ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಬನ್ ಬ್ಯಾಂಕಿಗೆ ₨2.30 ಕೋಟಿ ಲಾಭ

Last Updated 23 ಸೆಪ್ಟೆಂಬರ್ 2017, 5:16 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ಶಿರಸಿ ಅರ್ಬನ್ ಸಹಕಾರಿ ₹891 ಕೋಟಿಗೂ ಹೆಚ್ಚಿನ ವ್ಯವಹಾರ ನಡೆಸಿ ಆರ್ಥಿಕ ವರ್ಷದ ಅಂತ್ಯದಲ್ಲಿ ₹2.30 ಕೋಟಿ ನಿವ್ವಳ ಲಾಭ ಗಳಿಸಿದೆ. 111 ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ 2016-–17ನೇ ಆರ್ಥಿಕ ವರ್ಷದಲ್ಲಿ ಒಟ್ಟು ಠೇವಣಿಯನ್ನು ₹ 581 ಕೋಟಿ, ದುಡಿಯುವ ಬಂಡವಾಳವನ್ನು ₹604. 74 ಕೋಟಿಯಿಂದ ₹671 ಕೋಟಿಗೆ ಹೆಚ್ಚಿಸುವುದರೊಂದಿಗೆ ₹3.33 ಕೋಟಿ ನಿರ್ವಹಣಾ ಲಾಭ ದಾಖಲಿಸಿದೆ. ಅದರಲ್ಲಿ ₹ 1.03 ಕೋಟಿ ಆದಾಯ ತೆರಿಗೆ ಪಾವತಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ. ವಿ.ಎಸ್.ಸೋಂದೆ ತಿಳಿಸಿದ್ದಾರೆ.

ಬ್ಯಾಂಕಿನ ಸದಸ್ಯರ ಸಂಖ್ಯೆ 39,359 ದಾಟಿದೆ. ಸಂದಾಯಿತ ಶೇರು ಬಂಡವಾಳ ₹13.75 ಕೋಟಿ ತಲುಪಿದೆ. ಕಳೆದ ವರ್ಷ ₹51.85 ಕೋಟಿ ಇದ್ದ ಆದಾಯ ₹53.96 ಕೋಟಿಗೆ ಹೆಚ್ಚಳವಾಗಿದೆ. ಹಿಂದಿನ ಐದು ವರ್ಷಗಳಂತೆ ಈ ವರ್ಷವೂ ಬ್ಯಾಂಕಿನ ನಿಕ್ಕಿ ಅನುತ್ಪಾದಕ ಸಾಲಗಳ ಪ್ರಮಾಣ ಶೇ 0.0 ಇದೆ.

ಬ್ಯಾಂಕಿನ ಸ್ವಂತ ಬಂಡವಾಳವು ₹72.53 ಕೋಟಿಯಿಂದ ವರದಿ ವರ್ಷದ ಅಂತ್ಯಕ್ಕೆ ₹75.06 ಕೋಟಿಗೆ ಏರಿಕೆಯಾಗಿದೆ. ₹600 ಕೋಟಿಗಿಂತಲೂ ಹೆಚ್ಚಿನ ದುಡಿಯುವ ಬಂಡವಾಳ ಮತ್ತು ₹800 ಕೋಟಿಗಿಂತಲೂ ಹೆಚ್ಚಿನ ವಹಿವಾಟನ್ನು ಹೊಂದಿ ರಾಜ್ಯದ 265 ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಅಗ್ರ ಹತ್ತರೊಳಗಿನ ಸ್ಥಾನವನ್ನು ಮುಂದುವರೆಸಿಕೊಂಡು ಬಂದಿದೆ. ಬೆಳಗಾವಿ ವಿಭಾಗದಲ್ಲಿ ಬ್ಯಾಂಕ್ ಪ್ರಥಮ ಸ್ಥಾನದಲ್ಲಿದೆ.

ಈ ಸಂಬಂಧ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತದ ಪಟ್ಟಣ ಸಹಕಾರ ಬ್ಯಾಂಕ್‌ಗಳ ಸಮ್ಮೇಳನದಲ್ಲಿ ಅರ್ಬನ್‌ ಬ್ಯಾಂಕಿಗೆ ಪ್ರಶಸ್ತಿ ದೊರೆತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ವಿವರಿಸಿದ್ದಾರೆ. ಬ್ಯಾಂಕ್ ₹ 310.46 ಕೋಟಿಗಳಷ್ಟು ಸಾಲವನ್ನು ವಿತರಿಸಿದೆ. ಆದ್ಯತಾ ರಂಗಕ್ಕೆ ಬ್ಯಾಂಕ್ ಶೇ 69.46ರ  ಪ್ರಮಾಣದಲ್ಲಿ ಒಟ್ಟು ₹178.06 ಕೋಟಿ ಮತ್ತು ದುರ್ಬಲ ವರ್ಗದವರಿಗೆ ಶೇ 15.86ರ ಪ್ರಮಾಣದಲ್ಲಿ ₹40.66 ಕೋಟಿ ಸಾಲ ನೀಡಿದೆ. ಆರ್ಥಿಕ ವರ್ಷದಲ್ಲಿ ಇನ್ನೂ ₹152 ಕೋಟಿಗಳಷ್ಟು ಹೆಚ್ಚಿನ ಸಂಪನ್ಮೂಲಗಳನ್ನು ಹೊಂದಿದೆ ಎಂದು ಅವರು ವಿನಂತಿಸಿದ್ದಾರೆ.

ಬ್ಯಾಂಕಿನ ಎಲ್ಲ ಶಾಖೆಗಳು ಕೋರ್ ಬ್ಯಾಂಕಿಂಗ್ ಸೊಲ್ಯೂಷನ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ವಿವಿಧ ವ್ಯವಹಾರ ಕೇಂದ್ರಗಳಲ್ಲಿ ಹಣದ ವ್ಯವಹಾರಕ್ಕಾಗಿ ಬ್ಯಾಂಕಿನ ಸ್ವೈಪಿಂಗ್ ಯಂತ್ರಗಳನ್ನು ಈ ವರ್ಷ ಹೊಸದಾಗಿ ಅಳವಡಿಸಲಾಗಿದೆ.  ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ವಿದ್ಯುನ್ಮಾನ ಪಾವತಿಯ ವ್ಯವಸ್ಥೆಯ ಅಡಿಯಲ್ಲಿ ಎ.ಟಿ.ಎಂ, ರೂಪೇ ಕಾರ್ಡ್‌, ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್, ಐ.ಎಂ.ಪಿ.ಎಸ್ ಒಳಗೊಂಡ ತಂತ್ರಜ್ಞಾನ ಪೂರಿತ ಸೇವಾ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಲು ರಿಸರ್ವ್ ಬ್ಯಾಂಕ್‌ ಮತ್ತು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಅನುಮತಿ ದೊರೆತಿದೆ. ಅನುಷ್ಠಾನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಾಂಡುರಂಗ ಪೈ ಹೇಳಿದ್ದಾರೆ.

* * 

ಶಿರಸಿ ಅರ್ಬನ್ ಬ್ಯಾಂಕಿನ 112ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಇದೇ 24ರಂದು ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ನಡೆಯಲಿದೆ
ವಿ.ಎಸ್. ಸೋಂದೆ
ಅಧ್ಯಕ್ಷ, ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT