ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಗೋಲ್‌ಮಾಲ್ ಅಗೇನ್’ ಸಿನಿಮಾದ ಟ್ರೇಲರ್ ಬಿಡುಗಡೆ

Last Updated 23 ಸೆಪ್ಟೆಂಬರ್ 2017, 14:31 IST
ಅಕ್ಷರ ಗಾತ್ರ

ನವದೆಹಲಿ: ಬಾಲಿವುಡ್ ಆ್ಯಕ್ಷನ್ ಕಿಂಗ್ ಅಜಯ್‌ ದೇವಗನ್ ಅಭಿನಯದ ತಮಾಷೆ ಮಿಶ್ರಿತ ಹಾರರ್  ಗೋಲ್‌ಮಾಲ್ ಅಗೇನ್ ಸಿನಿಮಾದ  ಟ್ರೇಲರ್ ಬಿಡುಗಡೆಯಾಗಿದ್ದು, ಕೇವಲ 24 ಗಂಟೆಗಳಲ್ಲಿ 2 ಕೋಟಿ ಜನರು ವೀಕ್ಷಿಸಿದ್ದಾರೆ.

ಮೂರು ನಿಮಿಷಗಳ ಕಾಲ ಜನರಲ್ಲಿ ನಗುವಿನ ಬುಗ್ಗೆ ಎಬ್ಬಿಸುವ ಈ ಟ್ರೇಲರ್‌ನ್ನು ಮುಂಬೈನಲ್ಲಿ ಬಿಡುಗಡೆ ಮಾಡಲಾಗಿದೆ. ರೋಹಿತ್ ಶೆಟ್ಟಿ ಈ ಸಿನಿಮಾದ ನಿರ್ಮಾಪಕರು ಹಾಗೂ ನಿರ್ದೇಶಕರು. 

ರೋಹಿತ್ ಶೆಟ್ಟಿ ನಿರ್ಮಾಣದ ಟ್ರೇಲರ್ ಪ್ರಾರಂಭದಿಂದಲೂ ಭಯ ಮಿಶ್ರಿತ ಹಾಗೂ ತಮಾಷೆಯಿಂದಲೂ ಕೂಡಿದ್ದು, ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಹಾಗೂ ಫೇಸ್‌ಬುಕ್‌ನಲ್ಲಿ ಹೊಸ ಅಲೆ ಎಬ್ಬಿಸಿದೆ. ಈ ಮೂಲಕ  ಸಿನಿಮಾ ರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದೆ.

ಅಜಯ್ ದೇವಗನ್, ತುಷಾರ್ ಕಪೂರ್, ಶ್ರೇಯಸ್ ತಲ್ಪಾಡೆ,  ಕುನಾಲ್ ಕೆಮು, ಪರಿಣಿತಿ ಚೋಪ್ರಾ, ಪ್ರಕಾಶ್ ರಾಜ್ ಮತ್ತು ನೇಲ್ ನಿತಿನ್ ಮುಖೇಶ್ ತಾರಾಗಣದಲ್ಲಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಅಕ್ಟೋಬರ್ 20ರಂದು ಈ ಸಿನಿಮಾ ತೆರೆ ಕಾಣಲಿದೆ.

ಈ ಸಿನಿಮಾಕ್ಕೆ ಜಮೋನ್ ಟಿ ಜಾನ್ ಅವರ ಕ್ಯಾಮರ ಕೈಚಳಕವಿದೆ. ಅಮಲ್ ಮಲ್ಲಿಕ್, ಎಸ್.ತಮನ್, ಡಿಜೆ ಚೇತಸ್, ಅಭಿಷೇಕ್ ಅರೋರಾ, ನುಕ್ಲೇಯಾ ಅವರ ಸಂಗೀತ  ಈ ಸಿನಿಮಾಕ್ಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT