ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಉದ್ಯೋಗ ತರಬೇತಿಗೆ ಆದ್ಯತೆ

Last Updated 4 ನವೆಂಬರ್ 2017, 8:41 IST
ಅಕ್ಷರ ಗಾತ್ರ

ಯಲಬುರ್ಗಾ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ನಾಲ್ಕು ಲಕ್ಷ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ತರಬೇತಿ ನೀಡಲಾಗಿದ್ದು, ಅವರಲ್ಲಿ ಶೇ 75ರಷ್ಟು ಸ್ವಂತ ಉದ್ಯೋಗ ಕಂಡುಕೊಂಡಿದ್ದಾರೆ ಎಂದು ಸಂಸ್ಥೆ ಪ್ರಾದೇಶಿಕ ವಿಭಾಗ ನಿರ್ದೇಶಕ ಪಿ.ಗಂಗಾಧರ ರೈ ಹೇಳಿದರು.

ಪಟ್ಟಣದಲ್ಲಿ ಈಚೆಗೆ ಆಯೋಜಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸಬಲರಾಗಲಿ ಎಂಬ ಉದ್ದೇಶದಿಂದ ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಲಾಗಿದೆ ಎಂದರು.

ರಾಜ್ಯದಲ್ಲಿ 3.80 ಲಕ್ಷ ಸಂಘಗಳಿಗೆ ವಿವಿಧ ಬ್ಯಾಂಕುಗಳ ಮೂಲಕ ₹5 ಸಾವಿರ ಕೋಟಿ ಸಾಲ ನೀಡಲಾಗಿದೆ. ಸಂಘಗಳ ಮೂಲ ಉದ್ದೇಶ ಶೇ 100ರಷ್ಟು ಈಡೇರಿದ್ದು, ನೆಮ್ಮದಿಯ ಜೀವನಕ್ಕೆ ಕಾರಣವಾಗಿದೆ ಎಂದರು.

ಸಂಘದ ಜಿಲ್ಲಾ ವ್ಯವಸ್ಥಾಪಕ ಮುರಳೀಧರ ಮಾತನಾಡಿ, ಜಿಲ್ಲೆಗಳಲ್ಲಿ 14 ಕಡೆಗಳಲ್ಲಿ ಮದ್ಯವರ್ಜನ ಶಿಬಿರ ಆಯೋಜಿಸಿ ಸುಮಾರು 900 ವ್ಯಸನಿಗಳು ವರ್ಜನ ಮಾಡಿದ್ದಾರೆ. ಆರೋಗ್ಯದ ಕಡೆ ವಿಶೇಷ ಗಮನ ಕೊಡುತ್ತಿರುವ ಸಂಸ್ಥೆಯು ಧರ್ಮಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಆಯುರ್ವೇದ ಆಸ್ಪತ್ರೆ, ಪ್ರಕೃತಿ ಚಿಕಿತ್ಸಾ ಕೇಂದ್ರ ಸ್ಥಾಪನೆಗೊಂಡಿವೆ ಎಂದು ನುಡಿದರು.

ಹಿರೇಮಠದ ಪೀಠಾಧಿಕಾರಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಮದ್ಯ ಸೇವನೆ ಚಟದಿಂದ ಮುಕ್ತರಾದರೆ ಆರೋಗ್ಯ, ಹಣವಂತಾರಾಗಬಹುದು ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಶರಣಪ್ಪ ಅರಿಕೇರಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಅಮರಪ್ಪ ಕಲಬುರ್ಗಿ, ತಹಶೀಲ್ದಾರ್‌ ರಮೇಶ ಅಳವಂಡಿಕರ, ಹಿರಿಯ ಸಹಕಾರಿ ಧುರೀಣ ಶೇಖರಗೌಡ ಉಳ್ಳಾಗಡ್ಡಿ, ಡಾ.ಶರಣಪ್ಪ, ಮುನಿಯಪ್ಪ ಹುಬ್ಬಳ್ಳಿ, ದೇವೇಂದ್ರಪ್ಪ ಬಳೂಟಗಿ, ಬಿಎಂ ಶಿರೂರ, ಅಯ್ಯನಗೌಡ ಶೀಲವಂತರ, ಸಂಗಣ್ಣ ಟೆಂಗಿನಕಾಯಿ, ಎಸ್ಕೆ ದಾನಕೈ, ಸಂಸ್ಥೆಯ ಬಸವರಾಜ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT