ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನವೀಗ ಟೆರರಿಸ್ತಾನ್ ಆಗಿದೆ; ವಿಶ್ವಸಂಸ್ಥೆಯಲ್ಲಿ ಪಾಕ್‍ಗೆ ತಿರುಗೇಟು ನೀಡಿದ ಭಾರತ

Last Updated 22 ಸೆಪ್ಟೆಂಬರ್ 2017, 14:13 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಪಾಕಿಸ್ತಾನ ಈಗ ಭಯೋತ್ಪಾದಕ ರಾಷ್ಟ್ರವಾಗಿದೆ. ಪಾಕ್ ಎಂದರೆ ಉರ್ದು ಭಾಷೆಯಲ್ಲಿ ಶುದ್ಧ ಎಂದರ್ಥ. ಆದರೆ ಇಂದು ಟೆರರಿಸ್ತಾನ್ ಆಗಿ ಮಾರ್ಪಟ್ಟಿದೆ ಎಂದು ಹೇಳುವ ಮೂಲಕ ಭಾರತ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದೆ. ಶುಕ್ರವಾರ ವಿಶ್ವ ಸಂಸ್ಥೆಯ ಮಹಾ ಅಧಿವೇಶನದಲ್ಲಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿರುವ ಭಾರತ, ಜಾಗತಿಕ ಭಯೋತ್ಪಾದನೆಗೆ ಪ್ರೋತ್ಸಾಹ ನೀಡಿ ಉಗ್ರ ಕೃತ್ಯಗಳಿಗೆ ಪ್ರಚೋದಿಸುತ್ತಿದೆ ಎಂದು ಹೇಳಿದೆ.

ವಿಶ್ವ ಸಂಸ್ಥೆಯಲ್ಲಿ ಭಾಷಣ ಮಾಡಿದ್ದ ಪಾಕಿಸ್ತಾನದ ಪ್ರಧಾನಿ ಶಾಹಿದ್‌ ಖಾನ್‌ ಅಬ್ಬಾಸಿ ಭಾರತದ ಮೇಲೆ ಆರೋಪಗಳನ್ನು ಮಾಡಿದ್ದರು. ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ ಭಾರತದ ಕಾರ್ಯದರ್ಶಿ ಈನಮ್ ಗಂಭೀರ್, ಪಾಕಿಸ್ತಾನವಿಂದು ಉಗ್ರರಾಷ್ಟ್ರವಾಗಿದೆ ಎಂದಿದ್ದಾರೆ.

ಪಾಕ್ ಹೇಳಿದ್ದೇನು?
ಕಾಶ್ಮೀರ ಸಮಸ್ಯೆಗೆ ವಿಷಯದಲ್ಲಿ ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಬೇಕು. ಈ ಸಂಬಂಧ ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯವನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಪಾಕಿಸ್ತಾನದ ಪ್ರಧಾನಿ ಶಾಹೀದ್ ಅಬ್ಬಾಸಿ ಹೇಳಿದ್ದರು,. ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ ಅಬ್ಬಾಸಿ, ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ  ನಾವು ವಿಫಲವಾಗಿಲ್ಲ. ಪಾಕ್‍ನಲ್ಲಿ ಉಗ್ರರ ಅಡಗುತಾಣಗಳಿಲ್ಲ. ಗಡಿಯ ಅಶಾಂತಿಗೆ ನಾವು ಕಾರಣರಲ್ಲ. ಜನವರಿಯಿಂದ ಇಲ್ಲಿಯವರೆಗೆ 600ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆಯಾಗಿದ್ದರೂ ನಾವು ಸುಮ್ಮನಿದ್ದೇವೆ. ಭಾರತದ ಪ್ರಚೋದನೆಗೆ ನಮ್ಮ ಸೇನೆ ದಿಟ್ಟ ಉತ್ತರ ನೀಡಲಿದೆ.

ಪಾಕಿಸ್ತಾನವು ಕಡಿಮೆ ಅಂತರದ ಅಣ್ವಸ್ತ್ರಗಳನ್ನು ಹೊಂದಿದೆ. ಭಾರತದ ಸೇನೆಗೆ ದಿಟ್ಟ ಉತ್ತರ ನೀಡಲು ಅಗತ್ಯವಾದರೆ ಇದನ್ನು ಬಳಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ‘ಜಾಗತಿಕವಾಗಿ ಪಾಕಿಸ್ತಾನವೂ ಅತ್ಯಂತ ವೇಗವಾಗಿ ಪರಮಾಣು ಶಸ್ತ್ರಾಸ್ತ್ರ ಹೊಂದುತ್ತಿರುವ ರಾಷ್ಟ್ರವಾಗಿದೆ. ಭಾರತದ ಸೇನೆಯನ್ನು ನಾಶಪಡಿಸುವ ಅಲ್ಪಶ್ರೇಣಿಯ ಶಸ್ತ್ರಾಸ್ತ್ರಗಳಿವೆ. ಅಗತ್ಯಬಿದ್ದರೆ ಅದನ್ನು ಬಳಸಲು ಹಿಂಜರಿಯುವುದಿಲ್ಲ. ಭಾರತ ಆರಂಭಿಸಿರುವ ಶೀತಲಯುದ್ಧಕ್ಕೆ ಪ್ರತಿಯಾಗಿ, ನಮ್ಮ ಸುರಕ್ಷತೆಗಾಗಿ ಅಣ್ವಸ್ತ್ರಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಹೇಳಿದ್ದರು.

ಪಾಕ್ ಮಾನ ಹರಾಜು ಮಾಡಿದ ಈನಮ್ ಗಂಭೀರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT