ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳ ಹುಟ್ಟುಹಬ್ಬದ ಖುಷಿಯಲ್ಲಿ ಸನ್ನಿ ಲಿಯೊನ್‌

Last Updated 15 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸನ್ನಿ ಲಿಯೊನ್‌ ಈಗ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸನ್ನಿ ಮಗಳು ನಿಶಾಗೀಗ ಎರಡು ವರ್ಷ. ಈ ಸಂತಸದ ಕ್ಷಣವನ್ನು ಕಳೆಯಲು ಅಮ್ಮ, ಮಗಳು ಅಮೆರಿಕಕ್ಕೆ ಹೋಗಿದ್ದಾರೆ.

ಹುಟ್ಟುಹಬ್ಬವನ್ನು ವಿಶೇಷವಾಗಿಸುವ ತಯಾರಿ ನಡೆಸಿದವರು ಸನ್ನಿ ಪತಿ ಡಾನಿಯವೆಬ್ಬರ್‌. ‘ಹಲೋ ಕಿಟ್ಟಿ’ ಥೀಮ್‌ನಲ್ಲಿ ಹುಟ್ಟುಹಬ್ಬದ ಅಲಂಕಾರ ಮಾಡಿದ್ದರು ಈ ಜೋಡಿ. ಮಗುವಿನ ತಲೆಗೆ ಕಿರೀಟವನ್ನು ಇಟ್ಟು ಕೇಕ್‌ ಕತ್ತರಿಸಿದ್ದಾರೆ.

ಮಗಳಿಗೆ ಉಡುಗೊರೆಯಾಗಿ ಆಕೆಯನ್ನು ಡಿಸ್ನಿ ಲ್ಯಾಂಡಿಗೆ ಕರೆದುಕೊಂಡು ಹೋಗಿದ್ದಾರೆ. ‘ಇದು ಮಗಳ ಮೊದಲ ಪ್ರವಾಸ. ನಿನ್ನ ಕನಸುಗಳೆಲ್ಲಾ ಈಡೇರಲಿ’ ಎಂದು ಸನ್ನಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT