ಟ್ರೇಲರ್‌

ನಿರೀಕ್ಷೆ ಮೂಡಿಸಿದ 'ರಾಜು ಕನ್ನಡ ಮೀಡಿಯಂ'

‘ರಾಜು ಇಸ್‌ ಬ್ಯಾಕ್‌’ ಎಂಬ ಒಕ್ಕಣೆಯಿಂದ ಆರಂಭವಾಗುವ ಟ್ರೇಲರ್, ಸಿನಿಮಾ ಬಗೆಗಿನ ನಿರೀಕ್ಷೆ ಹೆಚ್ಚಿಸುವಂತಿದೆ. ‘ಫಸ್ಟ್‌ ರ‍್ಯಾಂಕ್‌ ರಾಜು’ ಸಿನಿಮಾದ ನಿರ್ದೇಶಕ ನರೇಶ್‌ ಕುಮಾರ್‌ ಈ ಚಿತ್ರಕ್ಕೂ ಸಾರಥ್ಯ ವಹಿಸಿದ್ದಾರೆ. ‘ಫಸ್ಟ್‌ ರ‍್ಯಾಂಕ್‌...’ನ ನಾಯಕ ಗುರುನಂದನ್ ಇಲ್ಲಿಯೂ ಹೀರೊ.

‘ಕಣ್ಣೀರಲಿ ಕಾಡಿಗೆ ಕರಗಿ

ಅಂಗೈ ಮದರಂಗಿ ಒಣಗಿ

ಕಾದಿಹೆ ನಿನಗಾಗಿ ಬರುವೆಯಾ...’

ಕೆಲವೇ ಸೆಕೆಂಡುಗಳಲ್ಲಿ ಮಿಂಚಿ ಮಾಯವಾಗುವ ಈ ಹಾಡಿನ ಸಾಲು ಮನದಾಳದಲ್ಲಿ ಬೆಚ್ಚಗೆ ಇಳಿದುಬಿಡುತ್ತದೆ.

‘ರಾಜು ಕನ್ನಡ ಮೀಡಿಯಂ’ ಚಿತ್ರದ ಟ್ರೇಲರ್ ಕನ್ನಡ ಪ್ರೀತಿಯ ಪಂಚಿಂಗ್‌ ಡೈಲಾಗ್‌ಗಳ ಜೊತೆಗೆ ಹರೆಯದ ಮನಸುಗಳ ನವಿರು ಪ್ರೀತಿಯ ಭಾವುಕ ನೆಲೆಯ ಕಾರಣಕ್ಕೂ ಇಷ್ಟವಾಗುತ್ತೆ.

‘ರಾಜು ಇಸ್‌ ಬ್ಯಾಕ್‌’ ಎಂಬ ಒಕ್ಕಣೆಯಿಂದ ಆರಂಭವಾಗುವ ಟ್ರೇಲರ್, ಸಿನಿಮಾ ಬಗೆಗಿನ ನಿರೀಕ್ಷೆ ಹೆಚ್ಚಿಸುವಂತಿದೆ. ‘ಫಸ್ಟ್‌ ರ‍್ಯಾಂಕ್‌ ರಾಜು’ ಸಿನಿಮಾದ ನಿರ್ದೇಶಕ ನರೇಶ್‌ ಕುಮಾರ್‌ ಈ ಚಿತ್ರಕ್ಕೂ ಸಾರಥ್ಯ ವಹಿಸಿದ್ದಾರೆ. ‘ಫಸ್ಟ್‌ ರ‍್ಯಾಂಕ್‌...’ನ ನಾಯಕ ಗುರುನಂದನ್ ಇಲ್ಲಿಯೂ ಹೀರೊ.

ಕಿಚ್ಚ ಸುದೀಪ್‌ರ ಪಂಚಿಂಗ್ ಸಂಭಾಷಣೆ, ಗುರುನಂದನ್‌ರ ಕನ್ನಡ ಪ್ರೀತಿ, ಕಿರಣ್‌ ರವೀಂದ್ರನಾಥ್‌ರ ಸಂಗೀತದಲ್ಲಿರುವ ಮಾಧುರ್ಯ, ಸಾಧುಕೋಕಿಲಾ- ಕುರಿ ಪ್ರತಾಪ್‌ ಜೋಡಿಯ ಹಾಸ್ಯ, ಅವಂತಿಕಾ ಶೆಟ್ಟಿ- ಆಶಿಕಾರ ಸೌಂದರ್ಯದ ಇಣುಕು ನೋಟವೂ ಟ್ರೇಲರ್‌ನಲ್ಲಿದೆ.

ಟ್ರೇಲರ್‌ ವೀಕ್ಷಿಸಿದ ಕೆಲ ಸಿನಿ ರಸಿಕರು, ಸುದೀಪ್‌ ಸಂಭಾಷಣೆಗೆ ಮೆಚ್ಚುಗೆ ಸೂಚಿಸಿದ್ದಾರೆ. 'ಸಿನಿಮಾ ಹಿಟ್‌ ಆಗುವುದು ಖಂಡಿತಾ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುಮಾರು ಎರಡೂವರೆ ನಿಮಿಷಗಳ ಈ ಟ್ರೇಲರ್ ಅ.17ರಂದು ಯುಟ್ಯೂಬ್‌ಗೆ ಅಪ್‌ಲೋಡ್ ಆಗಿದೆ. ಈವರೆಗೆ ಸುಮಾರು ಮೂರು ಲಕ್ಷ ಜನರು ಇದನ್ನು ಮೆಚ್ಚಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಸ್ಯಾಂಡಲ್‌ವುಡ್‌ ನಿರ್ಮಾಪಕ ಸೇರಿದಂತೆ ಆರು ಮಂದಿ ಲೈಂಗಿಕ ಕಿರುಕುಳ ನೀಡಿದ್ದರು: ಶೃತಿ ಹರಿಹರನ್‌

ಚರ್ಚಾ ಕಾರ್ಯಕ್ರಮ
ಸ್ಯಾಂಡಲ್‌ವುಡ್‌ ನಿರ್ಮಾಪಕ ಸೇರಿದಂತೆ ಆರು ಮಂದಿ ಲೈಂಗಿಕ ಕಿರುಕುಳ ನೀಡಿದ್ದರು: ಶೃತಿ ಹರಿಹರನ್‌

19 Jan, 2018
‘ಮೂಕನಾಯಕ’ಕ್ಕೆ ‘ಯು’ ಪ್ರಮಾಣಪತ್ರ

ಕಲೆ ಮತ್ತು ಸಮಾಜ
‘ಮೂಕನಾಯಕ’ಕ್ಕೆ ‘ಯು’ ಪ್ರಮಾಣಪತ್ರ

19 Jan, 2018
ಯಶಸ್ಸು ಕಂಡಿದ್ದಾರಂತೆ ವಿನಮ್ರ ರಾಜಕಾರಣಿ!

ಸುದ್ದಿಗೋಷ್ಠಿ
ಯಶಸ್ಸು ಕಂಡಿದ್ದಾರಂತೆ ವಿನಮ್ರ ರಾಜಕಾರಣಿ!

19 Jan, 2018
‘ಧರ್ಮಪುರ’ದಲ್ಲಿ ಪ್ರೀತಿ

ಹಾಡುಗಳ ಬಿಡುಗಡೆ
‘ಧರ್ಮಪುರ’ದಲ್ಲಿ ಪ್ರೀತಿ

19 Jan, 2018
ಭಿನ್ನ ಕಥೆಯ ‘ಬ್ರಹ್ಮಾಸ್ತ್ರ’

ಸ್ವಾರಸ್ಯಕರ ಮನರಂಜನೆ
ಭಿನ್ನ ಕಥೆಯ ‘ಬ್ರಹ್ಮಾಸ್ತ್ರ’

19 Jan, 2018