ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಂಗಾ ಬೆಳೆಗೆ ಸುರುಳಿ ಪೂಚಿ ಬಾಧೆ

Last Updated 22 ಸೆಪ್ಟೆಂಬರ್ 2017, 5:39 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಕಳೆದ ಎರಡು ವಾರಗಳ ಹಿಂದೆ ಸುರಿದಿರುವ ಮಳೆಗೆ ಬಳ್ಳಿಶೇಂಗಾ ಹಸುರಿನಿಂದ ಕಂಗೊಳಿಸುತ್ತಿದೆ. ಆದರೆ, ಬೆಳೆಗೆ ಸುರುಳಿ ಪೂಚಿ ರೋಗದ ಕಾಟ ಶುರುವಾಗಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ. ರೋಗಕ್ಕೆ ಸರಿಯಾದ ಉಪಚಾರ ಮಾಡದೆ ಹೋದರೆ ಶೇಂಗಾ ಬಳ್ಳಿ ಸಂಪೂರ್ಣ ಬಾಡಿ ಹೋಗುತ್ತದೆ. ರೈತರು ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

‘ಹಿಂದೆ ಕೃಷಿ ಇಲಾಖೆಯಿಂದ ಗ್ರಾಮ ಸೇವಕರು ತಮ್ಮ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಿಗೆ ಆಗಾಗ ಭೇಟಿ ನೀಡಿ ರೈತರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಆದರೆ ಈಗ ಆ ವ್ಯವಸ್ಥೆ ಇಲ್ಲ. ಹೀಗಾಗಿ ಸಕಾಲಕ್ಕೆ ಸಲಹೆ ದೊರೆಯದೆ ಸಾಕಷ್ಟು ಬೆಳೆಗಳು ರೋಗಕ್ಕೀಡಾಗುತ್ತಿವೆ’ ಎನ್ನತ್ತಾರೆ ರೈತರು.

‘ಮದ್ಲ ನಮ್ಮೂರಿಗೆ ಗ್ರಾಮ ಸೇವಕರು ಬಂದು ರೋಗಕ್ಕ ಯಾವ ಯಾವ ಔಷಧ ಹೊಡೀಬೇಕಂತ ಹೇಳತಿದ್ರು. ಆದರ ಈಗ ಯಾರೂ ಬರಂಗಿಲ್ರೀ’ ಎಂದು ಶೆಟ್ಟಿಕೇರಿ ಗ್ರಾಮದ ಶಿವನಗೌಡ ನೆರ್ತಿ, ಬಟ್ಟೂರಿನ ಮಹಾದೇವಪ್ಪ ದಾನಿ ಹೇಳುತ್ತಾರೆ. ರೈತರೇ ಕ್ರಿಮಿನಾಶಕ ತಂದು ರೋಗಕ್ಕೆ ಸಿಂಪರಣೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT