ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಗಂಟೆಗೆ 80 ಸಾವಿರ ಜಿಎಸ್‌ಟಿ ರಿಟರ್ನ್‌ ಸಲ್ಲಿಕೆ

Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಜಿಎಸ್‌ಟಿಯಲ್ಲಿ ಆಗಸ್ಟ್ ತಿಂಗಳ ರಿಟರ್ನ್ ಸಲ್ಲಿಕೆಗೆ ಬುಧವಾರ ಅಂತಿಮ ದಿನವಾಗಿತ್ತು. ಹೀಗಾಗಿ ಉದ್ಯಮಿಗಳು ತರಾತುರಿಯಲ್ಲಿ ಲೆಕ್ಕಪತ್ರ ಮಾಹಿತಿ ಸಲ್ಲಿಸಿದರು.

‘ಜಾಲತಾಣದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಪ್ರತಿ ಗಂಟೆಗೆ 80 ಸಾವಿರಕ್ಕೂ ಹೆಚ್ಚು ‌ಜಿಎಸ್‌ಟಿಆರ್‌–ಬಿ ಸಲ್ಲಿಕೆಯಾಗಿದೆ’ ಎಂದು ಜಿಎಸ್‌ಟಿಎನ್‌ ಅಧ್ಯಕ್ಷ ಅಜಯ್‌ ಭೂಷನ್‌ ಅವರು ತಿಳಿಸಿದ್ದಾರೆ.

ಜಿಎಸ್‌ಟಿ ಜಾರಿಗೆ ಬಂದ ಬಳಿಕ ಇದು ಎರಡನೇ ತಿಂಗಳ ರಿಟರ್ನ್‌ ಸಲ್ಲಿಕೆಯಾಗಿದೆ. ಜುಲೈ ತಿಂಗಳಿನಲ್ಲಿ 47 ಲಕ್ಷ ರಿಟರ್ನ್‌ ಸಲ್ಲಿಕೆಯಾಗಿದ್ದು, ತೆರಿಗೆ ರೂಪದಲ್ಲಿ ಒಟ್ಟಾರೆ ₹ 95 ಸಾವಿರ ಕೋಟಿ ಸಂಗ್ರಹವಾಗಿದೆ, ಸೆಪ್ಟೆಂಬರ್‌ 16ರವರೆಗೆ ಆಗಸ್ಟ್‌ ತಿಂಗಳಿಗೆ 3.5 ಲಕ್ಷ ತೆರಿಗೆದಾರರು ರಿಟರ್ನ್ಸ್‌ ಸಲ್ಲಿಸಿದ್ದಾರೆ ಎಂದು ಜಿಎಸ್‌ಟಿಎನ್‌ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT