ಪ್ರೊ ಕಬಡ್ಡಿ ಲೀಗ್‌

ಬೆಂಗಳೂರು ಬುಲ್ಸ್‌ಗೆ ಸೋಲು

ಬುಲ್ಸ್ ತಂಡದ ಹರೀಶ್ ನಾಯಕ್ ಅವರ ಹೋರಾಟ ವ್ಯರ್ಥವಾಯಿತು. ಈ ಆಟಗಾರ 11 ಪಾಯಿಂಟ್ಸ್‌ಗಳಿಂದ ಮಿಂಚಿದರು. ಎಲ್ಲಾ ಪಾಯಿಂಟ್ಸ್‌ಗಳನ್ನೂ ಅವರು ರೈಡಿಂಗ್‌ನಲ್ಲಿಯೇ ಪಡೆದುಕೊಂಡರು.

ಬೆಂಗಳೂರು ಬುಲ್ಸ್ ತಂಡದ ರೈಡರ್‌ನನ್ನು ಹಿಡಿಯಲು ಪ್ರಯತ್ನಿಸಿದ ಬೆಂಗಾಲ್‌ ವಾರಿಯರ್ಸ್‌ ಆಟಗಾರ

ನವದೆಹಲಿ: ಬೆಂಗಳೂರು ಬುಲ್ಸ್ ತಂಡ ಶನಿವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ 29–33 ಪಾಯಿಂಟ್ಸ್‌ಗಳಿಂದ ಬೆಂಗಾಲ್ ವಾರಿಯರ್ಸ್ ಎದುರು ಸೋಲು ಕಂಡಿದೆ. ಬುಲ್ಸ್ ತಂಡದ ಹರೀಶ್ ನಾಯಕ್ ಅವರ ಹೋರಾಟ ವ್ಯರ್ಥವಾಯಿತು. ಈ ಆಟಗಾರ 11 ಪಾಯಿಂಟ್ಸ್‌ಗಳಿಂದ ಮಿಂಚಿದರು. ಎಲ್ಲಾ ಪಾಯಿಂಟ್ಸ್‌ಗಳನ್ನೂ ಅವರು ರೈಡಿಂಗ್‌ನಲ್ಲಿಯೇ ಪಡೆದುಕೊಂಡರು.

ರವೀಂದರ್ ಪಹಾಲ್ ಹಾಗೂ ಮಹೇಂದರ್ ಸಿಂಗ್‌ ಐದು ಟ್ಯಾಕಲ್ ಪಾಯಿಂಟ್ಸ್‌ ಗಿಟ್ಟಿಸಿದರು. ಬುಲ್ಸ್ ತಂಡ ‘ಬಿ’ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಗೆಲುವು ದಾಖಲಿಸಿದ ವಾರಿಯರ್ಸ್ ತಂಡ ದ್ವಿತೀಯಾರ್ಧದಲ್ಲಿ ಅಪೂರ್ವ ಪೈಪೋಟಿ ನೀಡಿತು. ಒಗ್ಗಟ್ಟಿನ ಆಟ ಆಡಿದ ಈ ತಂಡ ಆರಂಭದಿಂದಲೇ ಟ್ಯಾಕಲ್ ಹಾಗೂ ರೈಡಿಂಗ್ ಎರಡೂ ವಿಭಾಗಗಳಲ್ಲಿ ಉತ್ತಮ ಸಾಮರ್ಥ್ಯ ತೋರಿತು.

ಸುರ್ಜಿತ್ ಸಿಂಗ್‌ ಆರು ಪಾಯಿಂಟ್ಸ್ ಗಳಿಸಿದರೆ, ಮನಿಂದರ್ ಸಿಂಗ್ ಒಂಬತ್ತು ಪಾಯಿಂಟ್ಸ್‌ಗಳಿಂದ ತಂಡದ ಬಲ ಹೆಚ್ಚಿಸಿದರು. ರೇಡಿಂಗ್‌ನಲ್ಲಿ ಮನಿಂದರ್ ಆರು ಪಾಯಿಂಟ್ಸ್ ತಂದರು. ಮೂರು ಬೋನಸ್ ಪಾಯಿಂಟ್ಸ್ ಕಲೆಹಾಕಿದರು. ವಾರಿಯರ್ಸ್ ‘ಬಿ’ ಗುಂಪಿನಲ್ಲೇ ಎರಡನೇ ಸ್ಥಾನದಲ್ಲಿದೆ.

Comments
ಈ ವಿಭಾಗದಿಂದ ಇನ್ನಷ್ಟು
ತವರಿನಲ್ಲಿ ಕಮರಿದ ಬಿಎಫ್‌ಸಿ ಕನಸು

ಬೆಂಗಳೂರು
ತವರಿನಲ್ಲಿ ಕಮರಿದ ಬಿಎಫ್‌ಸಿ ಕನಸು

20 Oct, 2017
ಕ್ವಾರ್ಟರ್‌ ಫೈನಲ್‌ ಹಣಾಹಣಿ ರೋಮಾಂಚನ

ನವದೆಹಲಿ
ಕ್ವಾರ್ಟರ್‌ ಫೈನಲ್‌ ಹಣಾಹಣಿ ರೋಮಾಂಚನ

20 Oct, 2017

ಹುಬ್ಬಳ್ಳಿ
ಆಂಧ್ರಕ್ಕೆ ಮಣಿದ ಕರ್ನಾಟಕ ತಂಡ

ಮೊದಲ ಇನಿಂಗ್ಸ್‌ ಮುನ್ನಡೆ ಪಡೆದರೂ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡ ಕರ್ನಾಟಕ ತಂಡ 23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಕ್ರಿಕೆಟ್‌ ಟೂರ್ನಿಯ...

20 Oct, 2017

ಬೆಂಗಳೂರು
ಎಐಟಿಎ ಟೆನಿಸ್‌: ತರುಣ್, ಖುಷಿಗೆ ಪ್ರಶಸ್ತಿ

ಅಮೋಘ ಸಾಮರ್ಥ್ಯದಿಂದ ಆಡಿದ ವಿ. ತರುಣ್ ಗೌಡ ಮತ್ತು ಖುಷಿ ವಿಶ್ವನಾಥ್‌ ಇಲ್ಲಿ ನಡೆದ ಎಐಟಿಎ 14 ವರ್ಷದೊಳಗಿನವರ ಟ್ಯಾಲೆಂಟ್‌ ಸರಣಿ ಟೆನಿಸ್ ಟೂರ್ನಿಯಲ್ಲಿ...

20 Oct, 2017
ಪ್ರೊ ಕಬಡ್ಡಿ:  ಗುಜರಾತ್‌–ಪಲ್ಟನ್ ಹಣಾಹಣಿ

ಪುಣೆ
ಪ್ರೊ ಕಬಡ್ಡಿ: ಗುಜರಾತ್‌–ಪಲ್ಟನ್ ಹಣಾಹಣಿ

20 Oct, 2017