ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕವಾಗಿ ಸೌಲಭ್ಯ ಬಳಸಿಕೊಳ್ಳಿ

ಉಚಿತ ಎಲ್.ಪಿ.ಜಿ.ಗ್ಯಾಸ್ ವಿತರಣಾ ಕಾರ್ಯಕ್ರಮ ಉದ್ಘಾಟನೆ
Last Updated 22 ಸೆಪ್ಟೆಂಬರ್ 2017, 4:06 IST
ಅಕ್ಷರ ಗಾತ್ರ

ಕೊರಟಗೆರೆ: `ಸಾಮಾನ್ಯ ಜನರು ಸರ್ಕಾರ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು' ಎಂದು ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.

ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಎಲ್.ಪಿ.ಜಿ.ಗ್ಯಾಸ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ಗ್ರಾಮೀಣ ಭಾಗದ ಜನರಿಗೆ ಸರ್ಕಾರ ಉಚಿತ ಗ್ಯಾಸ್ ಸೌಲಭ್ಯ ಒದಗಿಸುತ್ತಿದ್ದು. ಇದನ್ನು ಎಚ್ಚರಿಕೆಯಿಂದ ಬಳಸಿ ಅಪಾಯದ ಸನ್ನಿವೇಶದಲ್ಲಿ ನಿರ್ಲಕ್ಷ್ಯ ತೋರದಿರಿ' ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಹೆಚ್.ಹುಚ್ಚಯ್ಯ ಮಾತನಾಡಿ, ‘ಕೇಂದ್ರ ಸರ್ಕಾರ ಬಡಜನರಿಗೆ ಉಪಯೋಗವಾಗಲು ಹಲವು ಯೋಜನೆ ಒದಗಿಸುತ್ತಿದ್ದು ಅಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡಬೇಕು’ ಎಂದರು.

ಅಕ್ಕಿರಾಂಪುರದ ವರುಣ್ ಭಾರತ್‌ ಗ್ಯಾಸ್ ಏಜೆನ್ಸಿ ಮಾಲೀಕ ಕಿಶೋರ್ ಮಾತನಾಡಿ, ‘ತಾಲ್ಲೂಕಿನಲ್ಲಿ ಈಗಾಗಲೇ ಉಚಿತವಾಗಿ 1500 ಗ್ಯಾಸ್ ಸೌಲಭ್ಯ ಒದಗಿಸಲಾಗಿದೆ' ಎಂದರು.

ಮುಖಂಡ ಎಲ್.ವಿ.ಪ್ರಕಾಶ್, ಗ್ರಾಮ ಪಂಚಾಯಿತಿ ಅದ್ಯಕ್ಷ ವೀರಭದ್ರೇಶಯ್ಯ, ಸದಸ್ಯರಾದ ರಾಮಕೃಷ್ಣ, ಓಬಳೇಶ್, ನಯಾಜ್, ಮುಖಂಡರಾದ ಸುರೇಶ್, ಶ್ರೀರಾಮುಲುನಾಯ್ಕ, ಗುಂಡಣ್ಣ, ಹನುಮಂತರಾಯಪ್ಪ, ಚಂದ್ರಣ್ಣ, ನಾರಾಯಣಪ್ಪ, ಕಾಳಿಚರಣ್, ಮಂಜುನಾಥ, ರಹೀಂ, ರಿಜ್ವಾನ್, ರವಿಕುಮಾರ್, ಅಯೂಬ್ ಪಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT