ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಯನ್‌ ಭವಿಷ್ಯದ ತಾರೆ

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಎಳವೆಯಲ್ಲಿಯೇ ಗಾಲ್ಫ್‌ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಆರ್ಯನ್ ರೂಪ ಆನಂದ್‌ ಭಾರತದ ಭವಿಷ್ಯದ ಆಟಗಾರನಾಗಿ ಬೆಳೆಯುವ ಭರವಸೆ ಮೂಡಿಸಿದ್ದಾರೆ.

ಹವ್ಯಾಸಕ್ಕಾಗಿ ಅಪ್ಪ ಆಡುತ್ತಿದ್ದ ಆಟದಲ್ಲಿಯೇ ಆಸಕ್ತಿ ಹುಟ್ಟಿದ್ದರಿಂದ ಆರ್ಯನ್ ಅದೇ ಆಟವನ್ನು ತಮ್ಮ ವೃತ್ತಿಯಾ ಗಿಸಿಕೊಂಡಿಸಿದ್ದಾರೆ. ಐದು ವರ್ಷದಿಂದಲೇ ಗಾಲ್ಫ್‌ ಆಡಲು ಆರಂಭಿಸಿದ ಅವರು ಹತ್ತನೇ ವಯಸ್ಸಿಗೆ 11 ವರ್ಷದೊಳಗಿನವರ ವಿಭಾಗದಲ್ಲಿ ಅಗ್ರ ರ‍್ಯಾಂಕಿಂಗ್ ಸಾಧಿಸಿದರು.

2016ರಲ್ಲಿ ನಡೆದ ಬಾಂಬೆ ಪ್ರೆಸಿಡೆನ್ಸಿ ಗಾಲ್ಪ್‌ ಟೂರ್ನಿಯ ಜೂನಿಯರ್ ವಿಭಾಗ ದಲ್ಲಿ ಎರಡನೇ ಸ್ಥಾನ. ಮಲೇಷ್ಯಾದಲ್ಲಿ ನಡೆದ ಜೂನಿಯರ್ ಕಿಡ್ಸ್‌ ವಿಶ್ವ ಚಾಂಪಿ ಯನ್‌ಷಿಪ್‌ನಲ್ಲಿ ಐದನೇ ಸ್ಥಾನ ಹಾಗೂ ಎ.ಎಮ್ ಬ್ಯಾಂಕ್‌ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿರುವುದು ಇವರ ಸಾಧನೆಗಳಿಗೆ ಕನ್ನಡಿ ಹಿಡಿದಿವೆ.

l ಗಾಲ್ಫ್‌ ಬಗ್ಗೆ ನಿಮಗೆ ಆಸಕ್ತಿ ಹುಟ್ಟಿದ್ದು ಹೇಗೆ?

ಅಪ್ಪ ಗಾಲ್ಫ್‌ ಆಡುತ್ತಿದ್ದರು. ಅವರ ಆಟ ನೋಡಿಕೊಂಡೆ ನಾನು ಬೆಳೆದೆ. ಎಂಟು ವರ್ಷ ಇದ್ದಾಗ ಈ ಆಟದಲ್ಲಿ ಸಾಧನೆ ಮಾಡುವ ಉತ್ಸಾಹ ಹೆಚ್ಚಿತು. ಈ ವರ್ಷ ನನಗೆ ಹದಿನೈದು ವರ್ಷ ಆದ ನಂತರ ತರುಣ್‌ ಸರ್‌ದೇಸಾಯಿ ಗಾಲ್ಫ್‌ ಅಕಾಡೆಮಿ ಸೇರಿಕೊಂಡೆ. ಆಟದ ಜೊತೆ ಓದಿನ ಕಡೆಗೂ ಗಮನಹರಿಸಿದ್ದೇನೆ. ವಾಣಿಜ್ಯ ವಿಭಾಗದಲ್ಲಿ ಪಿಯುಸಿ ಓದುತ್ತಿದ್ದೇನೆ.

l ನಿಮ್ಮ ಸ್ಮರಣೀಯ ಟೂರ್ನಿ ಯಾವುದು?

  ಮಲೇಷ್ಯಾದಲ್ಲಿ ಆಡಿದ್ದು ನನ್ನ ಸ್ಮರಣೀಯ ಟೂರ್ನಿ. ಅಲ್ಲಿ ನಾನು ಸಾಕಷ್ಟು ಹೊಸ ಅನುಭವ ಗಳಿಸಿದೆ.

l ಗಾಲ್ಫ್‌ನಲ್ಲಿಯೇ ಭವಿಷ್ಯ ರೂಪಿಸಿಕೊಳ್ಳುವುದು ಕಷ್ಟ ಅನ್ನಿಸಿಲ್ವಾ?

ಹೌದು ಆರಂಭದಲ್ಲಿ ಈ ಕ್ರೀಡೆಗೆ ಭವಿಷ್ಯ ಇದೆಯಾ ಅನ್ನುವ ಪ್ರಶ್ನೆ ಇತ್ತು. ಭಾರತದಲ್ಲಿ ಗಾಲ್ಫ್‌ ಬಗ್ಗೆ ಹೆಚ್ಚು ತಿಳಿವಳಿಕೆ ಇಲ್ಲ. ವಿದೇಶದಲ್ಲಿ ಈ ಆಟಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ನಮ್ಮ ದೇಶದಲ್ಲಿ ಕ್ರಿಕೆಟ್‌ ಪ್ರಿಯರು ಹೆಚ್ಚು.  ಇದು ವೈಯಕ್ತಿಕ ಕ್ರೀಡೆ. ಇಲ್ಲಿ ಯಾವುದೇ ರಾಜಕೀಯ ಇಲ್ಲ. ಇದೇ ಅಂಶ ನನಗೆ ಗಾಲ್ಫ್‌ ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಗಮನಸೆಳೆದದ್ದು.

l ಗಾಲ್ಫ್‌ನಲ್ಲಿ ನಿಮ್ಮ ಸ್ಫೂರ್ತಿ ಯಾರು?

ಅಮೆರಿಕದ ವೃತ್ತಿಪರ ಗಾಲ್ಫರ್‌ ಟೈಗರ್ ವುಡ್ಸ್‌ ನನಗೆ ಅಚ್ಚುಮೆಚ್ಚು. ಭಾರತದಲ್ಲಿ ಅನಿರ್ಬನ್ ಲಾಹಿರಿ ಒಳ್ಳೆಯ ಆಟಗಾರ. ಬೆಂಗಳೂರಿನ ಅದಿತಿ ಅಶೋಕ್ ಕೂಡ ಉತ್ತಮವಾಗಿ ಆಡುತ್ತಿದ್ದಾರೆ.

l ಗಾಲ್ಫ್‌ಗೆ ಯಾವ ರೀತಿ ಫಿಟ್‌ನೆಸ್ ಬೇಕು?

ಬೇರೆ ಆಟಗಳಲ್ಲಿ ಇರುವಂತೆಯೇ ಗಾಲ್ಫ್‌ಗೂ ಫಿಟ್‌ನೆಸ್ ಬೇಕು. ದೈಹಿಕ ಸಾಮರ್ಥ್ಯದ ಜತೆ ಈ ಆಟಕ್ಕೆ ಮಾನಸಿಕ ಬಲ ಕೂಡ ಅಗತ್ಯವಿದೆ. ಇದಕ್ಕಾಗಿ ಫುಟ್‌ಬಾಲ್, ಕ್ರಿಕೆಟ್ ಕೂಡ ಆಡುತ್ತೇನೆ.

l ಭವಿಷ್ಯದ ಯೋಜನೆಗಳು?

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆಯುವುದು ನನ್ನ ಕನಸು. ದೊಡ್ಡ ಗಾಲ್ಫರ್‌ ಆಗಿ ಬೆಳೆಯುವ ಗುರಿ ಇದೆ. ಆದರೆ ಇದೇ ವೃತ್ತಿಯಲ್ಲಿ ಕೋಚ್‌ ಆಗಿ ಕೆಲಸ ಮಾಡುವ ಆಯ್ಕೆ ಕೂಡ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT