ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ: ಅಮೆರಿಕ ಸಂಸತ್ತಿನಲ್ಲಿ ಪ್ರಸ್ತಾವ

Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತೀಯರ  ಬೆಳಕಿನ ಹಬ್ಬ ದೀಪಾವಳಿಯ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಸಾರುವ ನಿರ್ಣಯವನ್ನು  ಅಮೆರಿಕದ ಸಂಸತ್ತಿನ ಕೆಳಮನೆಯಲ್ಲಿ ಭಾರತ ಮೂಲದ ಸಂಸದ ರಾಜ ಕೃಷ್ಣಮೂರ್ತಿ  ಅವರು ಶುಕ್ರವಾರ ಮಂಡಿಸಿದರು.

ಈ ನಿರ್ಣಯಕ್ಕೆ ಸಂಸದರಾದ ಪ್ರಮೀಳಾ ಜೈಪಾಲ್‌, ತುಳಸಿ ಗಬ್ಬರ್‌, ಅಮಿ ಬೆರಾ, ಜೋ ಕ್ರೌಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬೆರಾ ಮತ್ತು ಜೈಪಾಲ್‌ ಭಾರತ ಮೂಲದ ಸಂಸದರು, ಗಬ್ಬರ್‌ ಅವರು ಕಾಂಗ್ರೆಸ್‌ನ ಮೊದಲ ಹಿಂದೂ ಸಂಸದರು.

‘ಈ ನಿರ್ಣಯ ಮಂಡಿಸಲು ನನಗೆ ಸಂತಸವಾಗುತ್ತಿದೆ. ಹಿಂದೂ, ಸಿಖ್‌, ಜೈನ ಸಮುದಾಯದವರಿಗೆ ಪರಸ್ಪರ ಧನ್ಯವಾದ ಹೇಳಲು, ಕೆಟ್ಟದ್ದರ ವಿರುದ್ಧ ಒಳ್ಳೆಯದು ಗೆಲುವು ಸಾಧಿಸಿದ್ದನ್ನು ಸಂಭ್ರಮಿಸುವ ಸಮಯ ಈ ದೀಪಾವಳಿ’ ಎಂದು ಕೃಷ್ಣಮೂರ್ತಿ ತಿಳಿಸಿದ್ದಾರೆ.

‘ಕಾಂಗ್ರೆಸ್‌ನ ಹಲವು ಮಂದಿ ಮೊದಲ ಬಾರಿಗೆ ಅಮೆರಿಕದಲ್ಲಿ ದೀಪಾವಳಿ ಆಚರಿಸುತ್ತಿದ್ದಾರೆ. ಭಾರತ ಮೂಲದ ಅಮೆರಿಕನ್ನರು, ವಿಶ್ವದಾದ್ಯಂತ ಈ ಹಬ್ಬ ಆಚರಿಸುತ್ತಿರುವ ಜನರಿಗೆ ಈ ನಿರ್ಣಯದ ಮೂಲಕ ಗೌರವ ಸಮರ್ಪಿಸಲಾಗುವುದು’ ಎಂದು  ಅವರು ಹೇಳಿದ್ದಾರೆ.

ಮೇ ಶುಭಾಶಯ– ಲಂಡನ್‌: ದೀಪಾವಳಿ ಹಬ್ಬದ ಪ್ರಯುಕ್ತ  ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಶುಭಾಶಯ ಕೋರಿದ್ದಾರೆ. ‘ದೀಪದ ಹಬ್ಬ ಹಿಂದೂ ಸಮುದಾಯದ ಜೀವನ ವಿಧಾನದ ಪ್ರತಿಬಿಂಬ, ಅವರ ಸಂಸ್ಕೃತಿಯನ್ನು ಸಮರ್ಥವಾಗಿ ಬಿಂಬಿಸುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT