ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌

ಕಲ್ಲೇಶಪ್ಪ, ಅನಿತಾಗೆ ಚಿನ್ನ

ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪುರುಷರ 10,000 ಮೀಟರ್ಸ್‌ ವಿಭಾಗದಲ್ಲಿ ಕೆ.ವಿ ಕಾಲೇಜು ಸ್ಪರ್ಧಿ ಕಲ್ಲೇಶಪ್ಪ 36:45.4 ನಿಮಿಷಗಳಲ್ಲಿ ಗುರಿ ಸೇರುವ ಮೂಲಕ ಮೊದಲಿಗರಾದರು.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಬುಧವಾರ ನಡೆದ 53ನೇ ಅಂತರ ಕಾಲೇಜು ಅಥ್ಲೆಟಿಕ್ಸ ಚಾಂಪಿಯನ್ ಷಿಪ್ ನ ಹ್ಯಾಮರ್ ಥ್ರೂ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ರಾಜಾಜಿನಗರದ ಜಿಎಫ್ ಜಿಸಿ ಕಾಲೇಜಿನ ಗಣೇಶ್.ವಿ. –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್

ಬೆಂಗಳೂರು: ಉತ್ತಮ ಸಾಮರ್ಥ್ಯ ತೋರಿದ ಎಮ್‌.ಜಿ ಕಲ್ಲೇಶಪ್ಪ, ಎನ್‌.ಎಲ್‌ ಅನಿತಾ ಬೆಂಗಳೂರು ವಿಶ್ವವಿದ್ಯಾಲಯದ 53ನೇ ಅಂತರ ಕಾಲೇಜು ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪುರುಷರ 10,000 ಮೀಟರ್ಸ್‌ ವಿಭಾಗದಲ್ಲಿ ಕೆ.ವಿ ಕಾಲೇಜು ಸ್ಪರ್ಧಿ ಕಲ್ಲೇಶಪ್ಪ 36:45.4 ನಿಮಿಷಗಳಲ್ಲಿ ಗುರಿ ಸೇರುವ ಮೂಲಕ ಮೊದಲಿಗರಾದರು. ಮಹಿಳೆಯರ ವಿಭಾಗದಲ್ಲಿ ಶ್ರೀನಿವಾಸಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಪರ್ಧಿ ಅನಿತಾ (48:17.3) ಚಿನ್ನಕ್ಕೆ ಕೊರಳೊಡ್ಡಿದರು.

ಚಿನ್ನ ಗೆದ್ದವರು: ಪುರುಷರ ವಿಭಾಗ: 110ಮೀ ಹರ್ಡಲ್ಸ್‌: ಎಮ್‌.ರಾಜೇಶ್‌ (ಕೆ.ವಿ ಕಾಲೇಜು; ಕಾಲ: 18.7)–1, ಜಾವಲಿನ್ ಥ್ರೋ: ಪವನ್‌ ಯಾದವ್‌ (ವಿಜಯಾ ಕಾಲೇಜು: 47.38ಮೀ). ಲಾಂಗ್ ಜಂಪ್‌: ಪಿ.ಕೆ ತೇಜಸ್ವಿನಿ (ಯುವಿಸಿಇ; 4.96ಮೀ). 100ಮೀ ಹರ್ಡಲ್ಸ್‌: ಪಿ.ಕೆ ತೇಜಸ್ವಿನಿ (ಯುವಿಸಿಇ; 17.5 ಸೆಕೆಂಡ್‌)

Comments
ಈ ವಿಭಾಗದಿಂದ ಇನ್ನಷ್ಟು
ಹೆಣ್ಣು ಮಗುವಿನ ತಂದೆಯಾದ ಚೇತೇಶ್ವರ್‌ ಪೂಜಾರ

ಖುಷಿಯ ಕ್ಷಣ...
ಹೆಣ್ಣು ಮಗುವಿನ ತಂದೆಯಾದ ಚೇತೇಶ್ವರ್‌ ಪೂಜಾರ

23 Feb, 2018
ಮಿಂಚಿನಂತೆ ಓಡಿ ರನ್‌ ಗಳಿಸಲು ಮನೀಷ್‌ಗೆ ಬಿಸಿ ಮುಟ್ಟಿಸಿದ ದೋನಿ: ವಿಡಿಯೊ ವೈರಲ್

ಟ್ವೆಂಟಿ–20 ಕ್ರಿಕೆಟ್‌
ಮಿಂಚಿನಂತೆ ಓಡಿ ರನ್‌ ಗಳಿಸಲು ಮನೀಷ್‌ಗೆ ಬಿಸಿ ಮುಟ್ಟಿಸಿದ ದೋನಿ: ವಿಡಿಯೊ ವೈರಲ್

23 Feb, 2018
ಹಂಗೇರಿಗೆ ಮೊದಲ ಚಿನ್ನದ ಸಂಭ್ರಮ

ಕ್ರೀಡೆ
ಹಂಗೇರಿಗೆ ಮೊದಲ ಚಿನ್ನದ ಸಂಭ್ರಮ

23 Feb, 2018
ಭಾರತಕ್ಕೆ ಪುಟಿದೇಳುವ ಭರವಸೆ

ಬೆಂಗಳೂರು
ಭಾರತಕ್ಕೆ ಪುಟಿದೇಳುವ ಭರವಸೆ

23 Feb, 2018

ಬೆಂಗಳೂರು
ರಾಹುಲ್–ಬಿಎಫ್‌ಸಿ ಒಪ್ಪಂದ ವಿಸ್ತರಣೆ

ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವು ರಾಹುಲ್ ಬೆಕೆ ಅವರ ಒಪ್ಪಂದವನ್ನು 2021ರವರೆಗೆ ವಿಸ್ತರಿಸಿದೆ ಎಂದು ತಂಡದ ಪ್ರಕಟಣೆ ತಿಳಿಸಿದೆ.

23 Feb, 2018