ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಲೇಖಕ ಜಾರ್ಜ್ ಸೌಂದರ್ಸ್‌ಗೆ ಮ್ಯಾನ್ ಬುಕರ್ ಪ್ರಶಸ್ತಿ

ಲಿಂಕನ್ ಇನ್ ದ ಬರ್ಡೊ‘ ಎಂಬ ಕಾದಂಬರಿ ಬರೆದ ಸೌಂದರ್ಸ್
Last Updated 18 ಅಕ್ಟೋಬರ್ 2017, 10:56 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಅಮೆರಿಕದ ಸಣ್ಣ ಕಥೆಗಳ ಲೇಖಕ ಜಾರ್ಜ್ ಸೌಂದರ್ಸ್ ಅವರು 2017ನೇ ಸಾಲಿನ ಮ್ಯಾನ್ ಬುಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಾರ್ಜ್ ಸೌಂದರ್ಸ್ ಅವರು ಬರೆದ ಕಾದಂಬರಿ  ‘ಲಿಂಕನ್ ಇನ್ ದಿ ಬರ್ಡೊ‘(Lincoln in the Bardo)ಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. 

ಈ ಕಾದಂಬರಿಯು ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರನ್ನು ಕುರಿತಾಗಿದ್ದು,  ಲಿಂಕನ್ ಅವರು ತಮ್ಮ ಕಿರಿಯ ಮಗನ ಸಾವಿನ ನಂತರ ಸಮಾಧಿಗೆ ಭೇಟಿ ನೀಡಿದಾಗ ಅವರಲ್ಲಿ ಉಮ್ಮಳಿಸಿದ ನೋವು, ಯಾತನೆಯನ್ನು ಸೌಂದರ್ಸ್ ತಮ್ಮ ಬರವಣಿಗೆಯಲ್ಲಿ ಹಿಡಿದಿಟ್ಟಿದ್ದಾರೆ.

ಜಾರ್ಜ್ ಸೌಂದರ್ಸ್  ಅವರ ಈ ಕಾದಂಬರಿ ನೈಜತೆಗೆ ಹತ್ತಿರವಾಗಿದ್ದು, ತುಂಬಾ ಭಾವಪೂರ್ಣವಾಗಿದೆ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದು, ಈ ಮೂಲಕ ಮ್ಯಾನ್ ಬುಕರ್ ಪ್ರಶಸ್ತಿ ಪಡೆದ ಅಮೆರಿಕದ ಎರಡನೇ ಲೇಖಕ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.

ಈ ವೇಳೆ ಮಾತನಾಡಿದ ಸೌಂದರ್ಸ್ ಅವರು, ‘ಈ ಪ್ರಶಸ್ತಿ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುತ್ತೇನೆ. ನನ್ನ ಈ ಕಾರ್ಯ ಮತ್ತಷ್ಟು ನೆಮ್ಮದಿ ಕೊಟ್ಟಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT