ಬಾಗಲಕೋಟೆ

ಚುನಾವಣೆ ಮುಗಿಯುವವರೆಗೂ ಸುಮ್ಮನಿರಿ

ಮುರುಗೇಶ ಬೀಳಗಿಗೆ ಹೋದರೂ ಸಹೋದರ ಸಂಗಮೇಶ ಇಲ್ಲಿಂದ ಪಕ್ಷದ ಟಿಕೆಟ್‌ ಕೇಳಲಿದ್ದಾರೆ. ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಮುರುಗೇಶ ನಿರಾಣಿ

ಬಾಗಲಕೋಟೆ: ಜಮಖಂಡಿ ತಾಲ್ಲೂಕಿನಲ್ಲಿ ಎಂಆರ್ಎನ್ ನಿರಾಣಿ ಸಮೂಹದ ಕಾರ್ಯ ಚಟುವಟಿಕೆಯನ್ನು ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಸ್ಥಗಿತಗೊಳಿಸುವಂತೆ ಮಾಜಿ ಸಚಿವ ಮುರುಗೇಶ ನಿರಾಣಿ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿರುವ ಯಡಿಯೂರಪ್ಪ ಅವಿಭಜಿತ ವಿಜಯಪುರ ಜಿಲ್ಲೆಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸಂಗತಿಯ ನಡುವೆಯೇ ಈ ವಿಚಾರ ಮಹತ್ವ ಪಡೆದಿದೆ.

‘ಜಮಖಂಡಿಯಲ್ಲಿ ಪಕ್ಷದ ಮುಖಂಡರ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆಯಲು ಯಡಿಯೂರಪ್ಪ ಮುಂದಾಗಿದ್ದಾರೆ. ಅದಕ್ಕೆ ಪೂರಕವಾಗಿ ಬುಧವಾರ ಮುರುಗೇಶ ನಿರಾಣಿ ಅವರನ್ನು ಬೆಂಗಳೂರಿಗೆ ಕರೆಸಿ ಈ ಸೂಚನೆ ನೀಡಿದ್ದಾರೆ. ಅದರ ಹಿಂದೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರ ರಾಜಕೀಯ ಭವಿಷ್ಯ ಅಡಗಿದೆ’ ಎಂದು ಮೂಲಗಳು ತಿಳಿಸಿವೆ.

ಶ್ರೀಕಾಂತ ಕುಲಕರ್ಣಿ ಆತಂಕ?: ‘ಫೌಂಡೇಶನ್ ಚಟುವಟಿಕೆ ಮೂಲಕ ನಿರಾಣಿ ಕುಟುಂಬ ಜಮಖಂಡಿ ಕ್ಷೇತ್ರದ ಜನತೆಗೆ ಹತ್ತಿರವಾಗಿದೆ. ಪಂಚಮಸಾಲಿ ಸಮುದಾಯ ಇಲ್ಲಿ ಹೆಚ್ಚಿರುವುದರಿಂದ ಸಾಹೇಬರು (ಮುರುಗೇಶ ನಿರಾಣಿ) ಬೀಳಗಿ ಬದಲು ಇಲ್ಲಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಬೆಂಬಲಿಗರು ಹೇಳುತ್ತಿದ್ದಾರೆ.

ಮುರುಗೇಶ ಬೀಳಗಿಗೆ ಹೋದರೂ ಸಹೋದರ ಸಂಗಮೇಶ ಇಲ್ಲಿಂದ ಪಕ್ಷದ ಟಿಕೆಟ್‌ ಕೇಳಲಿದ್ದಾರೆ. ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸಹೋದರನ ಸ್ಪರ್ಧೆ ವಿಚಾರವನ್ನು ಮುರುಗೇಶ ನಿರಾಣಿ ಕೂಡ ನಿರಾಕರಿಸಿಲ್ಲ. ಹೀಗಾದಲ್ಲಿ ನನ್ನ ಭವಿಷ್ಯವೇನು’ ಎಂದು ಪಕ್ಷದ ಪ್ರಮುಖರ ಸಭೆಯಲ್ಲಿ ವರಿಷ್ಠರಿಗೆ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಪ್ರಶ್ನಿಸಿದ್ದರು ಎನ್ನಲಾಗಿದೆ.

ಮುರುಗೇಶ ನಿರಾಣಿ ಆಪ್ತ ಉಮೇಶ ಮಹಾಬಳಶೆಟ್ಟಿ ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ ಪರಿಣಾಮ ಬಿಜೆಪಿ ಅಭ್ಯರ್ಥಿಯಾಗಿದ್ದ ಶ್ರೀಕಾಂತ ಕುಲಕರ್ಣಿ ಸೋಲು ಕಂಡಿದ್ದರು. ಈ ಬಾರಿ ಸಂಗಮೇಶ ಸ್ಪರ್ಧಿಸಿದಲ್ಲಿ ಮತ್ತೆ ತಮಗೆ ತೊಂದರೆಯಾಗಬಹುದು’ ಎಂದು ಆತಂಕ ತೋಡಿಕೊಂಡಿದ್ದಾರೆ. ಕುಲಕರ್ಣಿ ಅವರ ಬೆಂಬಲಕ್ಕೆ ಆರ್‌ಎಸ್‌ಎಸ್ ನಿಂತಿದೆ.

ಇಬ್ಬರನ್ನೂ ಕೂರಿಸಿಕೊಂಡು ಸಮಸ್ಯೆ ಪರಿಹರಿಸಲು ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದೆ. ಹಾಗಾಗಿ ಕುಲಕರ್ಣಿ ಅವರ ಅಳಲಿಗೆ ದನಿಯಾಗಿಯೇ ಈ ಆದೇಶ ಹೊರಬಿದ್ದಿದೆ’ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಗುಳೇದಗುಡ್ಡ: ದಿಡಿಗಿನಹಳ್ಳದ ಮಿನಿ ಜಲಪಾತ

ಗುಳೇದಗುಡ್ಡ
ಗುಳೇದಗುಡ್ಡ: ದಿಡಿಗಿನಹಳ್ಳದ ಮಿನಿ ಜಲಪಾತ

17 Oct, 2017

ಬಾಗಲಕೋಟೆ
ಸಂಪರ್ಕ ದಟ್ಟಣೆ: ಗ್ರಾಹಕರಿಂದ ಹಿಡಿಶಾಪ

‘ಬ್ರಾಡ್‌ ಬ್ಯಾಂಡ್‌ ಸಂಪರ್ಕದಲ್ಲಿನ ವ್ಯತ್ಯಯ ಹಾಗೂ ಮೊಬೈಲ್‌ಫೋನ್‌ ಸಂಪರ್ಕ ನಿಧಾನಗತಿಯಲ್ಲಿರುವ ಬಗ್ಗೆ ಗ್ರಾಹಕರಿಂದ ಬರುತ್ತಿರುವ ದೂರುಗಳ ಸಂಖ್ಯೆಯೂ ಹೆಚ್ಚಾಗಿದೆ.

17 Oct, 2017

ಮಹಾಲಿಂಗಪುರ
‘ವಚನ ಪಿತಾಮಹ ಫ.ಗು. ಹಳಕಟ್ಟಿ ಆಧುನಿಕ ಬಸವಣ್ಣ’

ಕನ್ನಡ ಸಾರಸ್ವತ ಲೋಕದ ಅಸ್ಮಿತತೆಯನ್ನು ಬಸವಾದಿ ಶರಣರು ಪ್ರಜ್ವಲಿಸುವಂತೆ ಮಾಡಿದ್ದಾರೆ.

17 Oct, 2017
ಅವ್ಯವಸ್ಥೆಯ ತಾಣ ನಗರಸಭೆ ಉದ್ಯಾನ

ಬಾಗಲಕೋಟೆ
ಅವ್ಯವಸ್ಥೆಯ ತಾಣ ನಗರಸಭೆ ಉದ್ಯಾನ

16 Oct, 2017

ರಬಕವಿ ಬನಹಟ್ಟಿ
ಬನಹಟ್ಟಿ: ಮಳೆಯಿಂದಾಗಿ ಮನೆಗೆ ನುಗ್ಗಿದ ನೀರು

ಭಾರಿ ಮಳೆಯಿಂದಾಗಿ ಅರುಣ ಟಾಕೀಸ್‌ ಸುತ್ತ ಮುತ್ತಲಿನ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಮನೆಯವರು ನೀರು ಹೊರಹಾಕಲು ಹರಸಾಹಸ ಪಟ್ಟರು

16 Oct, 2017