ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ನಾಲ್ಕನೆಯ ಒಂದು ಭಾಗದಷ್ಟು ಮಾತ್ರ ಮೆದುಳು ಇರುವುದರಿಂದ ಅವರು ವಾಹನ ಚಾಲನೆ ಮಾಡಬಾರದು!

Last Updated 24 ಸೆಪ್ಟೆಂಬರ್ 2017, 16:15 IST
ಅಕ್ಷರ ಗಾತ್ರ

ಸೌದಿ ಅರೇಬಿಯಾ: ಮಹಿಳೆಯರನ್ನು ವಾಹನ ಚಲಾಯಿಸಲು ಬಿಡಬಾರದು. ಯಾಕೆಂದರೆ ಅವರಿಗೆ ಇರುವುದು ನಾಲ್ಕನೇ ಒಂದು ಭಾಗದಷ್ಟು ಮೆದುಳು ಎಂದು ಸೌದಿ ಅರೇಬಿಯಾದ ಆಸಿರ್ ಪ್ರದೇಶದ ಮುಖ್ಯಸ್ಥ ಶೇಖ್ ಸಾದ್ ಅಲ್ ಹಜಾರಿ ಅಭಿಪ್ರಾಯಪಟ್ಟಿದ್ದಾರೆ.

ಮೆದುಳಿನ ಶಕ್ತಿಯನ್ನು ಪರಿಗಣಿಸಿದರೆ ಮಹಿಳೆಯರು ಪುರುಷರಿಗೆ ಸಮಾನರಲ್ಲ. ಮಹಿಳೆಯನ್ನು ಸೃಷ್ಟಿ ಮಾಡಿರುವುದೇ ಹಾಗೆ. ಮಹಿಳೆಯರಿಗೆ ಅರ್ಧದಷ್ಟೇ ಮೆದುಳು ಇರುವುದರಿಂದ ವಾಹನ ಚಲಾಯಿಸಲು ಅವರಿಗೆ ಅನುಮತಿ ನೀಡಬಾರದು ಎಂದು ಶೇಖ್ ಸೌದಿ ಅರೇಬಿಯಾ ರಸ್ತೆ ಮತ್ತು ಟ್ರಾಫಿಕ್ ಸುರಕ್ಷಾ ಪ್ರಾಧಿಕಾರವನ್ನು ಒತ್ತಾಯಿಸಿದ್ದಾರೆ.

ಒಂದು ವೇಳೆ ಗಂಡಸರಿಗೆ ಅರ್ಧ ಮೆದುಳು ಇರುತ್ತಿದ್ದರೆ ಅವರಿಗೆ ವಾಹನ ಚಲಾಯಿಸುವ ಪರವಾನಗಿ ಸಿಗುತ್ತಿತ್ತೇ? ಇಲ್ಲ. ಮಹಿಳೆಯರಿಗೆ ನಾಲ್ಕನೆಯ ಒಂದು ಭಾಗದಷ್ಟು ಮಾತ್ರ ಮೆದುಳು ಇದೆ. ಹಾಗಾಗಿ ಅವರನ್ನು ವಾಹನ ಚಲಾಯಿಸಲು ಬಿಡಬಾರದು ಎಂದು ಹಜಾರಿ ಹೇಳಿದ್ದಾರೆ. ವಾಹನ ಚಲಾಯಿಸಲು ಮಹಿಳೆಗೆ ಹಕ್ಕು ಇದೆ ಎಂಬ ಚರ್ಚೆ ಕಾವೇರಿರುವ ಹೊತ್ತಲ್ಲೇ ಹಜಾರಿ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.

ಪ್ರಸ್ತುತ ಈ ದೇಶದ ಕಾನೂನಿನಲ್ಲಿ ಮಹಿಳೆಯರು ವಾಹನ ಚಲಾಯಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ಅಧಿಕಾರಿಗಳು ಇಲ್ಲಿಯವರೆಗೆ ಮಹಿಳೆಯರಿಗೆ ವಾಹನ ಚಲಾಯಿಸಲು ಪರವಾನಗಿ ನೀಡಿಲ್ಲ.

ಹಜಾರಿ ಅವರು ಈ ರೀತಿ ಹೇಳಿಕೆ ನೀಡಿರುವ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಟ್ವಿಟರ್‍‍ನಲ್ಲಿ ಟ್ರೋಲ್‍ಗೊಳಗಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT