ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳ ಅಭಿವೃದ್ಧಿ ಮರೆತ ಸರ್ಕಾರ

Last Updated 6 ನವೆಂಬರ್ 2017, 10:10 IST
ಅಕ್ಷರ ಗಾತ್ರ

ಹುಣಸಗಿ: ಸಮೀಪದ ಕಡದರಾಳ ಗ್ರಾಮದಲ್ಲಿ 60ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ರಾಜುಗೌಡ ಸಮ್ಮುಖದಲ್ಲಿ ಭಾನುವಾರ ಬಿಜೆಪಿಗೆ ಸೇರ್ಪಡೆಯಾದರು.

ರಾಜುಗೌಡ ಅವರು ಕಾರ್ಯಕರ್ತರಿಗೆ ಪಕ್ಷದ ಧ್ವಜ ನೀಡಿ ಸ್ವಾಗತಿಸಿ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳು ಗತಿಸಿದರೂ ಇಂದಿಗೂ ಸುರಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ. ರಸ್ತೆ ಸರಿಯಾಗಿಲ್ಲ. ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದಾಗಿ ಜನರು ಬಿಜೆಪಿ ಸರ್ಕಾರಕ್ಕಾಗಿ ಕಾಯುತ್ತಿದ್ದಾರೆ’ ಎಂದರು.

‘ಪ್ರತಿ ಹಳ್ಳಿಗಳಲ್ಲಿಯೂ ಜನರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು, ಬೂತ್ ಮಟ್ಟದಲ್ಲಿ ಪಕ್ಷ ಬಲವಾಗುತ್ತಿದೆ’ ಎಂದು ತಿಳಿಸಿದರು. ‘ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ದೇಶದ ಬಡವರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದೆ. ವಿಶ್ವಮಟ್ಟದಲ್ಲಿಯೇ ಭಾರತ ಗುರುತಿಸುವಂತೆ ಮಾಡಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಮುಖಂಡ ವಿ.ಸಿ.ಹಿರೇಮಠ ಮಾತನಾಡಿದರು. ಚನ್ನಬಸಯ್ಯ ತಾಳಿಕೋಟೆ, ಕಾಶಿನಾಥ, ಸಿದ್ರಾಮಯ್ಯ ಹಿರೇಮಠ, ಬಸವರಾಜ, ಚನ್ನವೀರಯ್ಯ, ಸಂತೋಷ, ನಾಗಪ್ಪ, ರಾಯಪ್ಪ, ಮುತ್ತಣ್ಣ, ಸಣ್ಣಸಂಗಣ್ಣ, ಅಶೋಕ, ಗೋಪಾಲ, ಪರಸಪ್ಪ ಹರಿಜನ, ಗೋಪಾಲ ಹರಿಜನ, ಶರಣಪ್ಪ ಸೇರಿದಂತೆ 60ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.

ಹುಣಸಗಿ ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಮಾಜಿ ಸದಸ್ಯ ಎಚ್.ಸಿ.ಪಾಟೀಲ, ಬಿಜೆಪಿ ಸುರಪುರ ಮಂಡಲ ಅಧ್ಯಕ್ಷ ಅಮರಣ್ಣ ಹುಡೇದ, ಮುಖಂಡರಾದ ದೇವಣ್ಣ ಮಲಗಲದಿನ್ನಿ, ಸಂಗಣ್ಣ ವೈಲಿ, ಶಾಂತಿಲಾಲ್ ರಾಠೋಡ, ವೆಂಕಟೇಶ ಸಾಹುಕಾರ, ನಂದಣ್ಣ ದಳಪತಿ, ಭೀಮನಗೌಡ ಮಾಲಿಪಾಟೀಲ, ರಾಮನಗೌಡ ವಠಾರ, ಭೀಮನಗೌಡ ತೀರ್ಥ, ಚನ್ನಪ್ಪ ತೀರ್ಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT