ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಣ್‌, ನದೀಮ್‌ ಸ್ಪಿನ್‌ ಮೋಡಿ

ನ್ಯೂಜಿಲೆಂಡ್‌ ಎದುರು ಭಾರತ ‘ಎ’ ತಂಡಕ್ಕೆ ದಿನದ ಗೌರವ
Last Updated 23 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ವಿಜಯವಾಡ: ಕರಣ್‌ ಶರ್ಮಾ (58ಕ್ಕೆ4) ಮತ್ತು ಶಹಬಾಜ್‌ ನದೀಮ್‌ (39ಕ್ಕೆ4) ಅವರ ಸ್ಪಿನ್‌ ಮೋಡಿಯ ಬಲದಿಂದ ಭಾರತ ‘ಎ’ ತಂಡದವರು ನಾಲ್ಕು ದಿನಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ‘ಎ’ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ್ದಾರೆ.

ಗೋಕರಾಜು ಗಂಗರಾಜು ಕ್ರೀಡಾಂಗಣದಲ್ಲಿ ಶನಿವಾರ ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ ನಾಡಿನ ತಂಡ ಮೊದಲ ಇನಿಂಗ್ಸ್‌ನಲ್ಲಿ 63 ಓವರ್‌ಗಳಲ್ಲಿ 147ರನ್‌ಗಳಿಗೆ ಆಲೌಟ್‌ ಆಯಿತು.

ಪ್ರಥಮ ಇನಿಂಗ್ಸ್‌ ಶುರು ಮಾಡಿರುವ ಕರುಣ್‌ ನಾಯರ್‌ ಬಳಗ ದಿನದಾಟದ ಅಂತ್ಯಕ್ಕೆ 25 ಓವರ್‌ಗಳಲ್ಲಿ 2 ವಿಕೆಟ್‌ಗೆ 71ರನ್‌ ಗಳಿಸಿದೆ.

ಉತ್ತಮ ಆರಂಭ: ಬ್ಯಾಟಿಂಗ್‌ ಆರಂಭಿಸಿದ ಹೆನ್ರಿ ನಿಕೊಲಸ್‌ ಬಳಗಕ್ಕೆ ಜಾರ್ಜ್‌ ವರ್ಕರ್‌ (33; 56ಎ, 4ಬೌಂ) ಮತ್ತು ಜೀತ್‌ ರಾವಲ್‌ (34; 85ಎ, 3ಬೌಂ, 1ಸಿ) ಭದ್ರ ಅಡಿಪಾಯ ಹಾಕಿಕೊಟ್ಟರು. ಇವರು ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 72ರನ್‌ ಸೇರಿಸಿದರು.

22ನೇ ಓವರ್‌ನಲ್ಲಿ ವರ್ಕರ್‌, ಶಹಬಾಜ್‌ ನದೀಮ್‌ಗೆ ವಿಕೆಟ್‌ ನೀಡಿದ ಬಳಿಕ ಪ್ರವಾಸಿ ಬಳಗ ಕುಸಿತದ ಹಾದಿ ಹಿಡಿಯಿತು. ಆ ನಂತರ ಬಂದ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ನೀಡಲು ಅವಸರಿಸಿದರು! ಹೀಗಾಗಿ ತಂಡ 150ರ ಗಡಿಯೊಳಗೆ ಕುಸಿಯಿತು.

ಭಾರತ ‘ಎ’ ತಂಡ ಕೂಡ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು. ಆದರೆ ಕರ್ನಾಟಕದ ಆರ್‌.ಸಮರ್ಥ್‌ (ಬ್ಯಾಟಿಂಗ್‌ 38; 75ಎ, 3ಬೌಂ) ತಂಡಕ್ಕೆ ಆಸರೆಯಾದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌ ‘ಎ’: 63 ಓವರ್‌ಗಳಲ್ಲಿ 147 (ಜಾರ್ಜ್‌ ವರ್ಕರ್‌ 33, ಜೀತ್‌ ರಾವಲ್‌ 34,ಟಿಮ್‌ ಸೀಫರ್ಟ್‌ ಔಟಾಗದೆ 35, ಸ್ಕಾಟ್‌ ಕುಗ್ಗೆಲಿಜಿನ್‌ 17, ಮ್ಯಾಟ್‌ ಹೆನ್ರಿ 14; ಕರಣ್‌ ಶರ್ಮಾ 58ಕ್ಕೆ4, ಶಹಬಾಜ್‌ ನದೀಮ್‌ 39ಕ್ಕೆ4, ಮಹಮ್ಮದ್‌ ಸಿರಾಜ್‌ 30ಕ್ಕೆ2).

ಭಾರತ ‘ಎ’: 25 ಓವರ್‌ಗಳಲ್ಲಿ 2 ವಿಕೆಟ್‌ಗೆ 71 (ಆರ್‌.ಸಮರ್ಥ್‌ ಬ್ಯಾಟಿಂಗ್‌ 38, ಪ್ರಿಯಾಂಕ್‌ ಪಾಂಚಾಲ್‌ 14, ಕರುಣ್‌ ನಾಯರ್‌ ಬ್ಯಾಟಿಂಗ್‌ 7; ಇಶ್‌ ಸೋಧಿ 11ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT