ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಸಿಕೊ:1985ರ ಇದೇ ದಿನ ಸಂಭವಿಸಿದ್ದ ಭೂಕಂಪ; ಆಗ ಮೃತಪಟ್ಟವರು 5 ಸಾವಿರ ಜನ

Last Updated 20 ಸೆಪ್ಟೆಂಬರ್ 2017, 9:20 IST
ಅಕ್ಷರ ಗಾತ್ರ

ಮೆಕ್ಸಿಕೊ ಸಿಟಿ: ಮಂಗಳವಾರ ಸಂಭವಿಸಿದ 7.1 ತೀವ್ರತೆಯ ಭೂಕಂಪದಿಂದ ನೆಲಕ್ಕೆ ಉರುಳಿರುವ ಶಾಲಾ ಕಟ್ಟಡಗಳು, ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳ ಅಡಿಯಲ್ಲಿ ಸಿಲುಕಿದ್ದ ನೂರಾರು ಜನರನ್ನು ರಕ್ಷಣಾ ಪಡೆ ಹೊರಕ್ಕೆ ತಂದಿದ್ದು, ಸಾವಿನ ಸಂಖ್ಯೆ 248ಕ್ಕೆ ಏರಿಕೆಯಾಗಿದೆ.

1985ರ ನಂತರ ಮೆಕ್ಸಿಕೊದಲ್ಲಿ ಸಂಭವಿಸಿರುವ ಅತ್ಯಂತ ಪ್ರಭಾವಶಾಲಿ ಭೂಕಂಪ ಇದಾಗಿದೆ. ದಕ್ಷಿಣ ಮೆಕ್ಸಿಕೊ ಸಿಟಿಯಲ್ಲಿ ಮೂರು ಅಂತಸ್ತಿನ ಶಾಲಾ ಕಟ್ಟಡ ಕುಸಿದಿದ್ದು, ಈಗಾಗಲೇ 25 ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ.

32 ವರ್ಷಗಳ ಹಿಂದೆ, ಅಂದರೆ 1985ರ ಸೆಪ್ಟೆಂಬರ್‌ 19ರಂದು ಮೆಕ್ಸಿಕೊದಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. 7.5ಕ್ಕೂ ಹೆಚ್ಚು ತೀವ್ರತೆಯ ಭೂಕಂಪದಲ್ಲಿ ನೂರಾರು ಕಟ್ಟಡಗಳು ನೆಲಸಮಗೊಂಡು 5 ಸಾವಿರಕ್ಕೂ ಹೆಚ್ಚು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT