ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷ್ಕರ್ಷೆಗೆ ಒಳಪಡಲಿ

Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ವೀರಶೈವ ಮತ್ತು ಲಿಂಗಾಯತ ಧರ್ಮಗಳ ಪ್ರತಿಪಾದಕರು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಲಿಂಗಾಯತ ಧರ್ಮದ ಕುರಿತು ಒಮ್ಮತ ರೂಪಿಸಲು ತಜ್ಞರ ಸಮಿತಿ ರಚಿಸುವ ನಿರ್ಧಾರಕ್ಕೆ ಬಂದದ್ದು ಸ್ವಾಗತಾರ್ಹವಾಗಿದೆ. ಆದರೆ ಮಾತೆ ಮಹಾದೇವಿ ಅವರು ಇದನ್ನು ವಿರೋಧಿಸಿದ್ದನ್ನು ಸೆಪ್ಟೆಂಬರ್ 15ರ ‘ಪ್ರಜಾವಾಣಿ’ಯಲ್ಲಿ ಓದಿ ಆಶ್ಚರ್ಯವಾಯಿತು.

ಲಿಂಗಾಯತರು ಹಿಂದೂಗಳಲ್ಲ, ವೀರಶೈವರೂ ಅಲ್ಲ ಎಂಬುದನ್ನು ತಿಳಿದುಕೊಳ್ಳಲು ತಮ್ಮ ಮತ್ತು ನನ್ನ ಪುಸ್ತಕಗಳು ಸಾಕು ಎಂದು ಅವರು ತಿಳಿಸಿದ್ದಾರೆ. ಸತ್ಯವು ಸಮೂಹ ಜ್ಞಾನದ ನಿಷ್ಕರ್ಷೆಗೆ ಒಳಪಡಬೇಕಾಗುತ್ತದೆ. ಡಾ. ಚಿದಾನಂದಮೂರ್ತಿ ಮತ್ತು ಡಾ. ಸವದತ್ತಿಮಠ ಅವರಂಥ ವಿದ್ವಾಂಸರು ವೀರಶೈವ ಪರವಾಗಿ ವಾದ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಡಾ. ಎನ್.ಜಿ. ಮಹಾದೇವಪ್ಪ ಮತ್ತು ಡಾ. ಎಸ್.ಎಂ. ಜಾಮದಾರ ಅವರಂಥ ವಿದ್ವಾಂಸರು ಲಿಂಗಾಯತದ ಪ್ರತಿಪಾದಕ

ರಾಗಿದ್ದಾರೆ. ಇಂಥ ತಜ್ಞರು ಸೇರಿ ಒಮ್ಮತದ ನಿರ್ಧಾರಕ್ಕೆ ಬಂದನಂತರ ಸಲ್ಲಿಸುವ ವರದಿಯನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕಾಗುತ್ತದೆ. ಯಾರು ಏನೇ ಹೇಳಿದರೂ ವೇದೋಕ್ತ ಹಿಂದೂ ಧರ್ಮ, ಆಗಮೋಕ್ತ ವೀರಶೈವ ಮತ್ತು ಹೊಸ ಜಗತ್ತಿನ ತತ್ತ್ವ ಒಳಗೊಂಡ ವಚನೋಕ್ತ ಲಿಂಗಾಯತ ಧರ್ಮವನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ.
-ರಂಜಾನ್ ದರ್ಗಾ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT