ಮೇಯರ್ ವಿರುದ್ಧ ಬಿಜೆಪಿ ಆಕ್ರೋಶ

ತಾಕತ್ತಿದ್ದರೆ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಿ ಎಂದು ಕಣ್ಣೀರು ಹಾಕಿದ ಮಂಗಳೂರು ನಗರ ಪಾಲಿಕೆ ಮೇಯರ್

ಮಂಗಳೂರು ನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಅವರು ತಮ್ಮ ಫ್ಲ್ಯಾಟ್ ನ ಸೆಕ್ಯುರಿಟಿ ಗಾರ್ಡ್ ಮಗುವಿನ  ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿಸಿ ವಿರೋಧ ಪಕ್ಷದ ಬಿಜೆಪಿ ಸದಸ್ಯರು ಪಾಲಿಕೆ ಸಭೆ ನಡೆಯಲು ಅವಕಾಶ ನೀಡದೇ ಇದ್ದಾಗ...

ಮಂಗಳೂರು: ಮಂಗಳೂರು ನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಅವರು ತಮ್ಮ ಫ್ಲ್ಯಾಟ್ ನ ಸೆಕ್ಯುರಿಟಿ ಗಾರ್ಡ್ ಮಗುವಿನ  ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿಸಿ ವಿರೋಧ ಪಕ್ಷದ ಬಿಜೆಪಿ ಸದಸ್ಯರು ಪಾಲಿಕೆ ಸಭೆ ನಡೆಯಲು ಅವಕಾಶ ನೀಡದೇ ಇದ್ದಾಗ, ಕಟೀಲು ದುರ್ಗಾ ಪರಮೇಶ್ವರಿ ಮೇಲೆ ಆಣೆ ಇಟ್ಟು ಕಣ್ಣೀರು ಹಾಕಿದ ಘಟನೆ ಮಂಗಳವಾರ ನಡೆಯಿತು.

ವಿರೋಧ ಪಕ್ಷದವರು ಧರಣಿ ಆರಂಭಿಸಿದ್ದರಿಂದ ೧೦.೩೦ಕ್ಕೆ ಆರಂಭವಾಗಬೇಕಿದ್ದ ಸಭೆ ಆರಂಭ ಆಗಲಿಲ್ಲ. ಮೇಯರ್ ಡೌನ್ ಡೌನ್ ಎಂದು ಕೂಗುತ್ತ ಮೇಯರ್ ಪೀಠದ ಎದುರು ಜಮಾಯಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ತಾಕತ್ತಿದ್ದರೆ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡುವಂತೆ ವಿರೋಧ ಪಕ್ಷಕ್ಕೆ ಸವಾಲು ಹಾಕಿದರು.

ತನ್ನನ್ನು ಮೇಯರ್ ಆಗಿ ನೋಡದೆ ಓರ್ವ ತಾಯಿಯಾಗಿ ನೋಡಬೇಕು ಎಂದು ಭಿನ್ನವಿಸಿಕೊಂಡರು. ಫ್ಲ್ಯಾಟ್ ನ ಸಿಸಿ ಟಿವಿ ಫೂಟೇಜ್ ಪರಿಶೀಲಿಸಬೇಕು. ಯಾರ ಮೇಲೂ ತಾನು ಹಲ್ಲೆ ಮಾಡಿಲ್ಲ ಎಂದು ನಿರಂತರವಾಗಿ ಸಮಜಾಯಿಷಿ ‌ನೀಡುತ್ತ ಕಣ್ಣೀರು ಹಾಕಿದರು.
ಕಾಂಗ್ರೆಸ್‌ ಸದಸ್ಯರು ಡೌನ್ ಡೌನ್ ಬಿಜೆಪಿ ಎಂದು ಪ್ರತಿ ಧರಣಿ ನಡೆಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಬೆಂಕಿಯಲ್ಲಿ ಸಿಲುಕಿದ್ದ 10 ವಿದ್ಯಾರ್ಥಿಗಳ ರಕ್ಷಣೆ!

ಮಂಗಳೂರು
ಬೆಂಕಿಯಲ್ಲಿ ಸಿಲುಕಿದ್ದ 10 ವಿದ್ಯಾರ್ಥಿಗಳ ರಕ್ಷಣೆ!

21 Jan, 2018

ಮಂಗಳೂರು
ಯೇನೆಪೋಯ ಸ್ಪೆಷಾಲಿಟಿ ಆಸ್ಪತ್ರೆಗೆ ಎನ್‌ಎಬಿಎಚ್‌ ಗೌರವ

ರೋಗಿಯ ಆರೈಕೆ, ಔಷಧಿ ನಿರ್ವಹಣೆ, ರೋಗಿಯ ಸುರಕ್ಷತೆ, ವೈದ್ಯಕೀಯ ಫಲಿತಾಂಶಗಳು, ವೈದ್ಯಕೀಯ ದಾಖಲೆಗಳು, ಸೋಂಕು ನಿಯಂತ್ರಣ ಮತ್ತು ಸಿಬ್ಬಂದಿ ನಡವಳಿಕೆ ಸಹಿತ ಹಲವು ವಿಚಾರಗಳಲ್ಲಿ...

21 Jan, 2018
ಮೋದಿ ಸರ್ಕಾರದಿಂದ ಸಂವಿಧಾನಕ್ಕೆ ಗೌರವ; ಸಂವಿಧಾನ ಬದಲಾವಣೆ ಸಾಧ್ಯವಿಲ್ಲ: ಅಠವಳೆ

'ಅನಂತಕುಮಾರ್ ಹೆಗಡೆ ಹೇಳಿಕೆಗೆ ವಿರೋಧವಿದೆ'
ಮೋದಿ ಸರ್ಕಾರದಿಂದ ಸಂವಿಧಾನಕ್ಕೆ ಗೌರವ; ಸಂವಿಧಾನ ಬದಲಾವಣೆ ಸಾಧ್ಯವಿಲ್ಲ: ಅಠವಳೆ

20 Jan, 2018
ಶಿರಾಡಿ ರಸ್ತೆ ಸಂಚಾರ ಇಂದಿನಿಂದ ಬಂದ್‌

ಮಂಗಳೂರು
ಶಿರಾಡಿ ರಸ್ತೆ ಸಂಚಾರ ಇಂದಿನಿಂದ ಬಂದ್‌

20 Jan, 2018

ದಕ್ಷಿಣ ಕನ್ನಡ
ಸಂತ ಸೆಬೆಸ್ಟಿಯನ್ ಚರ್ಚ್‌ಗೆ ಶತಮಾನೋತ್ಸವ ಸಂಭ್ರಮ

ಮಂಗಳೂರಿನ ತೊಕ್ಕೊಟ್ಟಿನ ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಚರ್ಚ್‌ಗೆ ಈಗ ಶತಮಾನೋತ್ಸವದ ಸಂಭ್ರಮ. ಉಳ್ಳಾಲ ಪರಿಸರದ ವಿವಿಧ ಧರ್ಮ ಜಾತಿ ಮತಗಳ ಜನರು ಒಟ್ಟಾಗಿ ಸೇರಿ...

20 Jan, 2018