ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ: ರಾಕ್ ಉದ್ಯಾನದಲ್ಲಿ ಗಂಧದ ಮರ ಕಳವು ಯತ್ನ

Last Updated 17 ಅಕ್ಟೋಬರ್ 2017, 9:27 IST
ಅಕ್ಷರ ಗಾತ್ರ

ಆಲಮಟ್ಟಿ (ನಿಡಗುಂದಿ): ಆಲಮಟ್ಟಿಯ ಪ್ರಸಿದ್ಧ ರಾಕ್ ಉದ್ಯಾನದಲ್ಲಿ ಬೆಳೆಸಿದ್ದ ಏಳು ಗಂಧದ ಮರಗಳನ್ನು ದುಷ್ಕರ್ಮಿಗಳು ಕತ್ತರಿಸಿದ್ದು, ತುಂಡುಗಳನ್ನು ಅಲ್ಲಿಯೇ ಎಸೆದು ಹೋದ ಘಟನೆ ಭಾನುವಾರ ಮಧ್ಯರಾತ್ರಿ ನಡೆದಿದೆ.

ಭಾನುವಾರ ರಾತ್ರಿ ರಾಕ್ ಉದ್ಯಾನದ ಪಕ್ಷಿ ಸೆಕ್ಟರ್‌, ಆನೆ ಸೆಕ್ಟರ್‌, ಬುಡಕಟ್ಟು ಸೆಕ್ಟರ್‌ ರಾಕ್‌ ಉದ್ಯಾನದಲ್ಲಿಯೇ ಗಂಧದ ಮರ ಕಳ್ಳತನವಾಗುತ್ತಿರುವುದು ಇದು ನಾಲ್ಕನೇ ಬಾರಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಶ್ವಾನ ದಳ: ಮೇಲಿಂದ ಮೇಲೆ ಗಂಧದ ಮರ ಕಳ್ಳತನವಾಗುತ್ತಿದ್ದನ್ನು ಗಮನಿಸಿ ಇದೇ ಮೊದಲ ಬಾರಿಗೆ ವಿಜಯಪುರದಿಂದ ಶ್ವಾನ ದಳವನ್ನು ಕರೆಸಲಾಗಿತ್ತು. ಆದರೆ ಮಳೆಯಾದ ಕಾರಣ ಯಾವುದೇ ಮಾಹಿತಿ ದೊರೆಯಲಿಲ್ಲ ಎಂದು ಆಲಮಟ್ಟಿ ಪೊಲೀಸರು ತಿಳಿಸಿದರು. ಮುದ್ದೇಬಿಹಾಳ ಆರ್‌ಎಫ್‌ಓ ಶ್ರೀಕಾಂತ ಪೋಳ ಹಾಗೂ ಆಲಮಟ್ಟಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT