ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌: ದೇಶದ ಮೊದಲ ರೊ–ರೊ ಸಮುದ್ರಯಾನ ಸೇವೆ ಸಮರ್ಪಿಸಿದ ಮೋದಿ

Last Updated 22 ಅಕ್ಟೋಬರ್ 2017, 10:50 IST
ಅಕ್ಷರ ಗಾತ್ರ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗುಜರಾತ್‌ಗೆ ಭೇಟಿ ನೀಡಿದ್ದು, ಗುಜರಾತ್‌ನ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ ಪ್ರಾಂತಗಳಿಗೆ ಜಲ ಸಂಪರ್ಕ ಕಲ್ಪಿಸುವ ದೇಶದ ಮೊದಲ ರೊ–ರೊ ಸಮುದ್ರಯಾನ ಸೇವೆಯನ್ನು ರಾಜ್ಯಕ್ಕೆ ಸಮರ್ಪಿಸಿದರು.

ಹತ್ತು ಪಟ್ಟು ಕುಗ್ಗಲಿದೆ ಪ್ರಯಾಣದ ಅಂತರ
ರೊ–ರೊಗೆ ಚಾಲನೆ ನೀಡುವ ಮೂಲಕ ಸೌರಾಷ್ಟ್ರದ ಭಾವಂಗರ್ ಜಿಲ್ಲೆಯ ಘೋಗ ಮತ್ತು ದಕ್ಷಿಣ ಗುಜರಾತ್‌ನ ದಹೇಜ್ಗಳ ಮಧ್ಯೆ ಸಮುದ್ರಯಾನ ಸೇವೆ ಆರಂಭವಾಯಿತು.

ವಜ್ರ ಮತ್ತು ಜವಳಿ ಉದ್ದಿಮೆಗಳ ಕೇಂದ್ರಗಳಾಗಿ ಈ ಎರಡೂ ನಗರಗಳು ಗುರುತಿಸಿಕೊಂಡಿದ್ದು, ವಾಣಿಜ್ಯ ಕೇಂದ್ರಗಳಾಗಿವೆ. ಹೀಗಾಗಿ ಎರಡೂ ನಗರಗಳ ಮಧ್ಯೆ ಇಲ್ಲಿನ ಜನರ ಓಡಾಟ ಹೆಚ್ಚು. ಈ ಎರಡೂ ನಗರಗಳನ್ನು ಕ್ಯಾಂಬೆ ಕೊಲ್ಲಿಯಲ್ಲಿ ಅರಬ್ಬೀ ಸಮುದ್ರ ಬೇರ್ಪಡಿಸಿದೆ. ಸದ್ಯ ಈ ನಗರಗಳ ಮಧ್ಯೆ ರಸ್ತೆ ಮತ್ತು ರೈಲು ಸಂಪರ್ಕ ಮಾತ್ರವಿದೆ. ಸಮುದ್ರಯಾನ ಸೇವೆಯಿಂದ ಈ ನಗರಗಳ ನಡುವಣ ಪ್ರಯಾಣದ ಅವಧಿ ಹತ್ತು ಪಟ್ಟು ಕಡಿಮೆ ಆಗಲಿದೆ ಎಂದು ಲೆಕ್ಕ ಹಾಕಲಾಗಿದೆ.

ಘೋಗ ಮತ್ತು ದಹೇಜ್ ಮಧ್ಯದ ರಸ್ತೆ ಸಂಪರ್ಕದ ಅಂತರ 365 ಕಿ.ಮೀ ಇದ್ದು, ಬಸ್‌ ಮತ್ತು ರೈಲುಗಳಲ್ಲಿ ಈ ನಗರಗಳ ಮಧ್ಯದ ಪ್ರಯಾಣಕ್ಕೆ 10–12 ಗಂಟೆ ಬೇಕು. ಕಾರುಗಳಲ್ಲಿ ಈ ನಗರಗಳ ಮಧ್ಯದ ಪ್ರಯಾಣಕ್ಕೆ 6–8 ಗಂಟೆ ಬೇಕು. ಎರಡೂ ನಗರಗಳ ನಡುವಣ ಸಮುದ್ರಮಾರ್ಗದ ಅಂತರ 31 ಕಿ.ಮೀ ಇದೆ. ಸಮುದ್ರಯಾನದಲ್ಲಿ ಈ ನಗರಗಳ ಮಧ್ಯದ ಪ್ರಯಾಣಕ್ಕೆ ಒಂದು ಗಂಟೆ ಸಾಕು. ಆದ್ದರಿಂದ, ಯೋಜನೆಯನ್ನು  ₹ 615 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT