ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನಕದಾಸರ ಸಂದೇಶ ಬದುಕಿಗೆ ಪೂರಕ’

Last Updated 7 ನವೆಂಬರ್ 2017, 5:32 IST
ಅಕ್ಷರ ಗಾತ್ರ

ಘಟಪ್ರಭಾ: ವಿದ್ಯಾರ್ಥಿ ಜೀವನಕ್ಕೆ ಪೂರಕವಾದ ಸಂದೇಶಗಳು ಕನಕದಾಸರ ಪದಗಳಲ್ಲಿವೆ. ಇವನ್ನು ಅನುಕರಿಸಿದಲ್ಲಿ ಜೀವನ ಸಾರ್ಥಕವಾಗುತ್ತದೆ. ಕನಕದಾಸರು ಸಮಾಜವನ್ನು ತಿದ್ದುವ ಕೆಲಸ ಮಾಡಿ ಮಹಾನ್‌ ಸಂತ ಎನಿಸಿಕೊಂಡರೆ ಅವರ ಸಂದೇಶ ಇಂದಿಗೂ ಪ್ರಾಮುಖ್ಯ ಪಡೆದಿವೆ ಎಂದು ಮುಖ್ಯೋಪಾಧ್ಯಾಯ ನಾಯಿಕ ಹೇಳಿದರು.
ಕನಕದಾಸ ಜಯಂತಿ ನಿಮಿತ್ತ ಶಾಲೆಯಲ್ಲಿ ಕನಕದಾಸ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕನಕದಾಸರ ಬಗ್ಗೆ ಮಾತನಾಡಿದರು. ಶಿಕ್ಷಕರ ವೃಂದ, ಸಿಬ್ಬಂದಿ ವರ್ಗ ಹಾಗೂ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಲ್ಲಾಪೂರ ಪಿ.ಜಿ: ಇಲ್ಲಿನ ಪಟ್ಟಣ ಪಂಚಾಯ್ತಿ ಕಾರ್ಯಾಲಯದಲ್ಲಿ ಸಂತ ಕನಕದಾಸರ ಜಯಂತಿ ಆಚರಿಸಲಾಯಿತು.

ಡಿ.ಎಂ.ದಳವಾಯಿ ಅವರು ಶ್ರೀ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ದಾಸವರೇಣ್ಯ ಶ್ರೇಷ್ಠ ಶ್ರೀ ಕನಕದಾಸರು ಉತ್ತಮ ಸಮಾಜ ನಿರ್ಮಾಣ ಮಾಡಲು ನಾಡಿನುದ್ದಗಲ ಸುತ್ತಾಡಿ ಶ್ರಮಿಸಿದ ಸಂತರು. ಅವರ ಆದರ್ಶಗಳು ನಮಗೆಲ್ಲ ದಾರಿದೀಪ ಎಂದು ಹೇಳಿದರು.

ಪಟ್ಟಣ ಪಂಚಾಯ್ತಿ ಸದಸ್ಯರಾದ ಸಲೀಮ್ ಕಬ್ಬೂರ, ರಾಮಣ್ಣ ನಾಯಿಕ, ನಾಗರಾಜ ಚಚಡಿ, ಗಂಗಾಧರ ಬಡಕುಂದ್ರಿ, ಇಮ್ರಾನ್‌ ಬಟಕುರ್ಕಿ, ಮಲ್ಲೇಶ ಕೋಳಿ, ಈರಗೌಡ ಕಲಕುಟಗಿ, ಮಾರುತಿ ಹುಕ್ಕೇರಿ, ಗ್ರಾಮ ಲೆಕ್ಕಾಧಿಕಾರಿ ಜಗದೀಶ ಚೂರಿ, ಮುಖ್ಯಾಧಿಕಾರಿ ಕೆ.ಬಿ.ಪಾಟೀಲ, ಗ್ರಾಮಸ್ಥರಾದ ಸುರೇಶ ಪೂಜೇರಿ, ಶಿವಪುತ್ರ ಕೊಗನೂರ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಕೆಂಪಣ್ಣ ಚೌಕಶಿ, ಸುಭಾಸ ಕಾಡದವರ, ಲಕ್ಷ್ಮಣ ಮೇತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT