೀಡುತ್ತಿವೆ. ಇಂತಹ ವಾತಾವರಣದಲ್ಲಿ ಕಿರಾಣಿ ಅಂಗಡಿಗಳು ಗ್ರಾಹಕರನ್ನು ಕಾಪಾಡಿಕೊಂಡು ವಹಿವಾಟು ಹೆಚ್ಚಿಸಿಕೊಳ್ಳಲು ಹೆಣ
ಗಾಡಬೇಕಿದೆ. ಹೀಗಿರುವಾಗ ಹೊಸ ತೆರಿಗೆ ವ್ಯವಸ್ಥೆ ಜಾರಿಯಾಗಿರುವುದು ಅವರಲ್ಲಿ ತುಸು ಗೊಂದಲ ಮೂಡಿಸಿದೆ. ‘ಸ್ನ್ಯಾಪ್‌ಬಿಜ್‌ ಟರ್ಬೊ’ ಇದಕ್ಕೆ ಉತ್ತಮ ಪರಿಹಾರ ನೀಡಲಿದೆ’ ಎಂದು ಪ್ರೇಮ್‌ ಕುಮಾರ್‌ ವಿಶ್ವಾಸ ವ್ಯಕ್ತಡಿಸಿದ್ದಾರೆ.

‘ಸದ್ಯಕ್ಕೆ 50 ಲಕ್ಷದಿಂದ 60 ಲಕ್ಷದಷ್ಟು ಮಧ್ಯಮ ಗಾತ್ರದ ಕಿರಾಣಿ ಅಂಗಡಿಗಳು ಮಾತ್ರ ಡಿಜಿಟಲ್‌ ಸೌಲಭ್ಯ ಅಳವಡಿಸಿಕೊಂಡಿವೆ. ಸದ್ಯದ ಮಟ್ಟಿಗೆ ಜಿಎಸ್‌ಟಿ ಗೊಂದಲ ಸೃಷ್ಟಿಸಿದೆ. ಆದರೆ, ವ್ಯವಸ್ಥೆ ಜಾರಿಗೆ ಬಂದ ಕೆಲ ತಿಂಗಳುಗಳು ಉರುಳುತ್ತಿದ್ದಂತೆ ಅದರಿಂದ ಆಗುವ ನೈಜ ಲಾಭದ ಅರಿವಾಗಲಿದೆ. ಬಹುಪಾಲು ವರ್ತಕರಿಗೆ ಜಿಎಸ್‌ಟಿಯಿಂದ ಆಗುವ ಲಾಭಗಳ ಅರಿವಿಲ್ಲ. ಹೀಗಾಗಿ ಜಿಎಸ್‌ಟಿಗೆ ನೋಂದಣಿ ಆಗಲು ಮನಸ್ಸು ಮಾಡುತ್ತಿಲ್ಲ. ಅಂತಹ ವರ್ತಕರಿಗೆ ಜಿಎಸ್‌ಟಿಯಿಂದ ಆಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಾಗುವುದು

ಏನಿದು ಟರ್ಬೊ?
ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಮಾಡುವ ಎಲ್ಲಾ ಉತ್ಪನ್ನಗಳ ಜಿಎಸ್‌ಟಿ ದರವನ್ನು ಸ್ವಯಂಚಾಲಿತವಾಗಿ ಲೆಕ್ಕಹಾಕುವ ಸಾಧನ ಇದಾಗಿದೆ. ಗ್ರಾಹಕರಿಗೆ ಉತ್ತಮ ಖರೀದಿ ಅನುಭವ ನೀಡಲು, ವಹಿವಾಟನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು, ಖರೀದಿ ಮತ್ತು ಮಾರಾಟದ ಲೆಕ್ಕಪತ್ರ ಇಡಲು ಡಿಜಿಟಲ್‌ ಟರ್ಬೊ ನೆರವಾಗುತ್ತದೆ. ಒಂದು ಅಂಗಡಿಯಲ್ಲಿ ಟಚ್‌ ಸ್ಕ್ರೀನ್‌ ಮಾನಿಟರ್‌, ಬಾರ್‌ಕೋಡ್‌ ಸ್ಕ್ಯಾನರ್‌ ಮತ್ತು ಒಂದು ಎಲ್‌ಇಡಿ ಪರದೆ ಅಗತ್ಯ.

ಪ್ರಯೋಜನಗಳು
ರಿಟರ್ನ್ ಸಲ್ಲಿಕೆ ಮತ್ತು ಗ್ರಾಹಕರಿಗೆ ಬಿಲ್‌ ನೀಡುವ ಕೆಲಸಗಳೆರಡನ್ನೂ ಟರ್ಬೊ ನಿರ್ವಹಿಸುತ್ತದೆ. ಬಿಲ್ ಮಾಡುವ ಸಂದರ್ಭದಲ್ಲಿಯೇ ಮಾರಾಟ ಮಾಡಿದ ಎಲ್ಲಾ ಉತ್ಪನ್ನಗಳ ದರಕ್ಕೆ ಅನುಗುಣವಾಗಿ ಜಿಎಸ್‌ಟಿ ಲೆಕ್ಕ ಹಾಕುತ್ತದೆ. ಸ್ನ್ಯಾಪ್‌ಬಿಜ್‌, ಎಸ್‌ಎಪಿಯೊಂದಿಗೆ ಸಹಭಾಗಿತ್ವ ಹೊಂದಿದ್ದು, ನೇರವಾಗಿ ಜಿಎಸ್‌ಟಿ ರಿಟರ್ನ್‌ ಸಲ್ಲಿಸಬಹುದು. ಟರ್ಬೊ ಮೂಲಕ ಕಿರಾಣಿ ಅಂಗಡಿಗಳು ಉಚಿತವಾಗಿ ಜಿಎಸ್‌ಟಿಗೆ ವಲಸೆ ಬರಬಹುದು.

ಜಿಎಸ್‌ಟಿ ಕಾಯ್ದೆಯಲ್ಲಿ ₹75 ಲಕ್ಷದವರೆಗಿನ ವಹಿವಾಟು ನಡೆಸುವ ಸಣ್ಣ ಚಿಲ್ಲರೆ ವರ್ತಕರು ಕಂಪೊಸಿಟ್‌ ಸ್ಕೀಮ್‌ನ ಲಾಭ ಪಡೆಯಬಹುದು. ಮಾರಾಟದ ಒಟ್ಟು ಮೌಲ್ಯದಲ್ಲಿ ಶೇ 1 ರಷ್ಟು ತೆರಿಗೆ ಕಟ್ಟಬೇಕು ಹಾಗೂ ಲೆಕ್ಕಪತ್ರ ನಿರ್ವಹಣೆ ಮತ್ತು ದಾಖಲೆ ಇಡುವ ಅಗತ್ಯವೂ ಇಲ್ಲ. ರಿಟರ್ನ್ ಸಲ್ಲಿಸುವಾಗ ಎದುರಾಗುವ ಅನುಮಾನ, ಸಮಸ್ಯೆಗಳನ್ನು ಬಗೆಹರಿಸಲು ಸ್ನ್ಯಾಪ್‌ಬಿಜ್‌ ಸಹಾಯವಾಣಿ ತೆರೆದಿದೆ.

ನಗದು ರಹಿತ ಖರೀದಿಗೆ ಸಹಕಾರಿ 
ಸ್ಮಾರ್ಟ್‌ ಟಿ.ವಿ ಮೂಲಕ ಜಾಹೀರಾತುಗಳನ್ನು, ಹೊಸ ಉತ್ಪನ್ನಗಳು ಮತ್ತು ಒಟ್ಟಾರೆ ಸ್ಟಾಕ್‌ ಬಗ್ಗೆ ಚಿತ್ರ ಅಥವಾ ವಿಡಿಯೊ ಪ್ರದರ್ಶಿಸುವ ಮೂಲಕ ಗ್ರಾಹಕರನ್ನು ಸೆಳೆಯಬಹುದು. ಸದ್ಯ ದೇಶದಾದ್ಯಂತ ಮೆಟ್ರೊ ಮತ್ತು ಕೆಲವು ಎರಡನೇ ಶ್ರೇಣಿಯ ನಗರಗಳನ್ನೂ ಒಳಗೊಂಡು ಒಟ್ಟಾರೆ 4 ಸಾವಿರ ಕಿರಾಣಿ ಅಂಗಡಿಗಳಿಗೆ ತಾಂತ್ರಿಕ ನೆರವು ನೀಡಲಾಗುತ್ತಿದೆ. ಈ ವರ್ಷಾಂತ್ಯದ ಒಳಗೆ 10 ಸಾವಿರದಿಂದ 15 ಸಾವಿರ ಚಿಲ್ಲರೆ ಅಂಗಡಿಗಳಿಗೆ ತಲುಪುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

ಅಂಕಿ–ಅಂಶ

1.2 ಕೋಟಿ

ದೇಶದಲ್ಲಿರುವ ಚಿಲ್ಲರೆ ಅಂಗಡಿಗಳು

80 ಲಕ್ಷ

ಸಣ್ಣ ಪ್ರಮಾಣದ ಕಿರಾಣಿ ಅಂಗಡಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT