ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು: ಕಾಯಕಲ್ಪಕ್ಕಾಗಿ ಕಾದ ಕಲ್ಯಾಣಿಗಳು

Last Updated 15 ಸೆಪ್ಟೆಂಬರ್ 2017, 9:00 IST
ಅಕ್ಷರ ಗಾತ್ರ

ಮದ್ದೂರು: ಸಮೀಪದ ಆಲೂರು ಗ್ರಾಮದ ಇತಿಹಾಸ ಪ್ರಸಿದ್ಧ ಬೀರೇಶ್ವರ ದೇಗುಲದ ಬಳಿ ಇರುವ ಪುರಾತನ ನೀರಿನ ಕಲ್ಯಾಣಿಗಳು ಕಾಯಕಲ್ಪಕ್ಕಾಗಿ ಕಾದಿವೆ.
ದೇಗುಲದ ಬಳಿಯ ಕೆರೆಯಂಗಳದಲ್ಲಿ ಒಂದು ಕಲ್ಯಾಣಿಯಿದೆ. ಇನ್ನೊಂದು ಬೀರೇಶ್ವರ ತೋಪಿನಲ್ಲಿದೆ. ಈ ಎರಡು ಕಲ್ಯಾಣಿಗಳು ಗಿಡಗಂಟಿಗಳಿಂದ ಆವೃತವಾಗಿದ್ದು, ಹಾವು ಹಲ್ಲಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಕಲ್ಯಾಣಿಯಲ್ಲಿ ಹೂಳು ತುಂಬಿರುವುದರಿಂದ ನೀರು ಸಂಗ್ರಹಕ್ಕೂ ಕುತ್ತು ಬಂದಿದೆ.

ನಿರ್ವಹಣೆ ಕೊರತೆಯಿಂದಾಗಿ ತಡೆಗೋಡೆ ಅಲ್ಲಲ್ಲಿ ಕುಸಿದಿದೆ. ಕೆಲವು ಕಲ್ಲುಗಳು ಕಣ್ಮರೆಯಾಗಿವೆ. ಈ ಹಿಂದೆ ಈ ಕಲ್ಯಾಣಿಯಿಂದಲೇ ದೇವರ ಅಭಿಷೇಕ ಹಾಗೂ ಇತರ ಪೂಜೆಗಳಿಗೆ ನೀರು ಪಡೆಯಲಾಗುತ್ತಿತ್ತು. ಆದರೆ, ಕಲ್ಯಾಣಿಗಳೆರಡೂ ಈಗ ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿವೆ.

‘ಸ್ಥಳೀಯ ಗ್ರಾಮ ಪಂಚಾಯಿತಿ ಈ ಎರಡೂ ಕಲ್ಯಾಣಿಗಳ ಪುನಶ್ಚೇತನಕ್ಕೆ ಮುಂದಾಗಬೇಕು. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಾದರೂ ಕಾಯಕಲ್ಪ ನೀಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT