ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2008ರ ಮಾಲೆಗಾಂವ್ ಸ್ಫೋಟ: ಇಬ್ಬರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು

Last Updated 19 ಸೆಪ್ಟೆಂಬರ್ 2017, 12:40 IST
ಅಕ್ಷರ ಗಾತ್ರ

ಮುಂಬೈ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಇಬ್ಬರು ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ.

ಜಮ್ಮುಕಾಶ್ಮೀರ ನಿವಾಸಿ ಸುಧಾಕರ್ ಧಾರ್ ದ್ವಿವೇದಿ ಅಲಿಯಾಸ್ ದಯಾನಂದ್ ಪಾಂಡೆ ಮತ್ತು ಥಾಣೆ ನಿವಾಸಿ ಸುಧಾಕರ್ ಓಂಕಾರ್‌ನಾಥ್ ಚತುರ್ವೇದಿ ಅಲಿಯಾಸ್ ಚಾಣಾಕ್ಯ ಸುಧಾಕರ್  ಈ ಇಬ್ಬರು ಆರೋಪಿಗಳಿಗೆ ಸಮಾನತೆ ಆಧಾರದ ಮೇಲೆ ಜಾಮೀನಿಗೆ ಒಪ್ಪಿಗೆ ನೀಡಿದೆ. ಈ ಇಬ್ಬರು ಆರೋಪಿಗಳು ಮುಚ್ಚಳಿಕೆ ಹಣ ₹5 ಲಕ್ಷ ನೀಡುವಂತೆ ಸೂಚಿಸಿದ ವಿಶೇಷ ನ್ಯಾಯಾಲಯ ಕೆಲವು ಷರತ್ತುಗಳನ್ನು ವಿಧಿಸಿದೆ. 

ಕಳೆದ ತಿಂಗಳಷ್ಟೇ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್‌ಗೆ ಸುಪ್ರೀಂ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

2006ರ ಸೆಪ್ಟೆಂಬರ್‌ನಲ್ಲಿ ನಾಸಿಕ್ ಜಿಲ್ಲೆಯ ಮಾಲೆಗಾಂವ್ ಬಳಿಯ ಬಿಕ್ಕು ಚೌಕ್ ಬಳಿ ಬಾಂಬ್ ಸ್ಫೋಟ ನಡೆದಿತ್ತು. ಈ ದುರಂತದಲ್ಲಿ 6 ಮಂದಿ ಮೃತಪಟ್ಟಿದ್ದರು. 101ಕ್ಕೂ ಹೆಚ್ಚು ಮಂದಿಗೆ ಗಾಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT