ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿಎಫ್‌’ ಬಡ್ಡಿ ದರವೂ ಕಡಿತ?

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಪ್ರಸಕ್ತ ಸಾಲಿನಲ್ಲಿ ಬಡ್ಡಿ ದರವನ್ನು ಶೇ 0.25ರಷ್ಟು ಕಡಿಮೆ ಮಾಡಲು ಉದ್ದೇಶಿಸಿದೆ.

ಸಂಘಟನೆಯ ಹಣಕಾಸು, ಹೂಡಿಕೆ ಮತ್ತು ಲೆಕ್ಕಪತ್ರ ಸಮಿತಿಯು ಮುಂದಿನ ತಿಂಗಳು ಸಭೆ ಸೇರಿ ಬಡ್ಡಿ ದರ ಕಡಿತಗೊಳಿಸುವ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸದ್ಯಕ್ಕೆ ಪಿಎಫ್‌ ಬಡ್ಡಿ ದರ ಶೇ 8.65ರಷ್ಟಿದೆ. ಸಮಿತಿಯ ನಿರ್ಧಾರವು ಜಾರಿಗೆ ಬಂದರೆ ಬಡ್ಡಿ ದರ ಶೇ 8.40ಕ್ಕೆ ಇಳಿಯಲಿದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಈಗಾಗಲೇ ಕಡಿಮೆಯಾಗಿವೆ. ಅದೇ  ರೀತಿ ಪಿಎಫ್‌ ಬಡ್ಡಿ ದರಗಳನ್ನೂ ಇಳಿಸಲು ಆಲೋಚಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT