ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವೇಶ್ವರಯ್ಯನವರದು ಮಹೋನ್ನತ ಆದರ್ಶ

Last Updated 20 ಸೆಪ್ಟೆಂಬರ್ 2017, 5:38 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಆದರ್ಶಗಳನ್ನು ವೃತ್ತಿ ಬದುಕಿನಲ್ಲಿ ಅಳವಡಿಸಿಕೊಂಡು ಎಂಜಿನಿಯರು ಉತ್ತಮ ಸಾಧನೆ ಮಾಡ ಬೇಕು’ ಎಂದು ರಾಜ್ಯ ಲೋಕೋಪ ಯೋಗಿ ಇಲಾಖೆಯ ನಿವೃತ್ತ ಕಾರ್ಯ ದರ್ಶಿ ಜಿ.ಸಿ.ತಲ್ಲೂರ ಹೇಳಿದರು.

ನಗರದ ಹೇಮ-ವೇಮ ಸಂಸ್ಥೆ, ಕರ್ನಾಟಕ ಎಂಜಿನಿಯರ್ ಸಂಘ ಮತ್ತು ಕರ್ನಾಟಕ ಎಂಜಿನಿಯರ್‌ ಸೇವಾ ಸಂಘದ ಸಹಯೋಗದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಎಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ವಿಶ್ವೇಶ್ವರಯ್ಯ ಜಗತ್ತು ಕಂಡ ಒಬ್ಬ ಶ್ರೇಷ್ಠ ಎಂಜಿನಿಯರ್. ಅವರ ಕಾರ್ಯ ಕ್ಷಮತೆ, ದಕ್ಷತೆ ಹಾಗೂ ಪ್ರಾಮಾಣಿಕ ಸೇವಾ ಮನೋಭಾವ ಇಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಬೇಕು. ವಿಶ್ವೇಶ್ವರ ಯ್ಯನವರ ದೇಶ ಸೇವೆ ಶ್ಲಾಘನೀಯ’ ಎಂದರು.

ನಿವೃತ್ತ ಮುಖ್ಯ ಎಂಜಿನಿಯರ್ ಜೆ.ಕೆ.ಪಾಟೀಲ ಮಾತನಾಡಿ, ‘ವಿಶ್ವೇಶ್ವರ ಯ್ಯನವರ ಸರಳ ಜೀವನ, ಚೈತನ್ಯಯುಕ್ತ ಬದುಕು ಹಾಗೂ ಆದರ್ಶಗಳನ್ನು ಪ್ರತಿ ಯೊಬ್ಬರೂ ಜೀವನದಲ್ಲಿ ರೂಢಿಸಿಕೊಳ್ಳ ಬೇಕು’ ಎಂದರು. ಹೇಮ-ವೇಮ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಜಿ.ಆರ್. ಹಲಗಲಿ ಮಾತನಾಡಿ, ‘ನಾಡಿನ ಸೇವೆ ಗೈದು ಜನಾನುರಾಗಿಗಳಾಗಿರುವ ಮಹಾನ್ ವ್ಯಕ್ತಿಗಳ ಜನ್ಮ ದಿನಾಚರಣೆ ಆಚರಿಸಿದ ರಷ್ಟೇ ಸಾಲದು.

ಅವರ ಆದರ್ಶ ಅಳ ವಡಿಸಿಕೊಂಡಾಗ ಮಾತ್ರ ದಿನಾಚರಣೆಗ ಳಿಗೆ ಮೌಲ್ಯ ದೊರಕುತ್ತದೆ’ ಎಂದರು. ಕರ್ನಾಟಕ ಎಂಜಿನಿಯರ್ ಸೇವಾ ಸಂಘದ ಅಧ್ಯಕ್ಷ ವಿ.ಎಸ್.ಪತ್ತಾರ ಮಾತ ನಾಡಿದರು. ಹೇಮ-ವೇಮ ಸಂಸ್ಥೆಯ ಅಧ್ಯಕ್ಷ ಎಂ.ಆರ್.ಎಮ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎರೆಹೊಸಳ್ಳಿಯ ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಹೇಮ-ವೇಮ ಸಂಸ್ಥೆಯ ಉಪ ಕಾರ್ಯಾಧ್ಯಕ್ಷ ಸಿ.ಎಚ್.ಕಟಗೇರಿ, ಸಹ ಕಾರ್ಯದರ್ಶಿ ಶ್ರೀಕಾಂತ ಪಾಟೀಲ, ಕೋಶಾಧ್ಯಕ್ಷ ರಂಗನಗೌಡ ದಂಡನ್ನವರ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೇರಿ, ನಿರ್ದೇಶಕರಾದ ಎಸ್.ಕೆ.ಯಡಹಳ್ಳಿ, ಆರ್.ಎಚ್.ತಿಮ್ಮನಾಯ್ಕರ, ಮುಖ್ಯ ಶಿಕ್ಷಕಿ ಆರ್.ಎಚ್.ಬಟಕುರ್ಕಿ ಇದ್ದರು.

ದೇಣಿಗೆ ಘೋಷಣೆ: ಜಿ.ಸಿ.ತಲ್ಲೂರ ಹಾಗೂ ನಿವೃತ್ತ ಮುಖ್ಯ ಎಂಜನಿಯರ್ ಜೆ.ಕೆ.ಪಾಟೀಲ ಹೇಮ-ವೇಮ ಸಂಸ್ಥೆಗೆ ತಲಾ ₹ 1 ಲಕ್ಷ ದೇಣಿಗೆ ಪ್ರಕಟಿಸಿದರು.

* * 

ಸರ್‌ ಎಂ. ವಿಶ್ವೇಶ್ವರಯ್ಯ ಅವರ ಬದುಕು ಹಾಗೂ ಸಾಧನೆ  ಇಂದಿನ ಎಂಜಿನಿಯರ್‌ಗಳಿಗೆ ಆದರ್ಶಪ್ರಾಯವಾಗಿದೆ
ಮೋಹನ ನಾಡಗೌಡ
ಜಿಲ್ಲಾ ಎಂಜಿನಿಯರ್ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT