ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ನೆಕ್ಸಾನ್ ಬಿಡುಗಡೆ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಟಾಟಾ ಮೋಟಾರ್ಸ್‌, ರಾಜ್ಯದ ಮಾರುಕಟ್ಟೆಗೆ ಹೊಸ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ನೆಕ್ಸಾನ್‌ ಬಿಡುಗಡೆ ಮಾಡಿದೆ.

ಇಂಪ್ಯಾಕ್ಟ್‌ ಡಿಸೈನ್‌ ಆಧಾರಿತ ನಾಲ್ಕನೇ ವಾಹನವಾಗಿದೆ. ಉತ್ತಮ ತಂತ್ರಜ್ಞಾನವನ್ನು ಒಳಗೊಂಡಿದೆ. ಗ್ರಾಹಕರ ಅಭಿರುಚಿ ಮತ್ತು ನಿರೀಕ್ಷೆಗೆ ತಕ್ಕಂತೆ ತಯಾರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

‘ಯುವ ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಕರ್ಷಕ ವಿನ್ಯಾಸದೊಂದಿಗೆ ಇದನ್ನು ತಯಾರಿಸಲಾಗಿದೆ’ ಎಂದು ಸಂಸ್ಥೆಯ ವಿನ್ಯಾಸ ವಿಭಾಗದ ಮುಖ್ಯಸ್ಥ ಪ್ರತಾಪ್‌ ಬೋಸ್‌ ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಎಸ್‌ಯುವಿ ವಾಹನಗಳ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸುವ ವಿಶ್ವಾಸವಿದೆ’ ಎಂದರು.

‘ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಇದರ ಬೆಲೆಯೂ ಎಸ್‌ಯುವಿ ಕಾರ್‌ಗಳ ವರ್ಗದಲ್ಲಿ ಸ್ಪರ್ಧಾತ್ಮಕವಾಗಿದೆ. ಪೆಟ್ರೋಲ್‌  ಮಾದರಿಯ ಬೆಂಗಳೂರಿನ ಎಕ್ಸ್‌ಷೋರೂಂ ಆರಂಭಿಕ ಬೆಲೆ ₹5,94,200 ಡೀಸೆಲ್ ಮಾದರಿಯ ಬೆಲೆ ₹6,94,47 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT