ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪ್ರೊ: ₹2,192 ಕೋಟಿ ನಿವ್ವಳ ಲಾಭ

ದ್ವಿತೀಯ ತ್ರೈಮಾಸಿಕದ ಹಣಕಾಸು ಸಾಧನೆ ಪ್ರಕಟ
Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆಯಾಗಿರುವ ವಿಪ್ರೊದ ದ್ವಿತೀಯ ತ್ರೈಮಾಸಿಕದ ನಿವ್ವಳ ಲಾಭವು ಶೇ 5.57ರಷ್ಟು ಹೆಚ್ಚಾಗಿ ₹ 2,192 ಕೋಟಿಗಳಷ್ಟಾಗಿದೆ.

ಬ್ಯಾಂಕಿಂಗ್‌, ಹಣಕಾಸು ಮತ್ತು ವಿಮೆ ಸೇವೆಗಳಲ್ಲಿನ ವರಮಾನವು ಶೇ 8.2ರಷ್ಟು ಏರಿಕೆಯಾಗಿರುವುದರಿಂದ  ಲಾಭದಲ್ಲಿ ಈ ಹೆಚ್ಚಳ ಕಂಡು ಬಂದಿದೆ. ಇದು ಈ ಮೊದಲಿನ ಅಂದಾಜಿಗಿಂತ ಹೆಚ್ಚಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿನ ನಿವ್ವಳ ಲಾಭ ₹ 2,067 ಕೋಟಿಗಳಷ್ಟಿತ್ತು. ಐ.ಟಿ ಸೇವೆಗಳಿಂದ ₹ 13,169 ಕೋಟಿಗಳಷ್ಟು ವರಮಾನ ಬಂದಿದೆ. ಡಿಸೆಂಬರ್‌ಗೆ ಕೊನೆಗೊಳ್ಳಲಿರುವ ಮೂರನೇ ತ್ರೈಮಾಸಿಕದಲ್ಲಿನ ವರಮಾನವು ₹ 13,351 ಕೋಟಿಗಳವರೆಗೆ ಇರಲಿದೆ ಎಂದು ಸಂಸ್ಥೆ ಅಂದಾಜಿಸಿದೆ.

ಉದ್ಯೋಗ ಕಡಿತ: ದ್ವೀತಿಯ ತ್ರೈಮಾಸಿಕದಲ್ಲಿ ಸಂಸ್ಥೆಯ ಉದ್ಯೋಗಿಗಳ ಸಂಖ್ಯೆ 3 ಸಾವಿರದಷ್ಟು ಕಡಿಮೆಯಾಗಿದೆ. ದೇಶಿ ಐ.ಟಿ ಉದ್ದಿಮೆಯಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎನ್ನುವ ವರದಿಗಳ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದೆ.

ಜೂನ್‌ ತಿಂಗಳ ತ್ರೈಮಾಸಿಕದಲ್ಲಿ 1,66,790ರಷ್ಟಿದ್ದ ಉದ್ಯೋಗಿಗಳ ಸಂಖ್ಯೆ, ಸೆಪ್ಟೆಂಬರ್‌ ತಿಂಗಳಾಂತ್ಯಕ್ಕೆ 1,63,759ಕ್ಕೆ ಇಳಿದಿದೆ. ಒಟ್ಟು 3,031 (ಶೇ 1.8) ಉದ್ಯೋಗಿಗಳು ಕಡಿಮೆಯಾಗಿದ್ದಾರೆ. ಈ ಅವಧಿಯಲ್ಲಿ ಯಾವುದೇ ಹೊಸ ಉದ್ಯೋಗಿಯನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ಸಂಸ್ಥೆ ಮಾಹಿತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT