ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ ಕಲಾಪಗಳಿಂದ ಹೊರಗುಳಿದ ವಕೀಲರು

Last Updated 4 ಅಕ್ಟೋಬರ್ 2017, 19:43 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಅವರ ಆಡಳಿತ ವೈಖರಿ ವಿರೋಧಿಸಿ ವಕೀಲರು ಬುಧವಾರ ಹೈಕೋರ್ಟ್ ಕಲಾಪಗಳಿಂದ ಹೊರಗುಳಿದರು.

ಈ ಕುರಿತಂತೆ ರಾಜ್ಯ ವಕೀಲರ ಪರಿಷತ್‌ ನೀಡಿದ್ದ ಕರೆಗೆ ಉತ್ತಮ ಸ್ಪಂದನ ವ್ಯಕ್ತವಾಯಿತು. ನ್ಯಾಯಪೀಠಗಳು ಎಂದಿನಂತೆ ಬೆಳಿಗ್ಗೆ ಕಲಾಪ ಆರಂಭಿಸಲು ಮುಂದಾದವು. ಆದರೆ, ವಕೀಲರು ಹಾಜರಾಗಲಿಲ್ಲ. ಇದರಿಂದ ದಿನದ ಪಟ್ಟಿಯಲ್ಲಿ ನಮೂದಾಗಿದ್ದ ಪ್ರಕರಣಗಳ ವಿಚಾರಣೆಯನ್ನು ಮುಂದೂಡಲಾಯಿತು.

ಒತ್ತಾಯ:

ಇದೇ 9ರಂದು ನಿವೃತ್ತರಾಗುತ್ತಿರುವ ಮುಖ್ಯ ನ್ಯಾಯಮೂರ್ತಿ ಮುಖರ್ಜಿ ಯಾವುದೇ ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಬಾರದು’ ಎಂದು ಪರಿಷತ್ ಸಹ ಕಾರ್ಯಾಧ್ಯಕ್ಷ ವೈ.ಎಸ್.ಸದಾಶಿವ ರೆಡ್ಡಿ  ಒತ್ತಾಯಿಸಿದ್ದಾರೆ.

ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಕೊರತೆ ಇದ್ದು ಶೀಘ್ರವೇ ಹೊಸ ನೇಮಕಾತಿ ನಡೆಸುವಂತೆ ಬೆಂಗಳೂರು ವಕೀಲರ ಸಂಘವೂ ಒತ್ತಾಯಿಸಿದೆ. ಈ ಕಾರಣಕ್ಕಾಗಿ ಬುಧವಾರ ಕೋರ್ಟ್ ಕಲಾಪಗಳಿಂದ ಹೊರಗುಳಿಯುವಂತೆ ಸಂಘದ ಸದಸ್ಯರಿಗೆ ಅಧ್ಯಕ್ಷ ಎಚ್‌.ಸಿ.ಶಿವರಾಮು ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT