ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬಾಲ್ಯಕ್ಕೆ ಜಾರೋಣ!

Last Updated 4 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ಬಾರ್‌ ಬಾರ್‌ ಆತೀ ಹೈ ಮುಜ್‌ಕೊ ಮಧುರ್‌ ಯಾದ್‌ ಬಚಪನ್‌ ತೇರಿ// ಗಯಾ ಲೇ ಗಯಾ ತು ಜೀವನ್‌ ಕೀ ಸಬ್‌ಸೇ ಮಸ್ತ್‌ ಖುಷಿ ಮೇರಿ’ (ಓ ಬಾಲ್ಯವೇ ನಿನ್ನ ಮಧುರ ನೆನಪು ಮತ್ತೆ ಮತ್ತೆ ಬರುತ್ತಿದೆಯಲ್ಲಾ, ನನ್ನ ಜೀವನದ ಅನನ್ಯ ಖುಷಿ ಕ್ಷಣಗಳನ್ನು ನೀನು ಜತೆಗೆ ಒಯ್ದುಬಿಟ್ಟೆಯಲ್ಲಾ)’ ಎಂದು ಬಾಲ್ಯದ ಕುರಿತು ಉದ್ಗಾರ ತೆಗೆದಿದ್ದಾರೆ ಕವಯಿತ್ರಿಯೊಬ್ಬರು.

ಹೌದು, ಬಾಲ್ಯದ ನೆನಪೆಂದರೆ ಅದೊಂದು ಹೇಳತೀರದ ಸಂಭ್ರಮ. ಕಾಲ ಒಂದುಕ್ಷಣ ಸರ್‍ರನೆ ಜಾರಿದರೆ ಸಾಕು, ಸಣ್ಣ ವಯಸ್ಸಿನಲ್ಲಿ ಖುಷಿಕೊಟ್ಟ ತುಂಟಾಟದ ರಸನಿಮಿಷಗಳು ಮತ್ತೆ ಮನದಂಗಳದಲ್ಲಿ ಮೆರವಣಿಗೆ ಹೊರಡುತ್ತವೆ, ಅಲ್ಲವೆ?

ಹಬ್ಬಕ್ಕಾಗಿ ಅಮ್ಮ ಕಟ್ಟಿಟ್ಟ ಉಂಡಿಯನ್ನು ಕದ್ದು ತಿಂದ ನೆನಪು, ಶಾಲೆಗೆ ಹೋಗಲು ಅಪ್ಪನಿಂದ ಬೆತ್ತದೇಟು ತಿಂದ ನೆನಪು, ಕಣ್ಣಾ ಮುಚ್ಚಾಲೆ, ಮರಕೋತಿಯಾಟ ಆಡಿದ ನೆನಪು, ಹೊಲದಲ್ಲಿ ಶೇಂಗಾ ಸುಟ್ಟು ತಿಂದ ನೆನಪು, ಮಾಲೀಕನ ಜತೆಗೆ ಮನೆಬಾಗಿಲಿಗೆ ಬರುತ್ತಿದ್ದ ಕರಡಿ ಮೇಲೆ ಸವಾರಿ ಮಾಡಿದ ನೆನಪು, ಊರ ಮುಂದಿನ ಹಳ್ಳ ತುಂಬಿ ಹರಿದಾಗ ಈಜುಬಿದ್ದ ನೆನಪು, ಹುಣಸೆಹಣ್ಣು, ಬೆಲ್ಲ, ಜೀರಿಗೆ, ಬೆಳ್ಳುಳ್ಳಿ ಕದ್ದು ತಂದು ಚಿಗಳಿ ಮಾಡಿ ತಿಂದ ನೆನಪು, ಕರೆಯುವಾಗಲೇ ಕೊಟ್ಟಿಗೆಯಲ್ಲಿ ನೊರೆಹಾಲು ಕುಡಿದ ನೆನಪು, ಹೊಸಬಟ್ಟೆ ತೊಟ್ಟು ಸಂಭ್ರಮಿಸಿದ ನೆನಪು... ನೆನಪುಗಳ ಈ ಹೊನಲಿಗೆ ಕೊನೆ–ಮೊದಲೆಲ್ಲಿ? ಅಂತಹ ಆಪ್ತ ನೆನಪುಗಳು ನಿಮ್ಮಲ್ಲೂ ಹೇಳಿಕೊಳ್ಳಲಿದ್ದರೆ ಕಿವಿಗೊಡಲು ‘ಕಾಮನಬಿಲ್ಲು’ ಸಿದ್ಧವಿದೆ. ನಿಮ್ಮ ಬರಹ ನಮ್ಮ ಕೈಸೇರಲು ಕೊನೆಯ ದಿನ ಅಕ್ಟೋಬರ್‌ 28. ವಿಳಾಸಕ್ಕೆ ಏಳನೇ ಪುಟದ ಅಂಚನ್ನು ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT