ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, ಸೆಪ್ಟೆಂಬರ್ 29, 2017

Last Updated 28 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಅ. 15 ರಿಂದ ಪಾನನಿರೋಧ ಶಾಸನ ರದ್ದು
ಬೆಂಗಳೂರು, ಸೆ. 28–
ಅಕ್ಟೋಬರ್‌ 15 ರಿಂದ 1961ರ ಮೈಸೂರು ಪಾನನಿರೋಧ ಶಾಸನ ರಾಜ್ಯದ ಅನೇಕ ಪ್ರದೇಶಗಳಲ್ಲಿ ರದ್ದಾಗುವುದೆಂದು ಗೆಜೆಟ್‌ ಪ್ರಕಟಣೆ ತಿಳಿಸುತ್ತದೆ.

ನಾಣ್ಯದ ಮಳೆ
ನವದೆಹಲಿ,  ಸೆ. 28–
ಇತ್ತೀಚೆಗೆ ರಷ್ಯದಲ್ಲೊಂದು ಕಡೆ ಸುಮಾರು ಒಂದು ಸಾವಿರ ಬೆಳ್ಳಿಯ ನಾಣ್ಯಗಳ ಸುರಿಮಳೆಯಾಯಿತು. ಪ್ರಚಂಡ ಬಿರುಗಾಳಿ ಬಂದಾಗ ಆಕಾಶದ ಕಡೆಯಿಂದ ಸುರಿದ ಈ ನಾಣ್ಯಗಳು ಭಯಂಕರ ವ್ಯಕ್ತಿ ಐವಾನನ ಕಾಲದವು.

ಯಾವುದೋ ಗುಡ್ಡದ ಮೇಲೆ ಇದ್ದಿರಬಹುದಾದ ಈ ನಾಣ್ಯಗಳು ಗಾಳಿಯ ರಭಸಕ್ಕೆ ಸಿಕ್ಕಿ ಕೆಳಕ್ಕೆ ತೂರಿಕೊಂಡು ಬಂದಿರಬಹುದೆಂದು ರಷ್ಯದ ವಾರ್ತಾ ಸಂಸ್ಥೆ ಎಪಿಎನ್‌ ವರದಿ ಮಾಡಿದೆ. ಇಂತಹ ಪ್ರಕರಣಗಳು ಹಿಂದೆಯೂ ನಡೆದಿವೆ.

ಸ್ಪೆಯಿನಿನಲ್ಲಿ ಒಮ್ಮೆ ಧಾನ್ಯದ ಸುರಿಮಳೆಯಾಯಿತು. ಮೊರಾಕೊದಲ್ಲಿ ಬೀಸಿದ ಬಿರುಗಾಳಿಯಿಂದ ನಾಶವಾದ ಮಳಿಗೆಯದು ಈ ಧಾನ್ಯ.

ಬಂಗಾಳದಲ್ಲಿ ಈಗಿನ ಸರ್ಕಾರದ ಬದಲಾವಣೆ ಅನಗತ್ಯ: ಮುಖರ್ಜಿ
ಕಲ್ಕತ್ತ, ಸೆ. 28–
‘ಪಶ್ಚಿಮ ಬಂಗಾಳದ ಈಗಿನ ಸಂಯುಕ್ತರಂಗದ ಸರ್ಕಾರದಲ್ಲಿ ಬದಲಾವಣೆ ಮಾಡಲು ಯಾವುದೇ ಕಾರಣವೂ ನನಗೆ ಗೋಚರಿಸುತ್ತಿಲ್ಲ’ ಎಂದು ಮುಖ್ಯಮಂತ್ರಿ ಶ್ರೀ ಅಜಯಕುಮಾರ್‌ ಮುಖರ್ಜಿ ಅವರು ಇಂದು ಇಲ್ಲಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT