ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ಜಂಬೂ ಸವಾರಿ,ಜನರಿಗೆ ದುಬಾರಿ

ಬಸ್‌ ಪ್ರಯಾಣ ದರ ದುಪ್ಪಟ್ಟು l ಖಾಸಗಿ ಬಸ್‌ ಸೀಟುಗಳಿಗೆ ಬೇಡಿಕೆ, ಕೆಲವರಿಂದ ಪರ್ಯಾಯ ವ್ಯವಸ್ಥೆ
Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅರಮನೆನಗರಿ ಮೈಸೂರಿನಲ್ಲಿ ಇದೇ 30ರಂದು ನಡೆಯಲಿರುವ ‘ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ’ ಮೆರವಣಿಗೆ ವೀಕ್ಷಣೆಯು ಉತ್ತರ ಕರ್ನಾ
ಟಕದ ಜನರಿಗೆ ದುಬಾರಿಯಾಗಲಿದೆ.‌

ಮೆರವಣಿಗೆ ವೀಕ್ಷಣೆಗಾಗಿ ಉತ್ತರ ಕರ್ನಾಟಕದ ಬೀದರ್‌, ಕಲಬುರ್ಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ರಾಯಚೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಗದಗ, ಹಾವೇರಿ ಜಿಲ್ಲೆಗಳ ನಿವಾಸಿಗಳು ಮೈಸೂರಿಗೆ ಬರಲು ಸಜ್ಜಾಗಿದ್ದಾರೆ.

ಆದರೆ, ಮೆರವಣಿಗೆಯ ಮುನ್ನಾದಿನ (ಸೆ. 29) ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಮೈಸೂರಿಗೆ ತೆರಳುವ ಖಾಸಗಿ ಬಸ್‌ ಟಿಕೆಟ್‌ ದರ ದುಪ್ಪಟ್ಟಾಗಿದೆ. ಮೈಸೂರಿಗೆ ತೆರಳಲು ದುಬಾರಿ ಹಣ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಖಾಸಗಿ ಬಸ್‌ ಕಂಪೆನಿಗಳ ಕಚೇರಿ, ಏಜೆನ್ಸಿ ಹಾಗೂ ಹಲವು ಜಾಲತಾಣಗಳಲ್ಲಿ ಸೀಟು ಕಾಯ್ದಿರಿಸುವಿಕೆ ಪ್ರಕ್ರಿಯೆ ಆರಂಭವಾಗಿದೆ. ಸಾಮಾನ್ಯ ದಿನಗಳಲ್ಲಿ ಕನಿಷ್ಠ ₹500ರಿಂದ ಗರಿಷ್ಠ ₹ 1,300 ಇರುತ್ತಿದ್ದ ದರ, ಈಗ ಏಕಾಏಕಿ ಕನಿಷ್ಠ ₹1,000ರಿಂದ ಗರಿಷ್ಠ ₹2,400ಕ್ಕೆ ಏರಿಕೆ ಆಗಿದೆ. ದಸರಾ ಮೆರವಣಿಗೆ ನೋಡುವ ತವಕದಲ್ಲಿರುವ ಪ್ರಯಾಣಿಕರು, ಪ್ರಯಾಣ ದರದ ಬಗ್ಗೆ ತಲೆಕೆಡಿಸಿಕೊಳ್ಳದೆ ಸೀಟುಗಳನ್ನು ಕಾಯ್ದಿರಿಸುತ್ತಿದ್ದಾರೆ.

‘ನಮ್ಮ ಕಡೆ ದಸರಾ ಹಬ್ಬದ ಸಡಗರ ಕಡಿಮೆ. ಪ್ರತಿವರ್ಷ ಕುಟುಂಬ ಸಮೇತ ಮೈಸೂರಿಗೆ ಹೋಗಿ ದಸರಾ ನೋಡಿಕೊಂಡು ಬರುತ್ತೇನೆ. ಖಾಸಗಿ ಬಸ್‌ಗಳ ಪ್ರಯಾಣ ದರ ಕಳೆದ ಬಾರಿಗಿಂತ ಹೆಚ್ಚಾಗಿದೆ. ಮೈಸೂರಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಮಕ್ಕಳಿಗೆ ಹೇಳಿದ್ದೆ. ದರ ದುಬಾರಿ ಆಗಿದೆ ಎಂದು ಪ್ರವಾಸ ರದ್ದುಪಡಿಸಿದರೆ, ಅವ
ರಿಗೆ ನಿರಾಶೆಯಾಗಲಿದೆ. ಹೀಗಾಗಿ ಟಿಕೆಟ್‌ ಕಾಯ್ದಿರಿಸಿದ್ದೇನೆ’ ಎಂದು ಹುಬ್ಬಳ್ಳಿಯ ಮಹೇಶ್‌ ಕೊಂಡೊಜಿ ಹೇಳಿದರು.

ಬಹುತೇಕ ಸೀಟು ಭರ್ತಿ: ಕಲಬುರ್ಗಿ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರಿನಿಂದ ಇದೇ 29ರಂದು ರಾತ್ರಿ ಮೈಸೂರಿಗೆ ಹೊರಡುವ ಖಾಸಗಿ ಕಂಪೆನಿ ಬಸ್‌ಗಳ ಬಹುತೇಕ ಸೀಟುಗಳನ್ನು ಪ್ರಯಾಣಿಕರು ಕಾಯ್ದಿರಿಸಿದ್ದಾರೆ. ಸೀಟು ಸಿಗದವರು ಪರ್ಯಾಯ ವಾಹನ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.

‘ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಬಹುತೇಕರು ಕನಿಷ್ಠ ದರದ ಸೀಟುಗಳನ್ನು ಕಾಯ್ದಿರಿಸಿದ್ದಾರೆ. ಗರಿಷ್ಠ ದರದ ಕೆಲವೇ ಸೀಟುಗಳು ಈಗ ಲಭ್ಯ’ ಎಂದು ಖಾಸಗಿ ಬಸ್‌ ಕಂಪೆನಿಯ ಏಜೆಂಟರೊಬ್ಬರು ಹೇಳಿದರು.

‘ಕೆಲವು ಜಿಲ್ಲೆಗಳಲ್ಲಿ ವರ್ಷಪೂರ್ತಿ ಪ್ರಯಾಣಿಕರ ಕೊರತೆ ಎದುರಿಸುತ್ತೇವೆ. ಹಬ್ಬದ ದಿನದಂದು ಬೇಡಿಕೆ ಹೆಚ್ಚುತ್ತದೆ. ಆಗ ಪ್ರಯಾಣದರದ ಬಗ್ಗೆ ಯಾರೊಬ್ಬರು ತಗಾದೆ ತೆಗೆಯುವುದಿಲ್ಲ. ಅದು ನಮಗೆ ದುಡಿಮೆ ಸಮಯ. ಹೊರ ರಾಜ್ಯಗಳಿಂದ ಬಸ್‌ಗಳನ್ನು ತರಿಸಿ ಸೇವೆ ನೀಡಲು ಸಿದ್ಧರಾಗಿದ್ದೇವೆ. ಪ್ರಯಾಣಿಕರು, ಹಚ್ಚಿನ ದರ ನೀಡಿದರೆ ಆ ಬಸ್‌ಗಳನ್ನು ಓಡಿಸಲಿದ್ದೇವೆ’ ಎಂದು ಏಜೆಂಟರೊಬ್ಬರು ಹೇಳಿದರು.

ಸಾರಿಗೆ ನಿಗಮಗಳ ಬಸ್‌ ಪ್ರಯಾಣ ದರ ಸ್ಥಿರ: ಹುಬ್ಬಳ್ಳಿ, ಬೆಳಗಾವಿ, ರಾಯಚೂರು, ಕಲಬುರ್ಗಿಯಿಂದ ನಿತ್ಯವೂ ಮೈಸೂರಿಗೆ ಹೋಗುವ ಸಾರಿಗೆ ನಿಗಮಗಳ ಪ್ರಯಾಣ ದರ ಸ್ಥಿರವಾಗಿದೆ. ಸೆ. 26ರಿಂದ 30ರವರೆಗೆ ಕನಿಷ್ಠ ₹500ರಿಂದ ಗರಿಷ್ಠ ₹995 ದರ ನಿಗದಿಪಡಿಸಲಾಗಿದೆ. ಬೆಳಗಾವಿಯಿಂದ ಕನಿಷ್ಠ ₹554, ಗರಿಷ್ಠ 995 ಇದೆ. ಹುಬ್ಬಳ್ಳಿಯಿಂದ ₹445–₹848, ರಾಯಚೂರಿನಿಂದ ₹603 ದರವಿದೆ. ಇದು ಐರಾವತ, ಕರ್ನಾಟಕ ಸಾರಿಗೆ  ಬಸ್‌ಗಳಿಗೆ ಅನ್ವಯವಾಗಲಿದೆ.

***

ಸೆಪ್ಟೆಂಬರ್‌ 28ರಿಂದ ಅಕ್ಟೋಬರ್‌ 2ರವರೆಗೆ ಸರಣಿ ರಜೆಗಳಿವೆ. ಆ ದಿನಗಳಲ್ಲಿ ಬೆಂಗಳೂರಿನಿಂದ ಹೊರಜಿಲ್ಲೆ, ಹೊರರಾಜ್ಯಗಳಿಗೆ ತೆರಳುವ ಖಾಸಗಿ ಬಸ್‌ಗಳ ಪ್ರಯಾಣ ದರ ಹೆಚ್ಚಳವಾಗಿದೆ.

ಶಿವಮೊಗ್ಗ, ಮಂಗಳೂರು, ಕಲಬುರ್ಗಿ, ಬಳ್ಳಾರಿ, ಬೆಳಗಾವಿ, ಹುಬ್ಬಳ್ಳಿ–ಧಾರವಾಡ ಜಿಲ್ಲೆಗಳ ಲಕ್ಷಾಂತರ ಜನ ನಗರದಲ್ಲಿ ನೆಲೆಸಿದ್ದಾರೆ. ಅವರೆಲ್ಲ ರಜೆ ದಿನದಂದು ಊರಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಬೇಕಾದರೆ ದುಬಾರಿ ಹಣ ಪಾವತಿಸಬೇಕಾಗಿದೆ.

ತಮಿಳುನಾಡು, ಆಂಧ್ರಪ್ರದೇಶದ ನಗರಗಳಿಗೆ ತೆರಳುವ ಬಸ್‌ಗಳ ಪ್ರಯಾಣ ದರವೂ ದುಪ್ಪಟ್ಟಾಗಿದೆ.

ಸಾಮಾನ್ಯ ದಿನಗಳಲ್ಲಿ ₹500ರಿಂದ ₹1,200 ದರವಿರುತ್ತಿತ್ತು. ಇದೇ 28 ಹಾಗೂ 29ರಂದು ಕನಿಷ್ಠ ₹ 900 ಹಾಗೂ ಗರಿಷ್ಠ ₹ 3,400 ಪ್ರಯಾಣದರ ನಿಗದಿ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಪ್ರಾರಂಭವಾಗಿದ್ದು, ಬಹುತೇಕ ಸೀಟುಗಳು ಈಗಾಗಲೇ ಭರ್ತಿ ಆಗಿವೆ.

‘ಇದೇ 28ರಂದು ನಿರ್ಬಂಧಿತ ರಜೆ, 29ರಂದು ಆಯುಧ ಪೂಜೆ, 30 ವಿಜಯದಶಮಿ, ಅ. 1 ಭಾನುವಾರ, ಅ.2 ಗಾಂಧಿ ಜಯಂತಿ  ರಜೆ ಇದೆ. ಪ್ರಯಾಣ ದರ ದುಬಾರಿಯಾದರೂ ಟಿಕೆಟ್‌ ಕಾಯ್ದಿರಿಸಿದ್ದೇನೆ’ ಎಂದು ಖಾಸಗಿ ಕಂಪೆನಿಯ ಉದ್ಯೋಗಿ ರಮಣದೀಪ್‌  ತಿಳಿಸಿದರು.

***

ಮೈಸೂರು ಕಡೆಗೆ (ದರ ₹ಗಳಲ್ಲಿ)

ಹುಬ್ಬಳ್ಳಿಯಿಂದಬೆಳಗಾವಿಯಿಂದಬಳ್ಳಾರಿಯಿಂದರಾಯಚೂರಿನಿಂದ

ಸೆ. 26  900–1,200 1,200–1,600 600–750 750–950

ಸೆ. 27 900–1,200 1,800–2,200 899–1,200 999–1,250

ಸೆ. 28 900–1,200 1,800–2,400 999–1,200 1,299–1,499

ಸೆ. 29 1,100–2,150 1,800–2,400 899–1,200 1,299–1,499

ಸೆ. 30 900–2,2001,800–2,200600–1,100750–950

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT