ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಂಎಫ್‌’ನಲ್ಲಿ ವ್ಯವಸ್ಥಿತವಾಗಿ ಹಣ ವಾಪಸ್‌ ಪಡೆಯುವ ಯೋಜನೆ

Last Updated 31 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವ್ಯವಸ್ಥಿತವಾಗಿ ಹೂಡಿಕೆ ಮಾಡುವುದು ಜಾಣತನದ ಲಕ್ಷಣ. ಬಹುತೇಕ ಸಣ್ಣ ಹೂಡಿಕೆದಾರರು ವ್ಯವಸ್ಥಿತವಾದ ಹೂಡಿಕೆ ಯೋಜನೆ (ಎಸ್‌ಐಪಿ)ಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವುದು ಸಾಮಾನ್ಯವಾಗಿದೆ. ವ್ಯವಸ್ಥಿತವಾಗಿ ಹಣ ವಾಪಸ್‌ ಪಡೆಯುವ ಯೋಜನೆಯು  (systematic withdrawal plan– SWP) ಸಹ ಸಣ್ಣ ಹೂಡಿಕೆದಾರರಿಗೆ ಅನುಕೂಲಕರವಾಗಿದೆ. ಆದರೆ, ಕಾರ್ಯನಿರ್ವಹಣೆಯಲ್ಲಿ ‘ಎಸ್‌ಡಬ್ಲ್ಯುಪಿ’ಯು ‘ಎಸ್‌ಐಪಿ’ ಪರಿಕಲ್ಪನೆಯ ವಿರುದ್ಧವಾಗಿದೆ. ಇಲ್ಲಿ ಹೂಡಿಕೆದಾರರು ತಿಂಗಳಿಗೊಮ್ಮೆ ಅಥವಾ ತ್ರೈಮಾಸಿಕವಾಗಿ ನಿರ್ದಿಷ್ಟ ಮೊತ್ತವನ್ನು ಮ್ಯೂಚುವಲ್‌ ಫಂಡ್‌ನಿಂದ ವಾಪಸ್ ಪಡೆಯುತ್ತಾರೆ.

ನಿಶ್ಚಿತ ಹಣ ವಾಪಸ್‌: ಸಾಲದ ರೂಪದಲ್ಲಿ ಅಥವಾ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದಾಗ ಎಸ್‌ಡಬ್ಲ್ಯುಪಿ ಮೂಲಕ ವಾಪಸ್‌ ಪಡೆಯಲು ಅವಕಾಶಗಳಿವೆ. ಉದಾಹರಣೆಗೆ 1 ಸಾವಿರ ಯೂನಿಟ್‌ಗಳನ್ನು ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದಾಗ ಅದರ ಒಟ್ಟು ಮೌಲ್ಯ (ಎನ್‌ಎವಿ) 10. ಎಸ್‌ಡಬ್ಲ್ಯುಪಿನಲ್ಲಿ ₹ 500ಕ್ಕೆ ಸಹ ಕೋರಿಕೆ ಸಲ್ಲಿಸಬಹುದು. ಇದರಿಂದ  ತಿಂಗಳಲ್ಲಿ 50 ಯೂನಿಟ್‌ಗಳಷ್ಟು ವಾಪಸ್‌ ನೀಡಲಾಗುತ್ತದೆ.

ತೆರಿಗೆ ಲಾಭ: ಬಂಡವಾಳ ಹೂಡಿಕೆ ಮೇಲಿನ ಲಾಭಕ್ಕೆ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್) ಇಲ್ಲ. ಆದ್ದರಿಂದ, ಮ್ಯೂಚುವಲ್‌ ಫಂಡಗಳಲ್ಲಿನ ಹೂಡಿಕೆ ಈ ವಿಭಾಗಕ್ಕೆ ಸೇರುವುದರಿಂದ ಇದು ಹೂಡಿಕೆದಾರರ ಸ್ನೇಹಿಯಾಗಿದೆ. ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಷೇರು ಹೂಡಿಕೆ ಮಾಡಿದಾಗ ತೆರಿಗೆ ಪಾವತಿಸುವಂತಿಲ್ಲ ಮತ್ತು ಅಲ್ಪಾವಧಿಗೆ ಮಾತ್ರ ಬಂಡವಾಳದ ಲಾಭದ ಮೇಲಿನ ತೆರಿಗೆ ಶೇಕಡ 15ರಷ್ಟು ಅನ್ವಯವಾಗುತ್ತದೆ.

ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸುವವರಿಗೆ ಇತರೆ ಹೂಡಿಕೆಗಳ ಆಯ್ಕೆಗಿಂತ ಎಸ್‌ಡಬ್ಲ್ಯುಪಿ ಹೆಚ್ಚು ಅನುಕೂಲಕರ. ಏಕೆಂದರೆ ಎಸ್‌ಡಬ್ಲ್ಯುಪಿನಲ್ಲಿ ತೆರಿಗೆಯನ್ನು ಒಟ್ಟು ಮೌಲ್ಯದ ಆಧಾರದ ಮೇಲೆ ಪಾವತಿಸಲಾಗುತ್ತದೆ. ಇಲ್ಲಿ ಅಸಲು ಅನ್ವಯವಾಗುವುದಿಲ್ಲ.

ನಿಯಮಿತ ಪೂರಕ ಆದಾಯ: ಎಸ್‌ಡಬ್ಲ್ಯುಪಿ ಸ್ಥಿರವಾಗಿ ದೊರೆಯುವ ಆದಾಯದ ಮೂಲವಾಗಿದೆ. ನಿವೃತ್ತಿ ಅಥವಾ ಇತರೆ ಕಾರಣಗಳಿಗೆ ನಿಯಮಿತವಾಗಿ ಆದಾಯ ಇಲ್ಲದಿದ್ದರೆ ಎಸ್‌ಡಬ್ಲ್ಯುಪಿ ಯೋಜನೆಗಳ ಮೂಲಕ ನಿಯಮಿತವಾಗಿ ವೇತನ ಪಡೆಯುವ ರೀತಿಯಲ್ಲಿ ಹಣ ದೊರೆಯುತ್ತದೆ.

ಹಣಕಾಸಿನ ಕೊರತೆ ನೀಗಿಸಲು: ಸಕಾಲಕ್ಕೆ ಯೋಜನೆಗಳಲ್ಲಿ ಹಣ ಹೂಡಿದರೆ ಎಸ್‌ಡಬ್ಲ್ಯುಪಿ ಮೂಲಕ ಅಗತ್ಯವಿದ್ದಾಗ ಹಣ ಪಡೆಯಬಹುದು. ದೀರ್ಘಕಾಲದ ಹಣಕಾಸಿನ ಉದ್ದೇಶಗಳಿಗೂ ಇವುಗಳನ್ನು ಜೋಡಿಸಬಹುದು. ಇದರಿಂದ ನಿವೃತ್ತಿಯ ವರ್ಷಗಳಲ್ಲಿ ಅನುಕೂಲವಾಗುತ್ತದೆ.

ಯಾರಿಗೆ ಉಪಯೋಗ?: ನಿವೃತ್ತಿಯಾದವರಿಗೆ ಅಥವಾ ನಿವೃತ್ತಿ ಸಮೀಪ ಇರುವುವರಿಗೆ ಇದು ಹೆಚ್ಚು ಅನುಕೂಲವಾಗಿದೆ. ನೀವು ಹೂಡಿಕೆದಾರರಾಗಿದ್ದು, ಮ್ಯೂಚುವಲ್‌ ಫಂಡ್‌ನಲ್ಲಿ 10–15 ವರ್ಷಗಳ ದೀರ್ಘಾವಧಿಗೆ ಹಣ ಹೂಡಿದ್ದರೆ ಬಂಡವಾಳದ ಲಾಭವನ್ನು ನಿವೃತ್ತಿಯ ಬಳಿಕ ಪಡೆದು ಅನುಕೂಲಕರವಾದ ಜೀವನ ಸಾಗಿಸಬಹುದು.

‘ಎಸ್‌ಡಬ್ಲ್ಯುಪಿ’ಯು ಕೇವಲ ನಿವೃತ್ತರಿಗೆ ಮಾತ್ರ ಅನ್ವಯವಾಗುವುದಿಲ್ಲ. ಯಾವುದೇ ವಯಸ್ಸಿನವರಿಗೂ ಇದು ಅನ್ವಯವಾಗುತ್ತದೆ. ಆದರೆ, ನಿಮ್ಮ ಆರಂಭದ ಹೂಡಿಕೆ ದೀರ್ಘಾವಧಿಯಲ್ಲೂ ಎಸ್‌ಡಬ್ಲ್ಯುಪಿಗೆ ಅನುಕೂಲಕರವಾಗಿರಬೇಕು. ಹೀಗಾಗಿಯೇ ಸಣ್ಣ ಹೂಡಿಕೆದಾರರನ್ನು ಗಮನದಲ್ಲಿಟ್ಟುಕೊಂಡು ಮ್ಯೂಚುವಲ್‌ ಫಂಡಗಳನ್ನು ರೂಪಿಸಲಾಗಿದೆ. ಎಸ್‌ಐಪಿ ಮತ್ತು ಎಸ್‌ಡಬ್ಲ್ಯುಪಿಗಳನ್ನು ಸಮರ್ಪಕವಾಗಿ ಮತ್ತು ಸಕಾಲಕ್ಕೆ ಬಳಸಿಕೊಂಡು ಹಣಕಾಸಿನ ಕೊರತೆಯನ್ನು ನೀಗಿಸಿಕೊಳ್ಳಬಹುದು.

ಡಿ.ಪಿ. ಸಿಂಗ್‌, (ಎಸ್‌ಬಿಐ ಎಂಎಫ್‌ನ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT