ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈನ ಆಸ್ಪತ್ರೆಯಲ್ಲಿ ಜನಿಸಿದ 'ಪವಾಡ ಮಗು'; ತೂಕ 610 ಗ್ರಾಂ!

Last Updated 23 ಸೆಪ್ಟೆಂಬರ್ 2017, 10:23 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ನಾಲ್ಕು ತಿಂಗಳ ಹಿಂದೆ ಮುಂಬೈನ ಸಿಟಿ ಆಸ್ಪತ್ರೆಯಲ್ಲಿ ಕೇವಲ 610 ಗ್ರಾಂ ತೂಕದ ಮಗುವೊಂದು ಜನಿಸಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ. 

ಮೇ 17, 2017ರಂದು ಜನಿಸಿದ ಈ ಮಗು ಭಾರತದ ಅತಿ ಚಿಕ್ಕ ಹಾಗೂ ಕಿರಿಯ ಮಗು ಎಂದೆನಿಸಿಕೊಂಡಿದೆ. ಸತತ 132ದಿನಗಳ ಕಾಲ ಮುಂಬೈನ ಸಿಟಿ ಆಸ್ಪತ್ರೆಯ ಐಸಿಯುವಿನಲ್ಲಿ ಸಾವು ಬದುಕಿನ ನಡುವೆ ಹೋರಾಡಿ  ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಕಾರಣ ಇದನ್ನು ಪವಾಡ ಮಗು ಎನ್ನಲಾಗಿದೆ.

ಭಾರತದ ಅತಿ ಕಿರಿಯ ಮಗುವಿಗೆ ನಿರ್ವಾಣ್ ಎಂದು ನಾಮಕರಣ ಮಾಡಿದ್ದು, ಮಗುವಿನ ತಲೆಯ ಸುತ್ತಳತೆ 22ಸೆಂ.ಮೀ. ಉದ್ದ 32ಸೆಂ.ಮೀ.

ಮಗು ತಾಯಿಯ ಗರ್ಭದಲ್ಲಿ ಇದ್ದದ್ದು 22 ವಾರಗಳು (5ತಿಂಗಳು ಎರಡು ವಾರ) ಮಾತ್ರ. ಈ ಮಗುವಿಗೆ 14 ವೈದ್ಯರು ಹಾಗೂ  50 ದಾದಿಯರ ತಂಡ ಚಿಕಿತ್ಸೆ ನೀಡಿದೆ. ಮಗುವಿನ ಆರೋಗ್ಯದಲ್ಲಿ ಇದೀಗ ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ನಿರ್ವಾಣ್ ಜನಿಸಿದಾಗ ಶ್ವಾಸಕೋಶ ಸಂಪೂರ್ಣವಾಗಿ ಬೆಳವಣಿಗೆ ಕಂಡಿರಲಿಲ್ಲ. ಹಾಗಾಗಿ ಉಸಿರಾಟದ ತೊಂದರೆ ಸಹಜವಾಗಿ ಎದುರಾಗಿತ್ತು. ಆದ ಕಾರಣ 12 ವಾರಗಳ ಕಾಲ ವೆಂಟಿಲೇಟರ್‌ನಲ್ಲಿಯೇ ಇರಿಸಬೇಕಾಯಿತು. ಅಲ್ಲದೇ ಶ್ವಾಸಕೋಶವನ್ನು ಹಿಗ್ಗಿಸುವುದಕ್ಕಾಗಿ ಕೆಲವು ಚುಚ್ಚುಮದ್ದುಗಳನ್ನು ನೀಡಲಾಯಿತು. ಇದೀಗ ಮಗು ಆರೋಗ್ಯಯುತವಾಗಿದ್ದು 1ಕೆಜಿ ತೂಕಕ್ಕೆ ಬಂದಿದೆ ಎಂದು ಸೂರ್ಯ ಚೈಲ್ಡ್ ಕೇರ್‌ ನಿರ್ದೇಶಕರಾದ  ಭೂಪೇಂದ್ರ ಅವಸ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT