ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರಣಿಗೆ ವ್ಯಾಪಕ ಬೆಂಬಲ

Last Updated 19 ಸೆಪ್ಟೆಂಬರ್ 2017, 5:05 IST
ಅಕ್ಷರ ಗಾತ್ರ

ಮೂಡಲಗಿ: ಮೂಡಲಗಿ ತಾಲ್ಲೂಕು ರಚನೆಗಾಗಿ ಕಲ್ಮೇಶ್ವರ ವೃತ್ತದಲ್ಲಿ 12ನೇ ದಿನದಲ್ಲಿ ನಡೆದಿರುವ ಧರಣಿಯಲ್ಲಿ ನೂರಾರು ಸಂಖ್ಯೆಯಲ್ಲಿದ್ದ ಶಿವಾಪುರ (ಹ) ಗ್ರಾಮದ ಜನರು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳವರು, ಮುಖಂಡರು, ವಿವಿಧ ಪಕ್ಷಗಳ ಧುರೀಣರು, ಮಹಿಳೆಯರು ಭಾಗವಹಿಸಿ ಧರಣಿಗೆ ವ್ಯಾಪಕ ಬೆಂಬಲ ನೀಡಿದರು.

ಶಿವಾಪುರ ಗ್ರಾಮದ ಜನರು ಜಾಂಜ್ ಪಥಕ್ ವಾದ್ಯದೊಂದಿಗೆ ವಿವಿಧ ಕಸರತ್ತುಗಳನ್ನು ಮಾಡುತ್ತಾ ಧರಣಿ ಸ್ಥಳ ತಲುಪಿದ್ದು ವಿಶೇಷವಾಗಿತ್ತು.‘ಮೂಡಲಗಿ ತಾಲ್ಲೂಕು ಆಗಲೇ ಬೇಕು’ ‘ತಾಲ್ಲೂಕು ಆಗುವವರೆಗೆ ಹೋರಾಟ’ ಎಂದು ಘೋಷಣೆಗಳನ್ನು ಹಾಕಿದರು. ಕ್ರಾಂತಿಕಾರಕ ಹಾಡುಗಳನ್ನು ಹಾಡುವ ಮೂಲಕ ಕಲಾವಿದರು ಪ್ರತಿಭಟನೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಸೇನೆಯ ನೂರಾರು ಸದಸ್ಯರು ಹಸಿರು ಟವಲ್‌ಗಳನ್ನು ಗಾಳಿಯಲ್ಲಿ ಬೀಸುತ್ತಾ ನಡೆಸಿದ ಪ್ರತಿಭಟನೆಯು ಗಮನ ಸೆಳೆಯಿತು.
ಮೂಡಲಗಿ ತಾಲ್ಲೂಕು ಆಗುವ ವರೆಗೆ ನಿರಂತರ ಬೆಂಬಲ ಇರುತ್ತದೆ ಎಂದು ತಾಲ್ಲೂಕು ಹೋರಾಟ ಸಮಿತಿ ಅವರಿಗೆ ಶಿವಾಪುರ ಗ್ರಾಮದ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಕೆಂಪಣ್ಣ ಮುಧೋಳ, ತಾಲ್ಲೂಕು ಪಂಚಾಯ್ತಿ ಸದಸ್ಯ ಶಿವಬಸು ಜುಂಜರ ವಾಡ, ಸಿದಗೌಡ ಪಾಟೀಲ, ಬಸವರಾಜ ಸಾಯನ್ನವರ, ಟಿಎಪಿಎಂಸಿ ನಿರ್ದೇಶಕ ಈಶ್ವರ ಬೆಳಗಲಿ, ದುಂಡಯ್ಯ ಹಿರೇಮಠ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಶೇಖರ ರಡ್ಡೇರಟ್ಟಿ, ನಾಗಪ್ಪ ಬೆಳಗಲಿ ಮನವಿ  ಅರ್ಪಿಸಿದರು.

ಶಾಸಕರು ಎಷ್ಟೇ ಭರವಸೆ, ಆಣೆ ಗಳನ್ನು ಮಾಡಿದರೂ ಸಹ ತಾಲ್ಲೂಕು ಅದೇಶ ಪ್ರತಿಯು ಕೈಸೇರಿದ ಮೇಲೆ  ಧರಣಿ, ಹೋರಾಟ ನಿಲ್ಲುತ್ತದೆ. ಅಲ್ಲಿಯ ವರೆಗೆ ಧರಣಿ ಮುಂದುವರಿಯುವುದು ಎಂದು ಘೋಷಿಸಿಸಿದರು.

ಧರಣಿಯ ವೇದಿಕೆಯ ಮುಂದೆ ಅಪಾರ ಸಂಖ್ಯೆಯಲ್ಲಿ ರಸ್ತೆಯ ಮೇಲೆ ಕುಳಿತಿದ್ದರಿಂದ ಕೆಲ ಹೊತ್ತು ವಾಹನಗಳ ಸಂಚಾರಕ್ಕೆ ಅಡೆತಡೆಯಾಯಿತು. ಪೊಲೀಸರು ಸಂಚಾರ ನಿಯಂತ್ರಿಸಲು ಹರ ಸಾಹಸ ಪಡಬೇಕಾಯಿತು.

ಹಳ್ಳೂರಿನ ಅಲ್ಲಮಪ್ರಭು ಸ್ವಾಮೀಜಿ, ಕಲ್ಲೋಳಿಯ ಈರಪ್ಪ ಬೆಳಕೂಡ, ಲಖನ್ ಸವಸುದ್ದಿ, ಅವರಾದಿಯ ರಮೇಶ ಉಟಗಿ ಅವರು ಸಚಿವ ರಮೇಶ ಜಾರಕಿಹೊಳಿ ಅವರ ಪತ್ರಿಕಾ ಹೇಳಿಕೆಯನ್ನು ಖಂಡಿಸಿದರು. ಸಾಮಾಜಿಕ ಕಾರ್ಯಕರ್ತೆ ಎಂ.ವಿ. ಆಶ್ರಿತ್‌, ನಿರ್ಮಲಾ ಹಿರೇಮಠ, ಸುಜಾತಾ ಹಿರೇಮಠ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT