ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನೆಗುದಿಗೆ ಬಿದ್ದ ನೀರಾವರಿ ಯೋಜನೆ: ಆಚಾರ್‌

Last Updated 20 ಸೆಪ್ಟೆಂಬರ್ 2017, 5:58 IST
ಅಕ್ಷರ ಗಾತ್ರ

ಕುಕನೂರು: ನೀರಾವರಿ ಯೋಜನೆ ಜಾರಿಗೆ ತರುವ ಭರವಸೆ ನೀಡಿ ಅಧಿಕಾರಕ್ಕೇರಿದ ಸಚಿವರು ನಾಲ್ಕು ವರ್ಷ ಕಳೆದರೂ ನೀರಾವರಿ ಯೋಜನೆ ಜಾರಿಯಾಗಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಲಪ್ಪ ಆಚಾರ್ ಹೇಳಿದರು.

ಇಲ್ಲಿನ ಮಹಾಮಾಯಿ ತೇರನ ಗಡ್ಡಿ ಹತ್ತಿರ ತಾಲ್ಲೂಕ ಬಿಜೆಪಿ ವತಿಯಿಂದ ಸೋಮವಾರ ರಾಜ್ಯ ಕಾಂಗ್ರೆಸ್‌ ಸರ್ಕಾರದ ದುರಾಡಳಿತ ಹಾಗೂ ಕೃಷ್ಣಾ ಬಿ ಸ್ಕೀಂ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಳಂಬ ಧೋರಣೆ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಡೆಸಿದ ಬೈಕ್‌  ರ‍್ಯಾಲಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ದೃಷ್ಠಿಯಲ್ಲಿ ಕೇವಲ ಸಿಸಿ ರಸ್ತೆ ಮಾಡಿಸಿದರೆ ಸಾಲದು ರೈತರ, ದೀನ-ದಲಿತರ ಹಾಗೂ ಶೋಷಿತರ ಸಮಸ್ಯೆಗೆ ಧ್ವನಿಗೂಡಿಸಿದಾಗ ಮಾತ್ರ ಜನಪರ ಕಾರ್ಯಕ್ಕೆ ಮೆಚ್ಚುಗೆ ಬರುತ್ತದೆ ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎಚ್‌ ಪೊಲೀಸ್‌ ಪಾಟೀಲ ಮಾತನಾಡಿದರು.

ಬಿಜೆಪಿ ತಾಲ್ಲೂಕ ಘಟಕದ ಅಧ್ಯಕ್ಷ ರತನ್ ದೇಸಾಯಿ, ನವೀನಕುಮಾರ್ ಗುಳಗಣ್ಣನವರ, ಈರಪ್ಪ ಕುಡಗುಂಟಿ, ಅರವಿಂದಗೌಡ ಪಾಟೀಲ, ಎಚ್‌.ಎಚ್‌ ಕುರಿ, ಅಂದಪ್ಪ ಜವಳಿ, ಮಾರುತಿ ಗಾವರಾಳ, ಶಂಭು ಜೋಳದ, ಶಿವಕುಮಾರ ನಾಗಲಾಪೂರಮಠ, ವಿಶ್ವನಾಥ ಮರಿಬಸಪ್ಪನವರ, ವೀರಣ್ಣ ಹುಬ್ಬಳ್ಳಿ, ಸಿದ್ದು ಉಳ್ಳಾಗಡ್ಡಿ, ಶರಣಪ್ಪ ಚಲವಾದಿ, ಶರಣಪ್ಪ ಬಣ್ಣದಭಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT