ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ-ಲಿಂಗಾಯತ ನಡುವೆ ಗೊಂದಲ ಸೃಷ್ಟಿಸಿ, ಲಾಭ ಪಡೆಯಲು ಕಾಂಗ್ರೆಸ್ ಹುನ್ನಾರ: ಶೋಭಾ

Last Updated 16 ಸೆಪ್ಟೆಂಬರ್ 2017, 9:07 IST
ಅಕ್ಷರ ಗಾತ್ರ

ಅಜ್ಜಂಪುರ: ವೀರಶೈವ ಮತ್ತು ಲಿಂಗಾಯತ ಎಂಬ ಭಿನ್ನವಿಲ್ಲ, ಅವೆರಡೂ ಒಂದೇ. ಆದರೆ, ಸಮಾಜವನ್ನು ಹೋಳು ಮಾಡಿ ಅದರ ಲಾಭ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ ಎಂದು ಸಂಸದೆ ಶೋಭ ಕರಂದ್ಲಾಜೆ ಆರೋಪಿಸಿದರು.

ಪಟ್ಟಣಕ್ಕೆ ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ‘ವೀರಶೈವ ಲಿಂಗಾಯತ ಸಮಾಜವನ್ನು ಯಡಿಯೂರಪ್ಪ ಅವರಿಂದ ದೂರ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲ ಸಚಿವರೊಂದಿಗೆ ಸೇರಿ ಈ ಷಡ್ಯಂತರ ರೂಪಿಸಿದ್ದಾರೆ. ಇದು ಫಲಕಾರಿಯಾಗುವುದಿಲ್ಲ’ ಎಂದು ತಿಳಿಸಿದರು.

ಕೇಂದ್ರದ ಆಡಳಿತ ಪರ ಜನಸಾಮಾನ್ಯರ ಒಲವು ನೋಡಿರುವ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ಅವರಿಗೆ ಸೋಲಿನ ಭಯ ಕಾಡುತ್ತಿದೆ. ಆಗಾಗಿಯೇ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸಿ, ಪೊಲೀಸರ ಮೂಲಕ ಬಿಜೆಪಿಯ ಮಂಗಳೂರು ಚಲೋ ತಡೆದರು. ಇದಕ್ಕೆ ಮುಂಬರುವೋ ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT