ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನೀವು ಮೊದಲು ಮಾಂಸ ತಿನ್ನುತ್ತೀರಿ, ಆಮೇಲೆ ಮಾಂಸವೇ ನಿಮ್ಮನ್ನು ಬಲಿ ತೆಗೆದುಕೊಳ್ಳುತ್ತದೆ'

Last Updated 19 ಸೆಪ್ಟೆಂಬರ್ 2017, 10:00 IST
ಅಕ್ಷರ ಗಾತ್ರ

ನವದೆಹಲಿ: ಮನುಷ್ಯರೆಲ್ಲರೂ ಮೂಲತಃ ಸಸ್ಯಹಾರಿಗಳೇ ಆಗಿದ್ದಾರೆ ಮತ್ತು ಮಾಂಸಾಹಾರ ಸೇವನೆ ದೇಹಕ್ಕೆ ಹಾನಿಕಾರಕ ಎಂದು ಕೇಂದ್ರ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.

ಮಯಾಂಕ್ ಜೈನ್ ಅವರು ನಿರ್ದೇಶಿಸಿದ 'ದ ಎವಿಡೆನ್ಸ್- ಮೀಟ್ ಕಿಲ್ಸ್' ಎಂಬ ಸಿನಿಮಾ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಅವರು, ಮಾಂಸ ಸೇವನೆ ಮನುಷ್ಯನ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂದಿದ್ದಾರೆ.

ಕಳೆದ ಮೂರು ದಶಕಗಳಲ್ಲಿ ಈ ಬಗ್ಗೆ ನಡೆದ ಅಧ್ಯಯನಗಳ ಪ್ರಕಾರ ಮಾಂಸ ಸೇವನೆ ದೇಹಕ್ಕೆ ಒಳ್ಳೆಯದಲ್ಲ. ನಮ್ಮ ದೇಹದಲ್ಲಿರುವ ಎಲ್ಲ ಅಂಗಾಂಗಗಳು ಸಸ್ಯಾಹಾರಿಯಾಗಿವೆ. ಹೀಗಿರುವಾಗ ನಮ್ಮ ದೇಹದೊಳಗೆ ಮಾಂಸಾಹಾರ ಹೋದರೆ ದೈಹಿಕ ರೋಗಗಳಿಗೆ ಕಾರಣವಾಗುತ್ತದೆ.

ದಿನಾ ಮಾಂಸಾಹಾರ ಸೇವಿಸಿದರೆ ನಿಮ್ಮ ದೇಹ ದುರ್ಬಲವಾಗುತ್ತದೆ. ನೀವು ಮಾಂಸ ತಿಂದರೆ ಸಾಯುವುದಿಲ್ಲ ಆದರೆ ಅದು ದೇಹವನ್ನು ದುರ್ಬಲವಾಗಿಸಿ ರೋಗಗಳಿಗೆ ತುತ್ತಾಗುವಂತೆ ಮಾಡುತ್ತದೆ. ಒಟ್ಟಿನಲ್ಲಿ ನೀವು ಮಾಂಸ ತಿನ್ನುವುದಾದರೆ ಆಮೇಲಾಮೇಲೆ ಮಾಂಸವೇ ನಿಮ್ಮನ್ನು ಬಲಿ ತೆಗೆದುಕೊಳ್ಳುತ್ತದೆ ಎಂದಿದ್ದಾರೆ ಮನೇಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT