ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಾರ್ಯಕ್ರಮದಲ್ಲಿ ಹಿಂದಿ ಬಳಸಿ: ಹರ್ಷವರ್ಧನ್‌

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ : ಸರ್ಕಾರದ ಕಾರ್ಯಕ್ರಮಗಳನ್ನು ಸಾಧ್ಯವಿದ್ದಾಗಲೆಲ್ಲ ‘ರಾಷ್ಟ್ರ ಭಾಷೆ’ಯಲ್ಲಿಯೇ ನಡೆಸಬೇಕು ಎಂದು ಕೇಂದ್ರ ಸಚಿವ ಹರ್ಷವರ್ಧನ್‌ ಹೇಳಿದ್ದಾರೆ.‌ ಆದರೆ, ತಮ್ಮ ಸಚಿವಾಲಯದ ಶೇ 95ರಷ್ಟು  ಕಾರ್ಯಕ್ರಮಗಳು ಇಂಗ್ಲಿಷ್‌ನಲ್ಲಿಯೇ ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.

‘ಕಾರ್ಯಕ್ರಮಗಳು ಹಿಂದಿಯಲ್ಲಿ ನಡೆಯುತ್ತಿವೆ ಎಂಬುದು ಖುಷಿಯ ವಿಚಾರ. ಇಂಗ್ಲಿಷ್‌ನಲ್ಲಿ ಕಾರ್ಯಕ್ರಮ ನಿರೂಪಿಸುವುದು ಅಪರಾಧ ಏನಲ್ಲ. ಆದರೆ ಸಾಧ್ಯ ಇದ್ದಲ್ಲೆಲ್ಲ ರಾಷ್ಟ್ರ ಭಾಷೆ ಬಳಸಬೇಕು. ರಾಷ್ಟ್ರ ಭಾಷೆಯಲ್ಲಿ ಕಾರ್ಯಕ್ರಮ ನಡೆದರೆ ಅಲ್ಲಿನ ವಾತಾವರಣ ಸಾತ್ವಿಕವಾಗಿರುತ್ತದೆ’ ಎಂದು ಹರ್ಷವರ್ಧನ್‌ ಅಭಿಪ್ರಾಯಪಟ್ಟರು. ಅವರು ಹಿಂದಿಯಲ್ಲಿ ಮಾತನಾಡಿದರು.

ಸಶಸ್ತ್ರ ಸೀಮಾ ಬಲವು (ಎಸ್‌ಎಸ್‌ಬಿ) ಆಯೋಜಿಸಿದ್ದ ‘ವನ್ಯಜೀವಿಗಳಿಗೆ ತೊಂದರೆ ತಡೆಯುವಲ್ಲಿ ಭದ್ರತಾ ಪಡೆಗಳ ಪಾತ್ರ’ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಸರ್ಕಾರದ ಕಾರ್ಯಕ್ರಮಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ‍ಪ್ರಾಧಾನ್ಯ ನೀಡಬೇಕು ಎಂದೂ ಅವರು ಹೇಳಿದರು. ತಮ್ಮ ಅಧೀನದಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯಕ್ರಮಗಳು ನಡೆಯುವಾಗ ವೇದಿಕೆಯಲ್ಲಿ ಮೂರನೇ ಒಂದು ಭಾಗ ಮಹಿಳಾ ವಿಜ್ಞಾನಿಗಳೇ ಇರಬೇಕು ಎಂದು ಅವರು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT