ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರವನದಲ್ಲಿ ನವರಾತ್ರಿ ಆಚರಣೆ ಆರಂಭ

Last Updated 23 ಸೆಪ್ಟೆಂಬರ್ 2017, 7:29 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಸಮೀಪದ ಚಂದ್ರವನ ಆಶ್ರಮದಲ್ಲಿ ನವರಾತ್ರಿ ಆಚರಣೆ ಗುರುವಾರ ಆರಂಭವಾಯಿತು. ಬೇಬಿ ಮಠದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ದುರ್ಗಾ ಪೂಜೆಯೊಡನೆ ನವರಾತ್ರಿ ಆಚರಣೆಗೆ ಚಾಲನೆ ನೀಡಿದರು.

‘ಪ್ರತಿ ವರ್ಷದಂತೆ ಲೋಕ ಕಲ್ಯಾಣಕ್ಕಾಗಿ 7 ದಿನಗಳ ಕಾಲ ಮೌನಾನುಷ್ಠಾನ ಮಾಡಲಿದ್ದೇನೆ. 31ರವರೆಗೆ ಚಂದ್ರವನದಲ್ಲಿ ಚಂದ್ರಮೌಳೇಶ್ವರ ಸ್ವಾಮಿ ಹಾಗೂ ದುರ್ಗಾ ಮಾತೆಗೆ ವಿಶೇಷ ಪೂಜೆ ನಡೆಯಲಿದೆ. ದಶಮಿಯ ದಿನ ಶಮಿ ವೃಕ್ಷ ಛೇದನ ನಡೆಯುತ್ತದೆ’ ಎಂದು ಅವರು ಹೇಳಿದರು.

ತುಮಕೂರಿನ ದೊಡ್ಡಗುಣಿ ಮಠದ ರೇಣುಕಾ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ನವರಾತ್ರಿ ಸಂದರ್ಭದಲ್ಲಿ ದುರ್ಗೆಯನ್ನು ಆರಾಧಿಸಿದರೆ ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಈ ಆಚರಣೆ ಚಂದ್ರವನ ಆಶ್ರಮದಲ್ಲಿ ಹಲವು ವರ್ಷಗಳಿಂದ ಅನೂಚಾನವಾಗಿ ನಡೆಯುತ್ತಿದ್ದು, ವಿವಿಧೆಡೆಗಳಿಂದ ಸಾಧು, ಸಂತರು ಪಾಲ್ಗೊಳ್ಳಲಿದ್ದಾರೆ’ ಎಂದರು.

ಇಂಧನ ಸಚಿವರ ವಿಶೇಷಾಧಿಕಾರಿ ವಿಶ್ವನಾಥ ರೆಡ್ಡಿ, ಆಶ್ರಮದ ಕಾರ್ಯದರ್ಶಿ ಟಿ.ಪಿ. ಶಿವಕುಮಾರ್‌, ಆಡಳಿತಾಧಿಕಾರಿ ಕೆ.ಎಸ್‌.ಶಿವಲಿಂಗಪ್ಪ, ಡಿ.ವಿ.ಹೊನ್ನಪ್ಪ, ಪಾಲಹಳ್ಳಿ ರಾಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT