ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ನಲ್ಲಿ ಕ್ಷತ್ರಿಯ ಮಹಾಸಭಾ ಅಧಿವೇಶನ ರಾಜಕೀಯ ಪ್ರಾತಿನಿಧ್ಯ ನೀಡಲು ಒತ್ತಾಯ

Last Updated 3 ನವೆಂಬರ್ 2017, 6:49 IST
ಅಕ್ಷರ ಗಾತ್ರ

ಹಾಸನ: ಭಾವಸಾರ ಕ್ಷತ್ರಿಯ ಮಹಾಸಭಾದ 26ನೇ ರಾಷ್ಟ್ರೀಯ ಅಧಿವೇಶನ ನ.25ರಿಂದ ಎರಡು ದಿನ ಹೈದರಾಬಾದ್‍ನ ಪ್ರದರ್ಶನ ಮೈದಾನದಲ್ಲಿ ನಡೆಯಲಿದೆ  ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮಹದೇವರಾವ್ ಪತಂಗೆ ತಿಳಿಸಿದರು.

ಕರ್ನಾಟಕದಲ್ಲಿ 25 ಲಕ್ಷ ಜನರು ಸೇರಿದಂತೆ ದೇಶದಲ್ಲಿ 1.50 ಕೋಟಿ ಭಾವಸಾರ ಕ್ಷತ್ರಿಯರ ಜನಸಂಖ್ಯೆಯಿದ್ದು, ಸಮುದಾಯದ ಪ್ರಮುಖ ಕಸುಬು ಹೊಲಿಗೆ. ಸಮಾಜವು ಹಿಂದುಳಿದ ವರ್ಗಕ್ಕೆ ಸೇರಿದ್ದು ಸರ್ಕಾರದಿಂದ ಅನೇಕ ಸವಲತ್ತುಗಳು ಸಿಗುತ್ತಿವೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ರಾಜಕೀಯವಾಗಿ ಸಮುದಾಯ ಏಳಿಗೆ ಸಾಧ್ಯವಾಗಿಲ್ಲ. ಆಂಧ್ರಪ್ರದೇಶದಲ್ಲಿ ಒಬ್ಬರು ಶಾಸಕರಾಗಿದ್ದಾರೆ. ನಮಗೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕು. ಸಮಾವೇಶದಲ್ಲಿ 10 ರಿಂದ 12 ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ.

ಇದೇ ವೇಳೆ ಸಮಾಜದ ಅಭಿವೃದ್ಧಿಗೆ ಶ್ರಮಿಸಿದವರಿಗೆ ಜೀವನ್ ಗೌರವ ಎಂಬ ಪ್ರಶಸ್ತಿ ಪ್ರದಾನ, ಸ್ಮರಣ ಸಂಚಿಕೆ ಬಿಡುಗಡೆ ನಡೆಯಲಿ‌ದೆ’ ಎಂದರು. ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಟಿಕಾರೆ, ಕಿಶನ್‍ರಾವ್‌ ಗಡಾಳೆ, ಉಮೇಶ್ ಗುಜ್ಜಾರ್, ಯೋಗೇಂದ್ರ ವರ್ಣಿ, ಖಂಡೇರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT